2019 ಮತ್ತು 2020ನೇ ವರ್ಷದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿಯ ಹಣ ಕೂಡಲೇ ಬಿಡುಗಡೆ ಮಾಡಿ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕರ್ನಾಟಕ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ವಿವಿಧ ಯೋಜನೆಗಳ ಅಡಿಯಲ್ಲಿ ಪ್ರಕಾಶಕರು ಮತ್ತು ಲೇಖಕರಿಂದ ಪ್ರತಿ ವರ್ಷ ಪುಸ್ತಕಗಳನ್ನ ಆಯ್ಕೆ ಸಮಿತಿಯ ಮೂಲಕ ಖರೀದಿಸಿರುವುದು ಸರಿಯಷ್ಟೇ ಈ ರೀತಿಯ ಪುಸ್ತಕಗಳ ಖರೀದಿಯ ಮೊತ್ತ 2019 ಮತ್ತು 20ನೇ ವರ್ಷದಲ್ಲಿ ಖರೀದಿಸಿರುವ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಹಣ ಬಿಡುಗಡೆಯಾಗಿರುವುದಿಲ್ಲ.
ಲೇಖಕರು ಮತ್ತು ಸಣ್ಣ ಪ್ರಮಾಣದಲ್ಲಿ ಪುಸ್ತಕಗಳನ್ನ ಪ್ರಕಟಿಸಿ ಮಾರಾಟ ಮಾಡುವ ಪ್ರಕಾಶಕರು ಇಷ್ಟು ವರ್ಷಗಳಾದರೂ ಹಣ ಬಾರದೆ ಇರುವುದರಿಂದ ತುಂಬಾ ತೊಂದರೆಯಲ್ಲಿದ್ದಾರೆ. ಅವರುಗಳು ಹಾಕಿರುವ ಬಂಡವಾಳಕ್ಕೆ ಬಡ್ಡಿಯನ್ನು ಪಾವತಿಸಲು ಆಗುತ್ತಿಲ್ಲ.
ಇದೇ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೆಸರಾಂತ ಪ್ರಕಾಶಕರಿಗೆ ಅವರು ಸರಬರಾಜು ಮಾಡಿರುವ ಪುಸ್ತಕಗಳಿಗೆ ಮೊತ್ತವನ್ನು ಆಯಾ ವರ್ಷವೇ ನೀಡುತ್ತೀರಿ. ಆದರೆ ಸಣ್ಣ ಮತ್ತು ಮಧ್ಯಮ ವರ್ಗದ ಪ್ರಕಾಶಕರು ಮತ್ತು ಲೇಖಕರಿಗೆ ತಾರತಮ್ಯವನ್ನು ಮಾಡುತ್ತಿದ್ದೀರಿ.
ಗ್ರಂಥಾಲಯಗಳನ್ನು ಗ್ರಾಮಕ್ಕೊಂದು ಸ್ಥಾಪಿಸಬೇಕೆಂದು ಹೇಳುವ ಸರ್ಕಾರ, ಗ್ರಂಥಾಲಯ ಇಲಾಖೆಯಲ್ಲಿ ಸೂಕ್ತವಾದಂತಹ ಆಡಳಿತ ವ್ಯವಸ್ಥೆಯನ್ನು ಮಾಡಬೇಕು. ಖರೀದಿಸಿರುವ ಪುಸ್ತಕಗಳಿಗೆ ಹಣವನ್ನು ಪಾವತಿಸದಿದ್ದರೆ ಲೇಖಕರು ಮತ್ತು ಪ್ರಕಾಶಕರು ಯಾವ ರೀತಿಯಲ್ಲಿ ಅಕ್ಷರ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ?
ಲೇಖಕರು ಮತ್ತು ಪ್ರಕಾಶಕರಿಗೆ ಆರ್ಥಿಕವಾಗಿ ನೆರವನ್ನು ನೀಡುವುದನ್ನು ಬಿಟ್ಟು ಸಂಕಷ್ಟವನ್ನು ಉಂಟು ಮಾಡುವುದಾದರೆ ಅಕ್ಷರ ಸಂಸ್ಕೃತಿ ಖಂಡಿತ ಬೆಳೆಯುವುದಿಲ್ಲ. ಜೊತೆಗೆ ಗ್ರಂಥಾಲಯ ಇಲಾಖೆಯ ಉದ್ದೇಶವೂ ಈಡೇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವರು ಕೂಡಲೇ 2019 ಮತ್ತು 2020ನೇ ಸಾಲಿನಲ್ಲಿ ಖರೀದಿಸಿರುವ ಪುಸ್ತಕಗಳಿಗೆ ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕೆಂದು ಈ ಮೂಲಕ ಕೋರುತ್ತೇನೆ.
ಸಗಟು ಪುಸ್ತಕ ಖರೀದಿಯ ವ್ಯವಸ್ಥೆ ಹಾಳಾಗಿ ಎಷ್ಟೋ ವರ್ಷಗಳಾಗಿದೆ. ಸರಿಯಾದ ಸಮಯಕ್ಕೆ ಹಣ ಬರುವುದಿಲ್ಲ ಎನ್ನುವ ಕಾರಣಕ್ಕೆ ಬಹಳಷ್ಟು ಲೇಖಕರು ಮತ್ತು ಪ್ರಕಾಶಕರು ಬರೆಯುವುದನ್ನು ಮತ್ತು ಪ್ರಕಟಿಸುವುದನ್ನು ಬಿಟ್ಟು ಬದುಕಿಗಾಗಿ ಬೇರೆ ಉದ್ಯಮವನ್ನು ಅವಲಂಬಿಸುವುದು ಅನಿವಾರ್ಯವಾಗುತ್ತಿದೆ.
ಪ್ರಚಾರಗಳಿಗೆ ಮತ್ತು ಅರ್ಥವಿಲ್ಲದ ಕಾರ್ಯಕ್ರಮಗಳಿಗೆ ಲಕ್ಷ ಮತ್ತು ಕೋಟಿಗಳ ಹಣವನ್ನು ಖರ್ಚು ಮಾಡುವ ಅಧಿಕಾರಿಗಳಿಗೆ ಗ್ರಂಥಾಲಯ ಇಲಾಖೆಯಲ್ಲಿ ಪ್ರತಿವರ್ಷ ಪುಸ್ತಕಗಳನ್ನು ಖರೀದಿಸಿ ಅವರಿಗೆ ಕಾಲಕಾಲಕ್ಕೆ ಹಣವನ್ನು ನೀಡಲು ಆಸಕ್ತಿ ಇಲ್ಲ.
ಕೆಲವು ದೇಶದಲ್ಲಿ ಲೇಖಕರು ಪ್ರಕಟಿಸಿದಂತಹ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಖರೀದಿಸಿ ಅವರ ಬರವಣಿಗೆ ಮತ್ತು ಆಲೋಚನೆಗಳಿಗೆ ಆರ್ಥಿಕತೆಯ ಸಮಸ್ಯೆಗಳು ಬಾರದಂತೆ ಎಚ್ಚರಿಕೆಯನ್ನು ವಹಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಬರೆಯುವುದನ್ನು ಬಿಡಿ ಎನ್ನುವ ರೀತಿಯಲ್ಲಿ ನಿರುತ್ಸಾಹವನ್ನು ತುಂಬುತ್ತಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




