ವಿದೇಶಿ ಸಂಸ್ಕೃತಿ ಬೇಡ, ಭಾರತೀಯ ಸಂಸ್ಕೃತಿ ಉಳಿಸೋಣ: ರೇಖಾ

4 years ago

ಬೆಂಗಳೂರು: ಗಾಂಧಿನಗರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಮತ್ತು ಶ್ರೀ ಲಲಿತಾ ಕಲಾನಿಕೇತನ ವತಿಯಿಂದ ಗುರು ಶಿಷ್ಯ ಪರಂಪರೆ ಮುಕ್ತಾಯ ಸಮಾರಂಭ ಆಯೋಜಿಸಲಾಗಿತ್ತು

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ರೇಖಾ ಮಾತನಾಡಿ, ಭಾರತೀಯ ಕಲೆಯಲ್ಲಿ ಭರತನಾಟ್ಯ ಪುರಾತನ, ಪ್ರಾಚೀನ ಕಲೆಯಾಗಿದೆ. ವಿದೇಶಿ ಸಂಸ್ಕೃತಿಗೆ ಮಾರುಹೋದ ಯುವ ಜನತೆ ನಮ್ಮ ಭಾರತೀಯ ಸಂಸ್ಕೃತಿ, ಸಂಪ್ರಾದಯ ಮರೆಯುತ್ತಿದ್ದಾರೆ ಎಂದರು.

ನಮ್ಮ ದೇಶದ ಕಲಾ ಪ್ರಕಾರಗಳಾದ ಭರತನಾಟ್ಯ, ಕೂಚುಪುಡಿ ಮತ್ತು ಕರ್ನಾಟಕ, ಹಿಂದೂಸ್ತಾನಿ ಸಂಗೀತ ಉಳಿಸಿ, ಬೆಳಸಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಶ್ರೀ ಲಲಿತಾ ಕಲಾನಿಕೇತನ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.

ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶದ ಆಸಕ್ತಿ ಇರುವ ಮಕ್ಕಳಿಗೆ ಭರತನಾಟ್ಯ ಕಲೆಯನ್ನು ಕಲಿಸಲಾಗುತ್ತಿದೆ. ನಮ್ಮ ಸಂಸ್ಥೆಯಿಂದ ಬಾಲಕ, ಬಾಲಕಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.

ಮಕ್ಕಳಿಂದ ಭರತನಾಟ್ಯ, ಕೂಚಿಪುಡಿ ನೃತ್ಯ, ಭಾರತೀಯ ಕಲೆ ಸಾಹಿತ್ಯ ಸಾರುವ ಕಲಾ ಉತ್ಯವ ನೇರವೇರಿತು.

Leave a Reply