ಎಐಎಡಿಎಂಕೆ ಗದ್ದುಗೆ ಗುದ್ದಾಟ: ಸೆಲ್ವಂಗೆ ಹಿನ್ನಡೆ, ಪಳನಿಗೆ ಮುನ್ನಡೆ

4 years ago

ಚೆನ್ನೈ: ಎಐಎಡಿಎಂಕೆ ಪಕ್ಷದ ಗದ್ದುಗೆ ಗುದ್ದಾಟದಲ್ಲಿ ಮಾಜಿ ಸಿಎಂ ಒ.ಪನ್ನೀರ್ ಸೆಲ್ವಂಗೆ ಹಿನ್ನಡೆಯಾಗಿದ್ದು, ಮತ್ತೊಬ್ಬ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿಯವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಮದ್ರಾಸ್ ಹೈಕೋರ್ಟ್ ಚುನಾವಣೆಗೆ ಅನುಮತಿ ನೀಡಿದ ನಂತರ 2500ಕ್ಕೂ ಹೆಚ್ಚು ಸದಸ್ಯರು ಸೇರಿದ್ದ ಪಕ್ಷದ ಉನ್ನತ ಸಭೆಯಲ್ಲಿ ಸೆಲ್ವಂ ಬದಲಿಗೆ ಪಳನಿಸ್ವಾಮಿಯವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸಲಾಗಿದೆ. ಪಳನಿಸ್ವಾಮಿಯವರು ನಡೆಸಲು ಕರೆನೀಡಿದ್ದ ಸಭೆಗೆ ತಡೆ ನೀಡುವಂತೆ ಸೆಲ್ವಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.

ಜಯಲಲಿತಾ ಆಪ್ತ ಬಳಗದಲ್ಲಿದ್ದ ಸೆಲ್ವಂ ಎರಡು ಬಾರಿ ಜಯಲಲಿತಾ ಹುದ್ದೆ ತೊರೆಯುವ ಸಮಯ ಬಂದಾಗಿ ಸಿಎಂ ಆಗಿದ್ದರು. ಆದರೆ ಪ್ರಚಲಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೀಗ ಪಕ್ಷದಲ್ಲಿ ಅವರು ಹಿನ್ನೆಲೆಗೆ ಸರಿದಂತಾಗಿದೆ.

Leave a Reply