ಬೆಂಗಳೂರು: ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಬಂಧ ನಿನ್ನೆಯಷ್ಟೇ ಬಂಧಿತನಾಗಿರುವ ಸಂಚುಕೋರ ಪ್ರಮುಖ ಆರೋಪಿ ಮುಜಾಮಿಲ್ ಶರೀಫ್ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳ ವಿಚಾರಣೆ ವೇಳೆ ನಗರದ ಸಮೀಪವೇ ಬಾಂಬ್ ತಯಾರಿ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಬಂಧಿತ ಮುಜಾಮಿಲ್ ಶರೀಫ್ ಶಂಕಿತ ಉಗ್ರರಾದ ಮತೀನ್ ಹಾಗೂ ಮುಸಾವೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಸ್ಫೋಟಕ್ಕೆ ಬೇಕಾದ ಕಚ್ಚಾ ಸಮಾಗ್ರಿಗಳನ್ನು ಇಬ್ಬರು ತರಿಸಿಕೊಂಡಿದ್ದರು. ಸ್ಫೋಟದ ಸಂಚಿನ ಬಳಿಕ ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ ಮಾಡಲಾಗಿದೆ ಎನ್ನುವುದು ಎನ್ ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.
2019ರಲ್ಲಿ ಎನ್ಐಎ ದಾಳಿ ವೇಳೆ ಪರಾರಿಯಾಗಿದ್ದ ಶಂಕಿತ ಮುಸಾವೀರ್ ಹಾಗೂ ಅಬ್ದುಲ್ ಮತಿನ್ ತಾಹಾ ಇದುವರೆಗೆ ಪತ್ತೆಯಾಗಿಲ್ಲ. ಈ ಇಬ್ಬರು ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದ ಪ್ರಮುಖ ಆರೋಪಿಗಳಾಗಿದ್ದಾರೆ. ಮುಸಾವೀರ್ ಸ್ಫೋಟಕ ವಸ್ತು ತಂದಿಟ್ಟರೆ, ಇದಕ್ಕೆಲ್ಲಾ ಸೂತ್ರಧಾರನಾದ ಅಬ್ದುಲ್ ಮತೀನ್ ಕಾರಣನಾಗಿರುವುದನ್ನು ಮುಜಾಮಿಲ್ ಶರೀಫ್ ಬಾಯ್ಬಿಟ್ಟಿದ್ದಾನೆ.
ಹೊರರಾಜ್ಯದಲ್ಲಿ ತಲೆಮರೆಸಿಕೊಂಡ ಶಂಕಿತ ಮುಸಾವೀರ್ ಹಾಗೂ ಅಬ್ದುಲ್ ಮತಿನ್ ತಾಹಾ ಬಂಧನಕ್ಕೆ ಎನ್ ಐಎ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಮುಜಾಮಿಲ್ ಶರೀಫ್ ಕಳೆದ 16 ವರ್ಷದಿಂದ ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದು ಈತನ ಕುಟುಂಬ ಚಿಕ್ಕಮಗಳೂರು, ದುಬೈನಗರದಲ್ಲಿ ವಾಸವಿದೆ. ಕಳೆದ 16 ವರ್ಷಗಳ ಹಿಂದೆ ನಗರಕ್ಕೆ ಉದ್ಯೋಗ ಅರಸಿ ಬಂದು ಬಸವೇಶ್ವರನಗರದ ಹಾವನೂರು ಸರ್ಕಲ್ ಬಳಿಯ ಚಿಕನ್ ಕೌಂಟಿ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ.
ಹೊರರಾಜ್ಯಗಳಿಗೆ ಪರಾರಿಯಾಗಿರುವ ಮುಸಾವೀರ್ ಹಾಗೂ ಅಬ್ದುಲ್ ಮತಿನ್ ತಾಹಾ ಅವರಿಗೆ ಮುಜಾಮೀಲ್ ಶರೀಫ್ ಲಾಜಿಸ್ಟಿಕ್ ಸಪೋರ್ಟ್ ಮಾಡಿದ್ದು, ನಿನ್ನೆ ಎನ್ಐಎ ಅಧಿಕಾರಿಗಳು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮುಸಾವೀರ್ನ ಜವಾಬ್ದಾರಿಯನ್ನು ಮುಜಾಮಿಲ್ ಹೊತ್ತುಕೊಂಡಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.




