ಸಂತ ಸೇವಾ ಲಾಲರ 283ನೇ ಜಯಂತಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ

4 years ago

ಬೆಂಗಳೂರು: ಬಂಜಾರ ನೌಕರರ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬಂಜಾರರ ಗುರು ಸಂತ ಸೇವಾಲಾಲರ 283ನೇ ಜಯಂತಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಆಯೋಜಿಸಲಾಯಿತು.

ಜಯಂತಿಯನ್ನು ಸಾಹಿತಿ ಬಿ.ಟಿ.ಲಲಿತಾನಾಯಕ್ ಉದ್ಘಾಟಿಸಿದರು. ರಂಗತಜ್ಞ ಹಾಗೂ ಬಂಜಾರ ನೌಕರರ ಸಂಘದ ಸಾಂಸ್ಕøತಿಕ ರಾಜ್ಯ ಕಾರ್ಯದರ್ಶಿ ಡಾ.ಎ.ಆರ್.ಗೋವಿಂದಸ್ವಾಮಿ, ಮೆಘಾಸಿಟಿ ಅಧ್ಯಕ್ಷ ಎಸ್.ಆರ್.ರಾಜನಾಯಕ್, ಡಾ. ಹರೀಶ್ ನಾಯಕ್, ಬಿಡಿಎ ನೌಕರರ ಸಂಘದ ಪದಾಧಿಕಾರಿಗಳಾದ ಕುಮಾರ್ ನಾಯಕ್, ಲೋಕೇಶ್ ನಾಯಕ್, ಇಂಜಿನಿಯರ್ ಕುಮಾರ್‍ನಾಯ್ಕ್, ಬೆಸ್ಕಾಂ, ಪ್ರಾಧ್ಯಪಕ ಸುರಪ್ಪನಾಯಕ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಂಜಾರ ಕಲಾ ಮೇರವಣಿಗೆ ನಡೆಯಿತು.

Leave a Reply