ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದು 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ 5 900 ಕೋಟಿ ರೂಪಾಯಿಗಳ ಹೊರೆಯನ್ನ ಇರಿಸಿ ಹೋಗಿದ್ದ ಬಿಜೆಪಿಯವರ ಅವ್ಯವಸ್ಥೆಯ ಆಡಳಿತಕ್ಕೆ ಸಾರಿಗೆ ಇಲಾಖೆ ಅವನತಿಯ ಹಾದಿಯಲ್ಲಿತ್ತು, ಇಂತಹ ಸಂದರ್ಭದಲ್ಲಿ ಸಾರಿಗೆ ಸಚಿವರಾಗಿ ಶ್ರೀರಾಮಲಿಂಗಾರೆಡ್ಡಿ ರವರು ತಮ್ಮ ಕಾರ್ಯ ದಕ್ಷತೆಯ ಮೂಲಕ ಇಲಾಖೆಗೆ ಜೀವವನ್ನು ತುಂಬುತ್ತಿದ್ದಾರೆ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಾಗಿದೆ ಎನ್ನುವ ರೀತಿಯಲ್ಲಿ ಬಿಜೆಪಿಯವರು ಬಿಂಬಿಸುತ್ತ ಶಕ್ತಿ ಯೋಜನೆಯ ಜನಪ್ರಿಯತೆಯನ್ನು ಕುಗ್ಗಿಸುವಂತಹ ಕೆಲಸವನ್ನ ಮಾಡುತ್ತಿದ್ದಾರೆ
ಸಾರಿಗೆ ಇಲಾಖೆಯ ಆರ್ಥಿಕ ಸಂಕಷ್ಟಕ್ಕೆ ಶಕ್ತಿ ಯೋಜನೆ ಕಾರಣವಲ್ಲ ಬದಲಿಗೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಅನುಸರಿಸಿ ದಂತಹ ಅವ್ಯವಸ್ಥೆಯ ಆಡಳಿತ ಕಾರಣ
ನೌಕರರ ಪಿಂಚಣಿ ಸೌಲಭ್ಯಗಳನ್ನು ಪಾವತಿಸಿರಲಿಲ್ಲ.
ನೌಕರರಿಗೆ ಸಕಾಲದಲ್ಲಿ ಸಲ್ಲಬೇಕಾದ ಯೋಜನೆಗ ಬಾಕಿ ಮೊತ್ತ ನೀಡಿರಲಿಲ್ಲ

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ದರವನ್ನ ಏರಿಸಬೇಕಾಗಿದೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೇಂದ್ರ ಸರಕಾರ ಕಳೆದ ಹತ್ತು ವರ್ಷದ ಅವಧಿಯಲ್ಲಿ ಸಾಕಷ್ಟು ಬಾರಿ ಏರಿಕೆ ಮಾಡಿರುವುದರಿಂದ ಇದರ ಹೊರೆಯು ಸಾರಿಗೆ ಮೇಲೆ ಬಿದ್ದಿರುತ್ತದೆ ಬೆಲೆ ಏರಿಕೆಗೆ ಇದು ಒಂದು ಕಾರಣವಾಗಿದೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಹಲವಾರು ಬಾರಿ 2008ರಿಂದ 2013ರವರೆಗೆ ಮತ್ತು 2019 ರಿಂದ 2023ರ ಅವಧಿಯಲ್ಲಿ ಸಾರಿಗೆ ದರಗಳನ್ನ ಏರಿಕೆ ಮಾಡಿರುತ್ತೀರಿ ಮಾನ್ಯ ಅಶೋಕ್ ರವರೆ ಎಲ್ಲ ಸಂದರ್ಭದಲ್ಲಿ ಸಾರಿಗೆ ಸಚಿವರು ಆಗಿದ್ದಾರೆ ಆದರೂ ಸಹ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿರುವ ಕಾರಣದಿಂದ ಸಾರಿಗೆ ದರದ ವ ಏರಿಕೆಯ ವಿರುದ್ಧ ಅಬ್ಬರಿಸುವ ಸಂದರ್ಭದಲ್ಲಿ ತಮ್ಮ ನಾಲಿಗೆಯನ್ನು ಹರಿಬಿಟ್ಟು ತಮ್ಮ ಸಂಸ್ಕೃತಿಯನ್ನು ಎತ್ತಿ ತೋರಿಸಿದ್ದಾರೆ.
ಪಾಪ್ಕಾರ್ನ್ ಮೇಲೆ ಜಿಎಸ್ಟಿ ಹಾಕಿದಾಗ ಯಾವ ಮಾಧ್ಯಮದವರು ಮಾತನಾಡಿರಲಿಲ್ಲ. ಆರೋಗ್ಯ ವಿಮೆ ಯೋಜನೆಗಳ ಮೇಲೆ ಿಎಸ್‌ಪಿ ಹಾಕಿರುವುದನ್ನ ಯಾರು ಪ್ರತಿಭಟಿಸುತ್ತಿಲ್ಲ ಮತ್ತು ಮಾಧ್ಯಮದವರು ಈ ವಿಚಾರವನ್ನು ಯಾರಿಗೂ ತೋರಿಸುತ್ತಿಲ್ಲ. ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಗಗನ ಏರಿಕೆಯಾಗುತ್ತಿದೆ ಇದರ ಬಗ್ಗೆ ಯಾರು ದ್ವನಿ ತೆಗೆಯುವುದಿಲ್ಲ ನಮ್ಮ ಮಾಧ್ಯಮದವರಿಗೆ ಕಾಣಿಸುವುದೇ ಇಲ್ಲ.
ನಿರುದ್ಯೋಗ ಹೆಚ್ಚಾಗುತ್ತಾ, ಯುವ ಜನಾಂಗದ ಪರಿಸ್ಥಿತಿ ಆತಂಕದಲ್ಲಿದೆ ವಿದ್ಯಾವಂತರು ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ ಈ ವಿಚಾರ ಕಾಣಿಸುವುದೇ ಇಲ್ಲ.
ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿಯುತ್ತಿದ್ದು ಹಣದುಬ್ಬರ ಹೆಚ್ಚಾಗುತ್ತಿದೆ ಡಾಲರ್ ಮುಂದೆ ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಈ ವಿಚಾರ ಯಾರಿಗೂ ಕಾಣುತ್ತಿಲ್ಲ.
ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ನೀಡದಿದ್ದರೂ ಜನರಿಗೆ ಯಾವ ಸವಲತ್ತುಗಳನ್ನು ನೀಡದಿದ್ದರೂ 52 ಲಕ್ಷ ಕೋಟಿ ರೂಪಾಯಿಗಳ ಸಾಲದಿಂದ ದೇಶದ ಸಾಲವನ್ನು200 ಕೋಟಿ ರೂಪಾಯಿಗಳ ಮಟ್ಟಕ್ಕೆ ಏರಿಕೆ ಮಾಡಿದ್ದರು ಇದಕ್ಕೆ ಕಾರಣವೇನೆಂದು ಯಾರೂ ಕೇಳುತ್ತಿಲ್ಲ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕವಾಗಿ ತೊಂದರೆಯಾಗಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನೀರಿನ ದರವನ್ನು ಏರಿಸಿದ್ದೀರಿ ವಿದ್ಯುತ್ ದರವನ್ನ ಏರಿಸಿದ್ದೀರಿ ಸಾರಿಗೆ ದರವನ್ನು ಏರಿಸಿದ್ದೀರಿ ಯಾವ ಗ್ಯಾರೆಂಟಿ ನೀಡದಿದ್ದರೂ ಲಕ್ಷಾಂತರ ರೂಪಾಯಿಗಳ ಸಾಲದ ಹೊರೆಯನ್ನ ಬಿಟ್ಟು ಹೋಗಿದ್ದೀರಿ ಯಾವ ಕಾರಣಕ್ಕೆ ಸಾಲವನ್ನು ಮಾಡಿದ್ದೀರಿ ಎಂದು ಜನರ ಮುಂದೆ ತಿಳಿಸಿ.
ರಾಜ್ಯ ಸರ್ಕಾರ ಯಾವುದೇ ಯೋಜನೆಗಳನ್ನು ನಿಲ್ಲಿಸಿಲ್ಲ ಯಾವುದೇ ಯೋಜನೆಗಳಿಗೂ ಹಣದ ಅಡಚಣೆಯಾಗಿಲ್ಲ ನೌಕರರ ಸಂಬಳಗಳು ವಿವಿಧ ಯೋಜನೆಗಳಿಗೆ ಹಣ ಕಾಲ ಕಾಲಕ್ಕೆ ಬಿಡುಗಡೆಯಾಗುತ್ತಿದೆ ಆದರೂ ಬಿಜೆಪಿಯವರ ಅಪಪ್ರಚಾರ ಮತ್ತು ಕೆಲವು ಸುದ್ದಿ ಮಾಧ್ಯಮದವರ ಪಕ್ಷಪಾತದ ಮಾತುಗಳು ಪಕ್ಷದ ವಕ್ತಾರಂತೆ ಸುದ್ದಿಯ ಬದಲು ಸದ್ದು ಮಾಡುವ ಕಾರಣದಿಂದಾಗಿ ಇವರ ಮಾತುಗಳನ್ನು ಒಂದಷ್ಟು ಜನ ನಿಜವೇ ಎಂದು ಪ್ರಶ್ನಿಸುವಂಥಾಗಿದೆ ಆದರೆ ರಾಜ್ಯದ ಮಹಿಳೆಯರು ಶಕ್ತಿ ಯೋಜನೆ ಗೃಹ ಜ್ಯೋತಿ ಯೋಜನೆ ಭಾಗ್ಯ ಲಕ್ಷ್ಮಿಯೋಜನೆ ಅನ್ನಭಾಗ್ಯ ಯೋಜನೆ ಇವುಗಳಿಂದ ಕಾಲಕಾಲಕ್ಕೆ ಹಣವನ್ನು ಪಡೆಯುತ್ತಿದ್ದಾರೆ ಅವರುಗಳು ಸರ್ಕಾರದ ಪರವಾಗಿದ್ದಾರೆ ಆದರೆ ಬಿಜೆಪಿಯವರಿಗೆ ಮತ್ತು ಕೆಲವು ಮಾಧ್ಯಮದವರಿಗೆ ಮಾತ್ರವೇ ಯಾರಿಗೂ ಕಾಣದ ಸುದ್ದಿಗಳು ಕಾಣುತ್ತಿದೆ
ಬಿಜೆಪಿಯವರು ರಾಜ್ಯ ಸರಕಾರದ ಬಸ್ ದರ ಏರಿಕೆಯ ವಿರುದ್ಧ ಹೋರಾಟ ಮಾಡುವ ಬದಲು ಕೇಂದ್ರ ಸರಕಾರದ ಆಹಾರ ಪದಾರ್ಥಗಳ ಬೆಲೆ ಏರಿಕೆಯ ವಿರುದ್ಧ ಮಾತನಾಡಿ ಕೇಂದ್ರ ಸರ್ಕಾರದ ಗಮನವನ್ನಾದರೂ ಸೆಳೆಯಿರಿ ಇಲ್ಲದಿದ್ದರೆ ನಿಮ್ಮ ಹೋರಾಟಗಳಿಗೆ ಯಾರು ಬೆಲೆ ನೀಡುವುದಿಲ್ಲ ಕಾರಣ ಎಲ್ಲ ಸರ್ಕಾರಗಳು ಸಹ ಅನಿವಾರ್ಯ ಕಾರಣಗಳಿಂದ ಸಂಪನ್ಮೂಲಗಳ ಕಾರಣದಿಂದ ಬೆಲೆ ಏರಿಕೆಯನ್ನು ಮಾಡಿರುತ್ತಾರೆ ಆದರೆ ಕಾಂಗ್ರೆಸ್ ಸರ್ಕಾರ ಇವುಗಳ ಜೊತೆಗೆ ಗ್ಯಾರಂಟಿ ಯೋಜನೆಗಳ ಮೂಲಕ 52 ಸಾವಿರ ಕೋಟಿ ರೂಪಾಯಿಗಳ ನೆರವನ್ನ ಜನರಿಗೆ ನೀಡುತ್ತಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




