ಮುಡಾವನ್ನು ಮುಕ್ಕಿ ತಿಂದಿರುವ ಮುಡಾರಾಮಯ್ಯ ತನ್ನ ಅಕ್ರಮಗಳು ಹೊರಬರುತ್ತಿದ್ದಂತೆ ರಾಜ್ಯದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಹೊಸ ಸದಾರಮೆ ನಾಟಕ ಶುರು ಮಾಡಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಹೌದು.. ನಿಮ್ಮ ಧರ್ಮಪತ್ನಿಯವರು ಯಾವುದೇ ತಪ್ಪು ಮಾಡಿಲ್ಲ..ಆದರೆ, ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟು ಕಬಳಿಸಿದ ಸಿದ್ಧಹಸ್ತರು..! ಮುಡಾ ಫೈಲ್ಸ್ ನ ಕಥೆ, ಚಿತ್ರ ಕಥೆ, ನಿರ್ದೇಶನ ನಿಮ್ಮದೇ ಅಲ್ಲವೇ..?
ಗೌರವಯುತವಾಗಿ ಮನೆಯಲ್ಲಿರುವ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಆ ತಾಯಿಯ ಹೆಸರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಸೈಟ್ ಕಳ್ಳ ಸಿಕ್ಕಬಿದ್ದ ಮೇಲೆ ಈಗ ಮೊಸಳೆ ಕಣ್ಣೀರು ಸುರಿಸಲು ನಾಚೀಕೆಯಾಗುವುದಿಲ್ಲವೇ ?
ದಲಿತರನ್ನು ಬಳಸಿಕೊಂಡು ಬಲಿತಿರುವ ನೀವು ವಾಲ್ಮೀಕಿ ನಿಗಮದ ಹಣವನ್ನು ಹೇಗೆಲ್ಲ ಲೂಟಿ ಮಾಡಿದ್ದೀರಿ ..? ದಲಿತರ ಜಮೀನು ನುಂಗಿದ್ದೀರಿ.. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಸಾವಿರಾರು ಕೋಟಿ ದುರ್ಬಳಕೆ ಮಾಡಿಕೊಂಡ ಭ್ರಷ್ಟಾತಿ ಭ್ರಷ್ಟ ಸರ್ಕಾರ ನಿಮ್ಮದು. ಹೆಜ್ಜೆ ಹೆಜ್ಜೆಗೂ ದಲಿತರ ಬೆನ್ನಿಗೆ ಚೂರಿ ಹಾಕುತ್ತಲೇ ಇರುವ ನಿಮಗೆ ದಲಿತರ ಬಗ್ಗೆ ಮಾತಾಡುವ ಯಾವ ನೈತಿಕತೆಯು ಉಳಿದಿಲ್ಲ..
ಎ1 ಆರೋಪಿ ‘ಭ್ರಷ್ಟರಾಮಯ್ಯ’ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಸಿಕೊಳ್ಳಲು ಹಾಗೂ ಜನರ ಅನುಕಂಪ ಪಡೆಯಲು ಮಾಡುತ್ತಿರುವ ಹೈಡ್ರಾಮಾಗಳಷ್ಟೇ..!
ನಿಮ್ಮ Indian National Congress ಸೂಚನೆಗೂ ಮೊದಲೇ ತಾವೇ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ.
– ಜೆಡಿಎಸ್




