ಕರ್ನಾಟಕದ ರಾಜಕೀಯದಲ್ಲಿ ನಾವು ಭರವಸೆ ಇಡಬಹುದಾದ ಹೆಣ್ಣು ಮಗಳು ಈಕೆ

2 years ago

ಕುಶಾಲನಗರದ ಸಮೀಪದ ಹಳ್ಳಿಯೊಂದರಿಂದ ಬಂದಿರುವ ನಜ್ಮಾ ಚಿಕ್ಕನೇರಳೆ ಎಂಬ ಈ ಹೆಣ್ಣುಮಗಳನ್ನು ನಾನು ನೇರವಾಗಿ ಭೇಟಿಯಾಗದಿದ್ದರೂ ಈಕೆಯ ಭಾಷಣವನ್ನು ಕೇಳಿದ್ದೀನಿ. ಒಳ್ಳೆಯ ವಾಗ್ಮಿ.

ಸಾರ್ವಜನಿಕ ಬದುಕಿನಲ್ಲಿ ಘನತೆಯ ಬದುಕು ಹೇಗಿರಬೇಕು ಎಂಬುದಕ್ಕೆ ನನ್ನ ಮಗಳ ಸಮಾನಳಾದ ನಜ್ಮಾ ಶ್ರೇಷ್ಠ ಉದಾಹರಣೆಯಾಗಿದ್ದಾಳೆ.

ಜೆ.ಡಿ.ಎಸ್. ಪಕ್ಷದ ಯುವ ವಿಭಾಗದಲ್ಲಿ ಕಾರ್ಯಾಧ್ಯಕ್ಷೆಯಾಗಿದ್ದ ಈಕೆ ಪಕ್ಷಕ್ಕೆ ಯಾವುದೇ ಸ್ವಾರ್ಥವಿಲ್ಲದೆ ತನು ಮನವನ್ನು ಧಾರೆಯೆರೆದಿದ್ದಳು.

ಜೆ.ಡಿ.ಎಸ್. ಬಿ.ಜೆ.ಪಿ. ಎಂಬ ಕೊಳಚೆಗುಂಡಿಗೆ ಬಿದ್ದು ಈಜಾಡಲು ಹೊರಟಾಗ ಮೌನಕ್ಕೆ ಶರಣಾಗಿದ್ದ ನಜ್ಮಾ ಇದೀಗ ತನ್ನ ಅಸಂಖ್ಯಾತ ಯುವ ಪಡೆಯೊಂದಿಗೆ ಕಾಂಗ್ರೇಸ್ ಗೆ ಸೇರ್ಪಡೆಯಾಗಿದ್ದಾಳೆ.

ಈ ಹೆಣ್ಣುಮಗಳು ವಿಧಾನಮಂಡಲದಲ್ಲಿ ಇರಬೇಕಾದ ಪ್ರಖರ ಪ್ರತಿಭೆ. ಕಾಂಗ್ರೇಸ್ ಪಕ್ಷವು ತನ್ನ ಸೋಂಬೇರಿತನದ ಧೋರಣೆಯನ್ನು ಬದಿಗಿರಿಸಿ ಈಕೆಗೆ ಸೂಕ್ತ ಸ್ಥಾನಮಾನ ನೀಡಬೇಕು. ಸಾಧ್ಯವಾದರೆ, ವಿಧಾನಪರಿಷತ್ತಿಗೆ (ಜಗದೀಶ್ ಶೆಟ್ಟರ್ ರಾಜಿನಾಮೆಯಿಂದ ತೆರವಾಗಿರುವ ಸ್ಥಾನ) ನಾಮಕರಣ ಮಾಡಿ ಈ ಯುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ.

-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply