ಸಾರ್ವಜನಿಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಎಸ್.ಸುರೇಶ್ ಕುಮಾರ್ ಚರ್ಚೆ

3 years ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್ ನಲ್ಲಿ ಮಾಜಿ ಶಿಕ್ಷಕ ಸಚಿವ ಎಸ್.ಸುರೇಶ್ ಕುಮಾರ್ ಸಾರ್ವಜನಿಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಚಹ ಸವಿಯುತ್ತಾ ಚುನಾವಣೆ ಕುರಿತು ಮತ್ತು ನಾಗರಿಕರ ಜೊತೆಯಲ್ಲಿ ಚರ್ಚೆ ಮಾಡಿದರು.

ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ಮಾತನಾಡಿ, ಅಭಿವೃದ್ದಿಯೆ ಮೂಲಮಂತ್ರ, ಅಭಿವೃದ್ದಿ ಕೆಲಸ ನೋಡಿ ಮತಯಾಚನೆ ಮಾಡಲಿದ್ದೇವೆ. ಕೇಂದ್ರ ಸರ್ಕಾರ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ದೇಶ ಆರ್ಥಿಕವಾಗಿ ಸಧೃಡವಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಹಾಗೂ ಕಳೆದ ಐದು ವರ್ಷಗಳಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳ ಮನೆ,ಮನೆಗೆ ತಲುಪಿಸಿ, ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುತ್ತೇವೆ ಎಂದು ಹೇಳಿದರು.

ಮಂಗಳವಾರ 18ನೇ ತಾರೀಖು ಬೆಳಗ್ಗೆ 10 ಗಂಟೆಗೆ
ಶ್ರೀರಾಮಮಂದಿರದಲ್ಲಿರುವ ಶ್ರೀರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಡಾ.ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ನಮ್ಮ ಜೊತೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯೆ ದೀಪಾ ನಾಗೇಶ್, ಮಂಡಲದ ಉಪಾಧ್ಯಕ್ಷ ಬಿ.ಎನ್.ಶ್ರೀನಿವಾಸ್, ಬಿಜೆಪಿ ಮುಖಂಡರುಗಳಾದ ಸತೀಶ್ ಭಗವಾನ್ ಕಿರಣ್, ಮುನ್ನಭಾಯಿ, ಮೋಹನ್ ರಾಜ್ ಅಮಿತ್ ಜೈನ್, ಭರತ್ ಗಾಂಧಿ, ವೇಲು, ಪುಟ್ಚರವರುಗಳು ಭಾಗವಹಿಸಿದ್ದರು.

Leave a Reply