ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ್ ಜೋಷಿ ಭರವಸೆ

4 years ago

ಮಂಡ್ಯ: ಅಖಿಲ ಕರ್ನಾಟಕ ಸಾಂಸ್ಕೃತಿಕ ಒಕ್ಕೂಟ ಮಂಡ್ಯದಲ್ಲಿ ನಡೆದ ಸಂಘಟಕ ಸಾಹಿತಿ ಡಾ ಜಗನ್ನಾಥ್ ಶೆಟ್ಟಿ ರಚನೆಯ ಹಿಂದುಳಿದ ವರ್ಗಗಳ ಹರಿಕಾರ ಡಿ ದೇವರಾಜ ಅರಸು ಅವರ ಕುರಿತು ಕರ್ನಾಟಕದ ಧ್ರುವತಾರೆ ಪುಸ್ತಕವನ್ನು ಹಿರಿಯ ರಾಜಕಾರಣಿ ಜಯಪ್ರಕಾಶ್ ಹೆಗಡೆ, ಮಾಜಿ ಸಚಿವ ಎಂ ಎಸ್ ಆತ್ಮಾನಂದ, ಭಾರತಿ ಅರಸು, ಡಾ ಮುದ್ದೆ ಗೌಡ, ಮಧು ಜಿ ಮಾದೇಗೌಡ, ಡಾ ಮಹೇಶ್ ಜೋಶಿ ಬಿಡುಗಡೆ ಮಾಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಹೇಶ್ ಜೋಶಿ, ಮಂಡ್ಯದಲ್ಲಿ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳ ಘಟನೆಗಳನ್ನು ಮೆಲುಕು ಹಾಕಿದರು. ಅರಸುವರು ಸಹ ಸಮ್ಮೇಳನದಲ್ಲಿ ಭಾಗವಹಿಸಿದ ಸಂಗತಿಯನ್ನು ತಿಳಿಸಿದರು. ಜೊತೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿ, ಕಸಾಪ ಚುನಾವಣೆಯಲ್ಲಿ ಮಂಡ್ಯ ಭಾಗದ ಕಸಾಪ ಸದಸ್ಯ ಬಂಧುಗಳು ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ನನಗೆ ಹೆಚ್ಚಿನ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಜೋಶಿಯವರಿಗೆ ಒಕ್ಕೂಟದ ಶ್ರೀನಿವಾಸ್ ಶೆಟ್ಟಿ ಸೇರಿದಂತೆ ಎಲ್ಲರೂ ಶುಭಕೋರಿದರು. ಕರವೇ ಮುಖಂಡ ಗೋ ಮೂರ್ತಿ ಯಾದವ್, ನೇ ಭ ರಾಮಲಿಂಗ ಶೆಟ್ಟಿ ಮತ್ತು ಇತರರು ಭಾಗವಹಿಸಿದ್ದರು.

Leave a Reply