ಅಣಬೆ ಬೆಳೆ ತಾಂತ್ರಿಕತೆ ತಿಳಿದು ಸ್ವ-ಉದ್ಯೋಗ ಪ್ರಾರಂಭಿಸಿ: ಡಾ.ಆರ್.ಸಿ.ಜಗದೀಶ್
ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ
ಶಿವಮೊಗ್ಗ: ಅಣಬೆ ಒಂದು ಶಿಲೀಂಧ್ರವಾಗಿದ್ದು, ಇದನ್ನು ಕೃಷಿ ತ್ಯಾಜ್ಯದಿಂದ ಬೆಳೆಯಬಹುದಾಗಿದೆ. ಈ ತಾಂತ್ರಿಕತೆ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್. ಸಿ. ಜಗದೀಶ ಕರೆ ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ಐದು ದಿನಗಳ ಕಾಲ ಏರ್ಪಡಿಸಲಾಗಿರುವ ‘ಅಣಬೆ ಬೇಸಾಯ’ ಕುರಿತ ವೃತ್ತಿ ಪರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣಬೆ ಕುರಿತು ವಿವರಗಳನ್ನು ನೀಡಿದರು.
ಹಿರಿಯ ತಾಂತ್ರಿಕ ಅಧಿಕಾರಿ ಡಾ.ನಾಗರಾಜ, ಆರ್ ಮಾತನಾಡಿ, ಇದು ಒಂದು ಸಸಾರಜನಕಯುಕ್ತ ಮತ್ತು ವಿವಿಧ ಅನ್ನಾಂಗಗಳನ್ನು ಹೊಂದಿದ ಹಾಗೂ ಕೊಬ್ಬಿನಾಂಶರಹಿತವಾದ ಆಹಾರ ಪದಾರ್ಥವಾಗಿದ್ದು, ಇದನ್ನು ಎಲ್ಲರೂ ಸೇವಿಸಬಹುದು ಎಂದರು.
ಈ ಅಣಬೆಯಲ್ಲಿ ಸಸಾರಜನಕದ ಅಂಶ ಇರುವುದರಿಂದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಾಣಬರುವ ಸಸಾರಜನಕ ಅಪೌಷ್ಟಿಕತೆಯನ್ನು ನೀಗಿಸಬಹುದು. ಹೃದಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ಮನುಷ್ಯನಿಗೆ ಆಹಾರದಲ್ಲಿ ದಿನಕ್ಕೆ 750 ಗ್ರಾಂ ನಷ್ಟು ಸಸಾರಜನಕದ ಸೇವನೆ ಅವಶ್ಯವಾಗಿದ್ದು, ಸಸಾರಜನಕ ಅಂಶವನ್ನು ಹೊಂದಿರುವ ಬೇಳೆಕಾಳುಗಳ ಉತ್ಪಾದನೆಯೂ ಕಡಿಮೆ ಇರುವುದರಿಂದ, ಸಸಾರಜನಕ ಅಂಶವುಳ್ಳ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಈ ಅಣಬೆಯನ್ನುಆಹಾರದಲ್ಲಿ ಬಳಸಬಹುದು ಎಂದರು.
ಐದು ದಿನಗಳ ತರಬೇತಿಯಲ್ಲಿ ಅಣಬೆಯ ಉಪಯುಕ್ತತೆ, ವಿವಿಧ ಣಬೆ ಪ್ರಬೇಧಗಳ ಉತ್ಪಾದನಾ ತಾಂತ್ರಿಕತೆ, ಚಿಪ್ಪು ಅಣಬೆ ಬೇಸಾಯ ಪದ್ಧತಿ ಮತ್ತು ಬೀಜೋತ್ಪಾದನೆ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಲಾಗುವುದು. ಶಿಬಿರಾರ್ಥಿಗಳನ್ನು ಅಣಬೆ ಪ್ರಯೋಗಾಲಯ, ಜೈವಿಕ ಕೇಂದ್ರ, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಇಲ್ಲಿಗೆ ಭೇಟಿ ಮಾಡಿಸಿ, ಅಣಬೆ ಬೆಳೆಯಲು ದೊರಕುವ ಸೌಲಭ್ಯಗಳ ಬಗ್ಗೆ ಇಲಾಖಾ ಸಿಬ್ಬಂದಿಗಳಿಂದ ಮಾಹಿತಿ ನೀಡಿಸಲಾಗುವುದು. ಅಲ್ಲದೆ, ತರಬೇತಿಯ ನಂತರ ಪ್ರತಿ ಶಿಬಿರಾರ್ಥಿಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಣಬೆ ಬೀಜವನ್ನು ಕೊಟ್ಟು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಕೊಡಲಾಗುವುದು.
ಕಾರ್ಯಕ್ರಮದಲ್ಲಿ ಕುಲಸಚಿವ ಡಾ. ಕೆ.ಸಿ.ಶಶಿಧರ, ಸಹ ಸಂಶೋಧನಾ ನಿರ್ದೇಶಕ ಡಾ.ಎಸ್. ಪ್ರದೀಪ್, ಕೆ.ಶಿ.ನಾ.ಕೃ.ತೋ.ವಿ.ವಿ., ಸಹ ವಿಸ್ತರಣಾ ನಿರ್ದೇಶಕ ಡಾ. ಬಿ. ಸಿ. ಹನುಮಂತಸ್ವಾಮಿ ಮತ್ತು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಸಿ. ಸುನಿಲ್ ಉಪಸ್ಥಿತರಿದ್ದರು.
ಒಟ್ಟು 30 ಶಿಬಿರಾರ್ಥಿಗಳು ಈ ಐದು ದಿನಗಳ ತರಬೇತಿಯಲ್ಲಿ ಭಾಗವಹಿಸಿದ್ದರು.




