ಕೆಪಿಸಿಸಿ ಪರಿಶಿಷ್ಟ ವಿಭಾಗ ನೂತನ ಕಛೇರಿ ಉದ್ಘಾಟಿಸಿದ ಸತೀಶ್ ಜಾರಕಿಹೊಳಿ

2 years ago

ಬೆಂಗಳೂರು: ಕೆಪಿಸಿಸಿ ಕೇಂದ್ರ ಕಛೇರಿಯಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗ ರಾಜ್ಯ ಕಛೇರಿಯನ್ನು ನೂತನ ಕಛೇರಿ ಉದ್ಘಾಟನೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಚೇರಿ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಮಹಾರಾಷ್ಟ್ರ ಮಾಜಿ ಸಚಿವ, ಅಖಿಲ ಭಾರತ ಪರಿಶಿಷ್ಟ ವಿಭಾಗದ ರಾಷ್ಟ್ರಧ್ಯಕ್ಷ ಶಿವಾಜಿ ರಾವ್ ಮೋಗೆ, ಪರಿಶಿಷ್ಟ ವಿಭಾಗ ರಾಜ್ಯಾಧ್ಯಕ್ಷ ಎಂ.ವಿಜಯನಾಯಕ್ ನೆರವೇರಿಸಿದರು. 

ಇದೇ ವೇಳೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ರಾಜ್ಯದಲ್ಲಿ ಉತ್ತಮ ಸಂಘಟನೆ ಮಾಡಿದ್ದಾರೆ. ಇದರ ಪ್ರತಿಫಲ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿಕ್ಕೆ ಬಂತು ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಲಭಿಸಿವೆ ಎಂದರು.

ಇನ್ನು ವಾಲ್ಮೀಕಿ ನಿಗಮದ ಹಗರಣದ ಕುರಿತು ಪ್ರಸ್ತಾಪಿಸಿದ ಅವರು, ವಿಧಾನಸಭೆಯಲ್ಲಿ ವಾಲ್ಕೀಕಿ ನಿಗಮದ ಹಗರಣ ಸರ್ಕಾರ ಸಮರ್ಥವಾಗಿ ಉತ್ತರ ಕೊಡುತ್ತದೆ ಎಂದರು.

ಜೊತೆಗೆ, ರಾಜ್ಯದಲ್ಲಿ ಡ್ಯಾಮೇಜ್ ಆಗಿರುವ ಸೇತುವೆಗಳನ್ನು ಕೂಡಲೆ ದುರಸ್ತಿ ಮಾಡಲಾಗುವುದು. ಸೇತುವೆಗಳ ದುರಸ್ತಿಗೆ ಹಣದ ಕೊರತೆ ಇಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟೀಕರಣ ನೀಡಿದರು. 

ಶಿವಾಜಿರಾವ್ ಮೋಗೆ ಮಾತನಾಡಿ, ದೇಶದಲ್ಲಿ 6 ಕೋಟಿ ಪರಿಶಿಷ್ಟ ಪಂಗಡ ಸಮುದಾಯದ ಜನಸಂಖ್ಯೆ ಇದೆ. ಕಾಂಗ್ರೆಸ್ ಪಕ್ಷ ಜಿಲ್ಲಾ, ಗ್ರಾಮ ಮತ್ತು ವಿಧಾನಸಭೆ, ಲೋಕಸಭೆ ಎಲ್ಲ ವಿಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಚ ಪಂಗಡ ದೇಶಾದ್ಯಂತ ಸಂಪೂರ್ಣ ಬೆಂಬಲ ನೀಡುತ್ತಿದೆ. ಸಂವಿಧಾನಕ್ಕೆ ಬದ್ಧವಾಗಿ, ಸಂವಿಧಾನ ರಕ್ಷಣೆಗೆ ಪ್ರಥಮ ಆದ್ಯತೆಯಾಗಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ ಎಂದರು.

ಎಂ.ವಿಜಯನಾಯಕ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂವಿಧಾನ ರಕ್ಷಣೆ ಮತ್ತು ಸಂವಿಧಾನ ಬದ್ದವಾಗಿ ಜನರ ಹಿತಕಾಯುವ ಪಕ್ಷ. ಎಲ್ಲ ವರ್ಗ, ಧರ್ಮದವರಿಗೆ ಸರಿಸಮಾನ ಅವಕಾಶ ಕೊಟ್ಟು ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮಹಾನ್ ಕೊಡುಗೆ ನೀಡಿದೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಸಮುದಾಯ ಶೇಕಡ 100ರಷ್ಟು ಕಾಂಗ್ರೆಸ್ ಪಕ್ಷದ ಜೊತೆ ನಿಂತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಪರಿಶಿಷ್ಟ ಪಂಗಡದ ಸಮುದಾಯ ಶ್ರೇಯೋಭಿವೃದ್ದಿಗೆ ಅನುಕೂಲವಾಗಿದೆ. ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ನಿಗಮ, ಮಂಡಳಿಯಲ್ಲಿ ಪರಿಶಿಷ್ಟ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗುವುದು ಎಂದರು.

ಹಿರಿಯ ವಕೀಲ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಮಾಜಿ ಶಾಸಕ ಕೃಷ್ಣಮೂರ್ತಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಧರ್ಮಸೇನ, INBCWF ಅಧ್ಯಕ್ಷ ಜಿ.ಆರ್.ದಿನೇಶ್ ಮತ್ತು ಇಂಟಕ್ ಅಧ್ಯಕ್ಷ ಲಕ್ಷ್ಮಿವೆಂಕಟೇಶ್, ಸೇವಾದಳ ಅಧ್ಯಕ್ಷ ರಾಮಚಂದ್ರ, ಶೌಕತ್ ಅಲಿ, ಪರಿಶಿಷ್ಟ ಪಂಗಡ ವಿಭಾಗದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply