ರಾಮಮಂದಿರಕ್ಕಿಂತ ರೊಟ್ಟಿ ಮುಖ್ಯ: ನಾನಾ ಪಾಟೇಕರ್

7 years ago

ಮುಂಬೈ: ರಾಮಮಂದಿರಕ್ಕಿಂತ ರೊಟ್ಟಿ ಮುಖ್ಯ ಎಂದು ಬಹುಭಾಷಾ ನಟ ನಾನಾಟ ಪಾಟೇಕರ್ ಹೇಳಿದ್ದಾರೆ.

ತಮ್ಮ ಎನ್.ಜಿ.ಒ ವತಿಯಿಂದ ಪುಣೆ ಬಳಿಯ ಖಡಕ್ವಾಸ್ಲಾ ಜಲಾಶಯದ ಹೂಳು ತೆಗೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ರಾಮಮಂದಿರದ ವಿಚಾರ ಬಹಳ ಮುಖ್ಯ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ, ಒಬ್ಬ ಬಡವನಿಗೆ ರೊಟ್ಟಿ ಸಿಕ್ಕರೆ ಅದು ನನಗೆ ದೇವಸ್ಥಾನಕ್ಕೆ ಹೋದಂತೆ. ಪ್ರತಿಯೊಬ್ಬರಿಗೂ ಅವರವರ ಸ್ವಂತ ಅಭಿಪ್ರಾಯವಿದೆ. ರಾಮಮಂದಿರ ಕಟ್ಟಲು ಬಯಸುವವರಿಗೆ ಅವರ ಅಭಿಪ್ರಾಯಗಳಿಗೆ ಬದ್ಧವಾಗಿರಬಹುದು ಎಂದರು.

ಮರಾಠವಾಡದಲ್ಲಿ ಒಬ್ಬ ವ್ಯಕ್ತಿ ಒಂದು ಮುಷ್ಟಿ ಆಹಾರ ಧಾನ್ಯ ಮತ್ತು ಒಂದು ಕಟ್ಟು ಹುಲ್ಲು ದಾನ ಮಾಡಿದರೆ, ಹಸಿದ ಜನ ಮತ್ತು ದನಕರುಗಳಿಗೆ ಆಹಾರಕ್ಕಾಗಿ ಬಳಸಬಹುದು. ಜನ ಈಗ ತಮ್ಮ ಅಗತ್ಯಗಳನ್ನು ಪೂರೈಸಲು ನಗರಗಳಿಗೆ ಬರಲು ಆರಂಭಿಸಿದ್ದಾರೆ, ಅವರು ಭಿಕ್ಷುಕರಲ್ಲ. ಆದ್ದರಿಂದ ಅವರನ್ನು ಭಿಕ್ಷುಕರು ಎಂದು ಪರಿಗಣಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೆಹಲಿಗೆ ರೈತರ ಮೆರವಣಿಗೆಯಲ್ಲಿ ತೆರಳುತ್ತಿರುವ ಕುರಿತು ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಜನ ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಪ್ರತಿಭಟನೆಯ ಮೊರೆಹೋಗುತ್ತಾರೆ. ರೈತರು ತಮ್ಮ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸದ ಕಾರಣ ಮೆರವಣಿಗೆಗಳನ್ನು ನಡೆಸುವ ಒತ್ತಡಕ್ಕೆ ಸಿಲುಕಿದ್ದಾರೆ. ಸರ್ಕಾರ ಮಾತ್ರ ಅವರ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ. ದತ್ತಿ ಸಂಸ್ಥೆಗಳು ಸಹ ಮುಂದೆ ಬರಬೇಕಾಗಿದೆ ಎಂದು ಕರೆನೀಡಿದರು.

Leave a Reply