ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅತಿ ಹೆಚ್ಚು ಸ್ಥಾನಗಳನ್ನ ಪಡೆಯುತ್ತದೆ. ಸರಿಸುಮಾರು 400 ಸ್ಥಾನಗಳನ್ನು ಪಡೆದುಕೊಳ್ಳುತ್ತದೆ ಎಂದು ಕಳೆದ ಐದು ತಿಂಗಳನಿಂದ 24 ಗಂಟೆಯೂ ಮಾಧ್ಯಮಗಳಲ್ಲಿ ಬಾಯಿ ಬಡದುಕೊಳ್ಳುತ್ತಿದ್ದ ಮಾರಿಕೊಂಡಂತಹ ಅನೇಕ ದೃಶ್ಯ ಮಾಧ್ಯಮದವರು ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ಸದ್ದಡಗಿಸಿಕೊಂಡು ಕುಳಿತಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕಳೆದ ಹತ್ತು ವರ್ಷದಲ್ಲಿ ಆಪರೇಷನ್ ಕಮಲ ಎನ್ನುವಂತಹ ನೀಚ ಪ್ರಜಾಪ್ರಭುತ್ವ ವಿರೋಧಿ ತಂತ್ರಗಾರಿಕೆಯನ್ನು ಅನುಸರಿಸಿ ಅನೇಕ ಚುನಾಯಿತ ಸರ್ಕಾರಗಳನ್ನು ಉರುಳಿಸಿ ತಮ್ಮ ಪಕ್ಷದ ಸರ್ಕಾರಗಳನ್ನಾಗಿಸಿಕೊಂಡ ಪ್ರಜಾಪ್ರಭುತ್ವದ ವಿರೋಧಿ ಕೃತ್ಯದ ಬಗ್ಗೆ ಎಲ್ಲೂ ಮಾತನಾಡದೆ ಅದನ್ನೇ ವೈಭವೀಕರಿಸಿದ ಮಾರಿಕೊಂಡ ಮಾಧ್ಯಮದವರು ಇನ್ನು ಮುಂದಾದರು ಇಂತಹ ನೀಚ ಕೃತ್ಯಗಳನ್ನು ಮಾಡಿದಾಗ ನಿಮ್ಮ ಬಾಯಿಗಳಿಂದ ಸರಿಯಾದ ವಿಮರ್ಶೆಯನ್ನು ಮಾಡಿ ನಿಮ್ಮ ನೈತಿಕತೆಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡಿ. ಈ ಚುನಾವಣೆಯಲ್ಲಿ ಮೋದಿರವರಿಗೆ ಜನ ಸರಿಯಾದ ಪಾಠವನ್ನು ಕಲಿಸಿರುವುದು ಸಹ ಇಂತಹ ಕೃತ್ಯಗಳ ಕಾರಣದಿಂದ ಎಂಬುದನ್ನು ನೆನಪಿನಲ್ಲಿರಲಿ.
ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರು ಮತ್ತು ಅವರ ಬೆಂಬಲಿತ ಸಂಸ್ಥೆಗಳ ಮೇಲೆ ದಾಳಿಯನ್ನು ನಡೆಸಿ ನೈತಿಕವಾಗಿ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಸಾರ್ವಜನಿಕ ವಲಯದಲ್ಲಿ ಅವರ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಮತ್ತೊಂದು ಹೀನ ಕೃತ್ಯವನ್ನು ಕಳೆದ ಹತ್ತು ವರ್ಷದಲ್ಲಿ ಮಾಡಿದಾಗಲೂ ಯಾವುದೇ ರೀತಿಯ ಮಾತನಾಡದೆ ಅದನ್ನೇ ದೊಡ್ಡ ತಂತ್ರವೆಂಬಂತೆ ಹಾಡಿ ಹೊಗಳಿದ ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದಾದರೂ ಇಂತಹ ಹೀನ ಕೃತ್ಯಗಳ ನಡೆದಾಗ ನಿಮ್ಮ ಬಾಯಿಗಳು ತೆರೆದು ನೈತಿಕತೆಯ ಹಿನ್ನೆಲೆಯಲ್ಲಿ ಮಾತನಾಡಿ, ನಿಮ್ಮ ಯೋಗ್ಯತೆಯನ್ನು ಉಳಿಸಿಕೊಳ್ಳಿ
ಮಣಿಪುರ ರಾಜ್ಯದಲ್ಲಿ ಅಲ್ಲಿನ ಮಹಿಳೆಯರು ಅನುಭವಿಸಿದ ಹೇಳಿಕೊಳ್ಳಲಾರದ ನೋವಿನ ಸಂಗತಿಗಳನ್ನು ಅವರಿಗಾದ ಹಿಂಸೆಯನ್ನು ಒಂದು ದಿನವೂ ಮಾಧ್ಯಮಗಳಲ್ಲಿ ಬಿತ್ತರಿಸದೆ ಅವುಗಳು ಯಾವ ಸುದ್ದಿಯೇ ಅಲ್ಲ ಎನ್ನುವ ರೀತಿಯಲ್ಲಿ ಜಾಣ ಕುರುಡುತನವನ್ನು ಪ್ರದರ್ಶಿಸಿದ ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದಾದರು ಮಣಿಪುರ ಹಾಸನ ಮುಂತಾದಂತಹ ಪ್ರದೇಶಗಳಲ್ಲಿ ನಡೆದಿರುವ ಮಹಿಳೆಯರ ಮೇಲಿನ ದಬ್ಬಾಳಿಕೆಗಳ ವಿಚಾರದಲ್ಲಿ ನೈತಿಕತೆಯನ್ನು ಉಳಿಸಿಕೊಂಡು ನಿಜವಾದ ವಿಚಾರವನ್ನು ಜನರಿಗೆ ತೋರಿಸಿ. ನಿಮ್ಮ ಕರ್ತವ್ಯವನ್ನ ಮೆರೆದು ನಿಜವಾದಂತಹ ಮಾಧ್ಯಮದ ಪ್ರತಿನಿಧಿಗಳಾಗಿ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಬಲವಾದಂತಹ ವಿರೋಧ ಪಕ್ಷವನ್ನು ಬಯಸಬೇಕಾದದ್ದು ಆರೋಗ್ಯಕರವಾದ ಪ್ರಜಾಪ್ರಭುತ್ವದ ಲಕ್ಷಣವಾಗಿರುತ್ತದೆ. ಆದರೆ ವಿರೋಧ ಪಕ್ಷದ ನಾಯಕರ ಮೇಲೆ ಅದರಲ್ಲೂ ರಾಹುಲ್ ಗಾಂಧಿ ಅವರನ್ನು ಪ್ರಮುಖವಾಗಿ ಗುರಿಯನ್ನಾಗಿಸಿಕೊಂಡು ಅದೆಷ್ಟು ಬಾರಿ ಕೀಳಾಗಿ ಮಾತನಾಡಿದ್ದೀರಿ? ವಿರೋಧ ಪಕ್ಷದ ನಾಯಕರು ಮತ್ತು ಅಲ್ಲಿನ ಸರ್ಕಾರಗಳ ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಏಕವ್ಯಕ್ತಿಯ ಅಟ್ಟಹಾಸವನ್ನು ಮೆರೆಯಲು ದಾರಿ ಮಾಡಿಕೊಟ್ಟಂತಹ ಮಾರಿಕೊಂಡ ಮಾಧ್ಯಮಗಳೇ ಇನ್ನು ಮುಂದಾದರು ವಿರೋಧ ಪಕ್ಷಗಳ ನಾಯಕರಳ ಸಾಮರ್ಥ್ಯ ಮತ್ತು ಯೋಗ್ಯತೆಯನ್ನು ರಾಜಕಾರಣದ ಗಂಧ ಗಾಳಿ ತಿಳಿಯದ ಒಂದಷ್ಟು ಮಂದಿಯಿಂದ ಮಾತನಾಡಿಸಿ ಅವರ ವ್ಯಕ್ತಿತ್ವಕ್ಕೆ ಮಸಿಬಳೆಯುವಂತಹ ನೀಚ ಕೃತ್ಯವನ್ನು ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದೆ ಮಾಡಬೇಡಿ. ನಿಮಗೆ ಅನುಕೂಲ ಮಾಡಿಕೊಡುತ್ತಾರೆಂದು ವ್ಯಕ್ತಿ ಪೂಜೆಯನ್ನ ಮಾಡುವುದನ್ನು ಬಿಟ್ಟು ಪ್ರಜಾಪ್ರಭುತ್ವದ ಪೂಜೆಯನ್ನ ಮಾಡಿ.
ತಮ್ಮ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಗೆಲುವಿಗಾಗಿ ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ದ್ವೇಷದ ಅಸೂಯೆ ಮಾತುಗಳನ್ನು ಆಡಿ ಅಬ್ಬರಿಸಿದಾಗ ಅವುಗಳಿಗೆ ಎಲ್ಲಿಲ್ಲದ ಪ್ರಚಾರವನ್ನು ಕೊಟ್ಟು ಸಮಾಜದ ಸಾಮರಸ್ಯವನ್ನು ಹಾಳು ಮಾಡುವಂತಹ ಹೀನ ಕೃತ್ಯದಲ್ಲಿ ಪಾಲುದಾರರಾದಂತಹ ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದಾದರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಸ್ವಾರ್ಥಿಗಳು ಮತ ಗಳಿಕೆಗಾಗಿ ಮಾತುಗಳ ನಾಡಿದಾಗ ಅವುಗಳನ್ನು ಬಿತ್ತರಿಸುವ ಮುನ್ನ ಒಂದು ಬಾರಿ ಆತ್ಮವಿಮರ್ಶೆಯನ್ನ ಮಾಡಿಕೊಂಡು ನಿರ್ಧಾರವನ್ನು ಮಾಡಿ.
ಶ್ರಮದ ಬದುಕನ್ನ ನಡೆಸುವ, ಪ್ರತಿಕ್ಷಣವೂ ಜೀವನ ನಿರ್ವಹಣೆಗೆ ಬೆವರು ಸುರಿಸುವ ಕೋಟಿ ಕೋಟಿ ಜನರ ಅಭಿಪ್ರಾಯಗಳನ್ನ ಕೇಳದೆ ನಿಮಗಿಷ್ಟ ಬಂದ ಜನರನ್ನ ನಿಮಗಿಷ್ಟ ಬಂದ ರೀತಿಯಲ್ಲಿ ಮಾತನಾಡಿಸಿ ಅವುಗಳನ್ನೇ ಅಭಿಪ್ರಾಯಗಳೆಂದು ಬಿಂಬಿಸುತ್ತ ಚುನಾವಣೆಯ ಸಮೀಕ್ಷೆಗಳನ್ನ ಮಾಡಿದೆವೆಂದು ಹೊಗಳಿಕೊಳ್ಳುತ್ತಾ ನಿಮ್ಮ ಮಾಧ್ಯಮಗಳಲ್ಲಿ ಜನ ಸಂಪರ್ಕವಿಲ್ಲದ ಒಂದಷ್ಟು ಮಂದಿಯನ್ನ ಕೂಡಿಸಿಕೊಂಡು ನೀವು ಚರ್ಚಿಸಿ ಹೇಳುವ ಅಭಿಪ್ರಾಯಗಳು ಜನ ಅಭಿಪ್ರಾಯವಲ್ಲ ಜನಾಭಿಪ್ರಾಯವೇ ಬೇರೆ, ನಿಮ್ಮ ಧನಾಭಿಪ್ರಾಯವೇ ಬೇರೆ ಎಂಬುದನ್ನ ಚುನಾವಣೆ ಫಲಿತಾಂಶದಿಂದ ಅರಿತುಕೊಂಡಿರುವ ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದಾದರು ಚುನಾವಣೆ ಸಮೀಕ್ಷೆ ಎಂಬ ಕೆಲಸಕ್ಕೆ ಬಾರದ ಈ ಕೃತ್ಯಗಳನ್ನು ಬಿಟ್ಟು ಜನಸಾಮಾನ್ಯರ ಬದುಕಿನ ದುಃಖ ದುಮ್ಮಾನಗಳ ವಿಚಾರದಲ್ಲಿ ಗಂಭೀರವಾಗಿ ದುಡಿಯುವಂತಹ ಕೆಲಸವನ್ನು ಮಾಡಿ ನಿಮ್ಮ ಪತ್ರಿಕಾ ಧರ್ಮವನ್ನು ಉಳಿಸಿಕೊಳ್ಳಿ.
ನೀವು ಹೇಳಿದವರಷ್ಟೇ ನಾಯಕರಲ್ಲ; ನೀವು ಹೊಗಳಿ ಆಟಕ್ಕೇರಿಸುವವರೇ ಮಹಾನ್ ನಾಯಕರಲ್ಲ. ನಿಜವಾದ ಜನನಾಯಕರು ಮಾಧ್ಯಮಗಳ ಮೂಲಕ ಬರುವುದಿಲ್ಲ, ಜನರ ನಡುವೆ ಬರುತ್ತಾರೆ. ಅಂತಹ ಜನರ ನಡುವೆ ಬದುಕುವ ಜನ ನಾಯಕರನ್ನು ಸರಿಯಾದ ರೀತಿಯಲ್ಲಿ ಬಿಂಬಿಸಿ ಇನ್ನು ಮುಂದಾದರು ಮಾರಿಕೊಳ್ಳುವುದನ್ನು ಬಿಟ್ಟು ಮೌಲ್ಯದೊಂದಿಗೆ ಬದುಕಿ.
ನೀವು ಅಂದುಕೊಂಡಂತೆ ಬದುಕು ಕೇವಲ ಭಾವನೆಗಳಲ್ಲ, ಬದುಕಿಗೆ ಬೇಕಾಗಿರುವುದು ಕೇವಲ ಭಾಷಣಗಳಲ್ಲ, ಬದುಕಲು ಬೇಕಿರುವುದು ಧರ್ಮದ ಪ್ರಚೋದನೆಗಳಲ್ಲ, ಬದುಕಲು ಬೇಕಿರುವುದು ನೆಮ್ಮದಿ ಶಾಂತಿ ಮತ್ತು ಕಾಯಕ. ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ. ಪ್ರಚೋದಿಸುವಂತಹ ವಿಚಾರಗಳಿಗೆ ಆದ್ಯತೆಯನ್ನ ಕೊಟ್ಟು ಸಮಾಜದ ಸಾಮರ್ಥ್ಯಕ್ಕೆ ಬೆಂಕಿ ಇಡಬೇಡಿ.
ಮಾರಿಕೊಂಡ ಮಾಧ್ಯಮದವರೇ ಇನ್ನು ಮುಂದಾದರೂ ಸಮಾಜದ ಸಾಮರಸ್ಯವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಭೂಮಿಯ ಮೇಲೆ ಹುಟ್ಟಿರುವ ಮಹನೀಯರ ವಿಚಾರಧಾರೆಗಳನ್ನು ಒಂದಷ್ಟು ನಿಮಿಷ ತೋರಿಸಿ ಸರಿಯಾದ ದಾರಿಯಲ್ಲಿ ಸಾಗಿ.
ಒಂದು ಪಕ್ಷದ ಅಥವಾ ಒಂದು ವ್ಯಕ್ತಿಯ ಪ್ರಚಾರಕರಾಗಿ ದುಡಿಯುವ ಆಸಕ್ತಿ ಇದ್ದರೆ ನೇರವಾಗಿ ನಿಮ್ಮ ಮಾಧ್ಯಮವನ್ನು ನಿರ್ದಿಷ್ಟ ಪಕ್ಷದ ಪ್ರಚಾರ ಮಾಧ್ಯಮವೆಂದು ತಮ್ಮನ್ನು ಒಂದು ಪಕ್ಷದ ನೇರವಾಗಿ ಹೇಳಿಕೊಂಡು ನೆಮ್ಮದಿಯ ಜೀವನವನ್ನು ಮಾಡಿ. ಮುಖವಾಡಗಳನ್ನು ಧರಿಸಿ ಮಾಧ್ಯಮದ ಪ್ರತಿನಿಧಿಗಳೆಂದು ಕಾರ್ಯನಿರ್ವಹಿಸಬೇಡಿ.
ಪತ್ರಿಕಾ ಮತ್ತು ದೃಶ್ಯ ಮಾಧ್ಯಮದಲ್ಲಿ ಈ ನಾಡಿನಲ್ಲಿ ಮತ್ತು ಈ ದೇಶದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನೈತಿಕತೆಯ ಮೌಲ್ಯದೊಂದಿಗೆ ತಮ್ಮ ಕರ್ತವ್ಯವನ್ನ ನಿರ್ವಹಿಸಿ ಇಂದಿಗೂ ಸಹ ಜನರ ಮನಸ್ಸಿನಲ್ಲಿ ಅಪಾರವಾದ ಗೌರವವನ್ನು ಉಳಿಸಿಕೊಂಡಿರುವ ನಿಜವಾದ ಮಾಧ್ಯಮದ ಮಹನೀಯರ ಬದುಕಿನ ವಿಚಾರಗಳನ್ನು ಒಂದು ಬಾರಿ ತಿಳಿದುಕೊಂಡು ಸಾಧ್ಯವಾಗುವುದಾದರೆ ಆ ದಾರಿಯಲ್ಲಿ ಸಾಗಿ. ಇಲ್ಲದಿದ್ದರೆ ನಿಮ್ಮ ನಿಜರೂಪವನ್ನು ನೇರವಾಗಿ ತೋರಿಸುತ್ತಾ ಬದುಕಿ.
ವಿಶ್ವಗುರು ಎಂದವರು ಚುನಾವಣೆಯಲ್ಲಿ ಗೆಲ್ಲಬೇಕಾದರೆ ಬೆವರು ಸುರಿಸಬೇಕಾಯಿತು. ಆದರೆ ನೀವು ಪಪ್ಪು ಎಂದು ಹತ್ತಾರು ವರ್ಷದಿಂದ ಮೂದಲಿಸಿದವರು ಲಕ್ಷ ಲಕ್ಷ ಮತಗಳ ಅಂತರದಲ್ಲಿ ಎರಡೆರಡು ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದರು. ನೀವು ವಿಶ್ವಗುರು ಎಂದವರು ಎಲ್ಲಿಯೂ ಜನರ ನಡುವೆ ಮಾತನಾಡಲೇ ಇಲ್ಲ. ಮಾಧ್ಯಮದವರನ್ನು ಎದುರಿಸಲೇ ಇಲ್ಲ. ಆದರೆ ನೀವು ಪಪ್ಪು ಪಪ್ಪು ಎಂದವರು ದೇಶದಾದ್ಯಂತ ಪಾದಯಾತ್ರೆಯನ್ನ ಮಾಡಿ ಪ್ರತಿದಿನವೂ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಜನರ ನಡುವೆ ಬದುಕಿ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುತ್ತೇವೆಂದು ಹಗಲು ಕನಸು ಕಂಡವರಿಗೆ ಶಕ್ತಿಯುತ ಕಾಂಗ್ರೆಸ್ ಪಕ್ಷವನ್ನ ನಿಮ್ಮೆದುರಿಗೆ ತಂದು ನಿಲ್ಲಿಸುವಂತಹ ಸಾಮರ್ಥ್ಯವನ್ನ ತೋರಿಸಿದ್ದಾರೆ.
- ಕೆ ಎಸ್ ನಾಗರಾಜ್, ಬೆಂಗಳೂರು




