ಆರ್.ಎಸ್.ಎಸ್., ಬಿಜೆಪಿ ಮತ್ತು ತಾಲಿಬಾನಿಗಳೂ ಒಂದೇ: ಸಿದ್ದರಾಮಯ್ಯ

5 years ago

ಬೆಂಗಳೂರು: ಆರ್ ಎಸ್‌ಎಸ್ ನದ್ದು ತಾಲಿಬಾನ್ ಸಂಸ್ಕೃತಿ, ಆರ್ ಎಸ್‌ಎಸ್ ನವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್‌ಎಸ್ ನದ್ದು ತಾಲಿಬಾನ್ ಸಂಸ್ಕೃತಿ, ಆರ್ ಎಸ್‌ಎಸ್ ನವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ, ಆರ್ ಎಸ್‌ಎಸ್ ನವರು ತಾಲಿಬಾನಿಗಳು ಎಂದು ವಾಗ್ದಾಳಿ ನಡೆಸಿದರು.

 ಆರ್ ಎಸ್‌ ಎಸ್, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ. ತಾಲಿಬಾನಿಗಳಿಗೆ ಮನುಷ್ಯತ್ವ ಇಲ್ಲ. ರಾಕ್ಷಸೀಯ ಪ್ರವೃತ್ತಿ ಹೊಂದಿದ್ದಾರೆ. ಅದಕ್ಕೆ ಅವರನ್ನು ತಾಲಿಬಾನಿಗಳು ಎಂದು ಕರೆಯುತ್ತಾರೆ. ಆರ್ ಎಸ್‌ ಎಸ್. ಬಿಜೆಪಿಯವರಿಗೂ ಮನುಷ್ಯತ್ವ ಇಲ್ಲ ಎಂದು ಅವರು ಆರೋಪಿಸಿದರು.

Leave a Reply