ಚಿತ್ರದುರ್ಗ: ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ವತಿಯಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನ ದಿಂದ ಹಮ್ಮಿಕೊಳ್ಳಲಾಗಿದ್ದ ಸಂತ ಸೇವಾಲಾಲ್ ರ ಮೆರವಣಿಗೆ ವಿಶೇಷ ಮೆರಗು ಪಡೆದುಕೊಂಡದ್ದು ಸಾರ್ವಜನಿಕರ ಗಮನ ಸೆಳೆಯಿತು.
ಬೆಳ್ಳಿ ರಥದಲ್ಲಿ ಸಂತ ಸೇವಾಲಾಲ್, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಗಳನ್ನು ಮೆರವಣಿಗೆ ಮೂಲಕ ಸಂಚರಿಸಲಾಯಿತು.
ಭಾವಚಿತ್ರಗಳ ಮೆರವಣಿಗೆಯನ್ನು ಸಂತ ಸೇವಾಲಾಲ್ ಮಹಾಮಠದ,ಮಠ್ ಕಮೀಟಿ ಅಧ್ಯಕ್ಷರಾದ ಎನ್.ಹನುಮಂತನಾಯ್ಕ ಅವರು ಪುಪ್ಪ ನಮನ ಸಲ್ಲಿಸುವ ಮುಖಾಂತರ ಚಾಲನೆ ನೀಡಿ ಶುಭ ಕೋರಿದರು.
ಚಿತ್ರದುರ್ಗ ನಗರದ ಪ್ರಮುಖ ಬೀದಿಗಳಲ್ಲಿಸೇವಾಲಾಲ್ ಅನುಯಾಯಿಗಳು ಮೆರವಣಿಗೆಯಲ್ಲಿ ಭಾಗವಹಿಸದರು.
ಸಂತ ಸೇವಾಲಾಲ್ ರ ಭಾವಚಿತ್ರಕ್ಕೆ ಮಾಜಿ ಸಚಿವ ಹೆಚ್ ಆಂಜನೇಯ ಮತ್ತು ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ ಪುಷ್ಪ ನಮನ ಸಲ್ಲಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಬಂಜಾರ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ ರಾಘವೇಂದ್ರ ನಾಯ್ಕ ಮತ್ತು ಎನ್.ಜಯದೇವ ನಾಯ್ಕ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂತ ಸೇವಾಲಾಲ್ ಮಠ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನರೇನಹಳ್ಳಿ ಅರುಣ್ ಕುಮಾರ್ ವಹಿಸಿದ್ದರು.
ಉಪನ್ಯಾಸವನ್ನು ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಆರ್.ವಿಶ್ವ ಸಾಗರ್ ಅವರು ನಡೆಸಿಕೊಟ್ಟರು. ಚಳ್ಳಕೆರೆ ತಾಲ್ಲೂಕು ಮುಖಂಡರಾದ ಸಿಇಓ ಕೆ.ಬಿ.ರೂಪನಾಯ್ಕ, ರವಿ, ಮಹಾಂತೇಶ, ಅಶೋಕ ವಲಸೆ ಶಂಕರ್ ನಾಯ್ಕ, ದೇವರಹಳ್ಳಿ ಕುಮಾರ್, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಲೋಕೇಶ್ ,ಪುಟ್ಟ ನಾಯ್ಕ,ಧನಂಜಯನಾಯ್ಕ,ನಂದಿಹಳ್ಳಿ ಬಸವರಾಜ್, ಅವಳಿಹಟ್ಟಿ ಬಸವರಾಜ್ ,ಕುಮಾರ್ ನಾಯ್ಕ, ಗೀತಾ ಹನುಮಂತನಾಯ್ಕ, ಭಾಗ್ಯಬಾಯಿ ಮುಂತಾದವರು ಹಾಜರಿದ್ದರು.




