ಐದು ವರ್ಷದ ಬಳಿಕ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬಹುದು: ಎಚ್ ಸಿ ಮಹದೇವಪ್ಪ

2 years ago

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಊಟಕ್ಕೆ ಸೇರಿದ್ದು ಪೂರ್ವ ನಿಯೋಜಿತವಲ್ಲ. ಔಪಚಾರಿಕ ಭೇಟಿಯಷ್ಟೇ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.

ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಔತಣಕೂಟದ ಕುರಿತು ಮಾತನಾಡಿದ ಅವರು, ನಿನ್ನೆ ಸಚಿವ ಸತೀಶ್ ಜಾರಕಿಹೊಳಿ ಎಲ್ಲರೂ ಊಟಕ್ಕೆ ಸೇರೋಣ ಎಂದು ಆಹ್ವಾನಿಸಿದರು. ವಿಷಯ ಏನು ಎಂದು ಮುಖ್ಯಮಂತ್ರಿ ಕೇಳಿದರು. ಏನೂ ಇಲ್ಲ ಊಟಕ್ಕೆ ಸೇರೋಣ ಎಂದು ಆಹ್ವಾನಿಸಿದರು. ಅದಕ್ಕಾಗಿ ಎಲ್ಲರೂ ಸೇರಿಕೊಂಡೆವು. ಕಾರಣ ಇಷ್ಟೇ ಬೇರೇನೂ ಇಲ್ಲ ಎಂದರು.

ಗೃಹ ಸಚಿವ ಪರಮೇಶ್ವರ್ ಮಲೇಷ್ಯಾಗೆ ಹೋಗುವುದಾಗಿ ಹೇಳಿದರು. ಅವರು ಊಟ ಮಾಡಿ ಹೊರಟರು. ಈ ಸಭೆ ಪೂರ್ವನಿಯೋಜಿತವಲ್ಲ, ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದ ರಹಸ್ಯ ಚರ್ಚೆಯೂ ಅಲ್ಲ. ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಾಮಾನ್ಯವಾಗಿ ಚರ್ಚೆ ಮಾಡಿದ್ದೇವೆ ಎಂದರು.

ಸಿಎಂ ಬದಲಾವಣೆ ಎಲ್ಲಾ ಎಐಸಿಸಿಗೆ ಬಿಟ್ಟ ವಿಚಾರ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಇನ್ನೂ ಮೂರೂವರೆ ವರ್ಷ ಅವರೇ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಐದು ವರ್ಷದ ಬಳಿಕ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಬಹುದು ಎಂದರು.

Leave a Reply