ಬೆಳಗಾವಿ: “ನಮ್ಮ ಊರಿಗೆ ನಮ್ಮ ಶಾಸಕರು” ಕಾರ್ಯಕ್ರಮದ ಯಶಸ್ಸಿಗಾಗಿ ಶಾಸಕರಾದ ಪ್ರದೀಪ್ ಈಶ್ವರ್ ಅವರ ಹೆಗಲಿಗೆ ಹೆಗಲಾಗಿ ದುಡಿಯುತ್ತಿರುವ ಚಿಕ್ಕಬಳ್ಳಾಪುರ ತಹಸೀಲ್ದಾರ್ ಅನಿಲ್, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್, ಮಂಚೇನಹಳ್ಳಿ ತಹಸೀಲ್ದಾರ್ ದೀಪ್ತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಯ್ಯ ಅವರ ಶ್ರಮ ಕೂಡ ಶ್ಲಾಘನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
- ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್.ಅಶೋಕ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಇದುವರೆಗೆ ಸುಮಾರು 50 ಹಳ್ಳಿಗಳಿಗೆ ತೆರಳಿ ರಸ್ತೆ, ಚರಂಡಿ, ಬಸ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಪಿಂಚಣಿ, ನಿವೇಶನ ಹೀಗೆ ಸಾರ್ವಜನಿಕರ ನಿತ್ಯ ಬದುಕಿಗೆ ತೊಡಕಾಗಿದ್ದ ಹಲವು ಸಮಸ್ಯೆಗಳನ್ನು ಆಲಿಸಿ, ಪರಿಹರಿಸಿದ್ದಾರೆ. ಈ ಕಾರ್ಯಕ್ರಮ ಇನ್ನಷ್ಟು ಜನರನ್ನು ತಲುಪುವ ಮೂಲಕ ಜನರ ಜೀವನಮಟ್ಟ ಸುಧಾರಿಸಲು ನೆರವಾಗಲಿ ಎಂದು ಆಶಿಸಿದ್ದಾರೆ.




