ರಾಜ್ ಕುಮಾರ್ ಮತ್ತು ಯೋಗಾಭ್ಯಾಸದ ಪರಿಣಾಮಗಳು

3 years ago

ಇಂದಿನ ಪ್ರಜಾವಾಣಿ ಗಮನಿಸುವಾಗ ಕಣ್ಣು ತುಂಬಿಕೊಂಡಿದ್ದು ಯೋಗ ಎಂಬ ಸರ್ಕಸ್ ಪ್ರಪಂಚದಾದ್ಯಂತ ಜನ ಸಾಮೂಹಿಕ ಸನ್ನಿಗೆ ವಶವಾಗಿರುವುದು ಮೌಢ್ಯಕ್ಕೆ ಹಿಡಿದ ಕನ್ನಡಿ..ಈ ಸನ್ನಿಗೆ ನಾಡಿನ ಮೇರು ನಟ ಕನ್ನಡಮಯ ವ್ಯಕ್ತಿತ್ವದ ಡಾ ರಾಜ್ ಕುಮಾರ್ ಕೂಡ ವಶವಾಗಿದ್ದರಲ್ಲ ಎನಿಸಿ ಗೆಳೆಯ ದೊಡ್ಡಹುಲ್ಲೂರು ರುಕ್ಕೋಜಿ ಡಾ ರಾಜಕುಮಾರ್ ಸಮಗ್ರ ಚರಿತ್ರೆಯಲ್ಲಿ ಏನು ದಾಖಲಿಸಿದ್ದಾನೆ ಎಂದು ಗಜ ಭಾರದ ಪುಸ್ತಕ ತೆರೆದು ನೋಡಿದಾಗ ಕೆಲವು ನಂಬಲಾಗದ ದಾಖಲೆಗಳು ಕಣ್ಮನ ಸೆಳೆದವು…..

ಅಣ್ಣಾವ್ರು ಈ ಯೋಗಕ್ಕೆ ಬಲಿಯಾಗುವ ಮುನ್ನವೇ 1958ರಲ್ಲಿ ಅವರಿಗೆ ಅನಿಸಿದ್ದು. ,”ಜನರಿಗೆ ಕಲಾವಿದನ ಮನಸ್ಥಿತಿ ,ಪರಿಸ್ಥಿತಿ ಮುಖ್ಯವಲ್ಲ. ಅವರು ಹೇಗೆ ಅಭಿನಯಿಸಿದ್ದಾರೆ ,ಕಾಣುತ್ತಾನೆ ಅನ್ನುವುದಷ್ಟೇ ಬೇಕಾಗಿರುವುದು ,ಈ ಸತ್ಯ ಅರಿವಿಗೆ ಬರುತ್ತಿದ್ದಂತೆ ಎಲ್ಲಾ ಬಗೆಯ ಪಾತ್ರಗಳಿಗೂ ಹೊಂದುವಂತದೇಹವನ್ನು ಹುರಿಮಾಡಿಟ್ಟುಕೊಳ್ಳುವುದರತ್ತ ಗಮನಹರಿಸಿದರು.. ಗರಡಿ ಮನೆ ಯಲ್ಲಿರುವಂತಹ ಎಲ್ಲಾ ಪರಿಕರಗಳನ್ನು ತಂದು ಮನೆಯಲ್ಲಿಯೇ ಎರಡು ಗಂಟೆಗಟ್ಟಲೆ ವ್ಯಾಯಾಮ ಮಾಡಿದರೆ ಮಾತ್ರ ಸಮಾಧಾನ ಪಡುತ್ತಿದ್ದರು. ಈ ಪರಿಶ್ರಮದ ಫಲವಾಗಿ ರಣಧೀರ ಕಂಠೀರವ ಚಿತ್ರದ 1960ರ ಉದಾಹರಣೆ. ಆನೆಯೊಂದು 30 ಅಡಿ ಮೇಲಕ್ಕೆ ಒಗೆದ ಮೇಲೂ ಚೆಂಡಿನಂತೆ ಪುಟಿದೆದ್ದು ನಿಲ್ಲುವ 120 ಪೌಂಡು ತೂಕದ ಭರ್ಜರಿ ಆಳು ಪೋಲೀಸ್ ಬಜ್ಜಯ್ಯನವರನ್ನು ಏಕದಂ ಮೇಲೆತ್ತಿ ಗಿರಗಿರನೆ ಮೂರು ಸುತ್ತು ತಿರುಗಿಸಿ ಕೆಳಗಿಳಿಸಿದಾಗ ಅವರ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸ ಹುಟ್ಟಿತು.

ಬಹದ್ದೂರ್ ಗಂಡು ಚಿತ್ರೀಕರಣದಲ್ಲಿ ಕುದುರೆಯಿಂದ ಬಿದ್ದಾಗಲೂ ವ್ಯಾಯಾಮ ಮಾಡುವುದನ್ನು ನಿಲ್ಲಿಸಿರಲಿಲ್ಲವಂತೆ. ಇದರ ಫಲವಾಗಿ ದಿನ ಕಳೆದಂತೆ ಕಥೆ ಪಾತ್ರಕ್ಕಿಂತ ಚಿತ್ರದಲ್ಲಿ ರಾಜಕುಮಾರ್ ಇದ್ದಾರೆ ಅನ್ನುವಂಥ ಅಂಶವೇ ಮುಖ್ಯವಾಗತೊಡಗಿತು. ನಿಜಕ್ಕೂ ಇದು ಅಧ್ಯಯನಕ್ಕೆ ಒಳಪಡಿಸಬೇಕಾದ ವಿಷಯ ಎನ್ನುವರು ರುಕ್ಕೋಜಿ…..”ಯೋಗ ” ಕಲಿಯಬೇಕೆಂಬ ಯೋಚನೆ ಅವರ ಕನಸು ಮನಸ್ಸಿನಲ್ಲೂ ಸುಳಿದಿರಲಿಲ್ಲವಂತೆ.

1980ರ ದಿನಗಳಲ್ಲಿ ಅಂದಿನ ಮದ್ರಾಸ್ ನಲ್ಲಿ ರಾಜ್ ಅವರ ದಿನಚರಿ ಮಾಮೂಲಿನಂತೆ ಸಾಗಬೇಕಾದರೆ ..ಯೋಗ ಕಲಿಸುವವರು ನಾಯ್ಕರ್ ಎನ್ನುವವರು ಬಂದಿದಾರೆ ಎಂದಾಗ ,”ರಾಜ್ ಹೇಳಿದ್ದು ಯೋಗ_ಪಾಗ ಎಲ್ಲಾ ನಮ್ಮ ಕೈಲಾಗ್ದೀರೊ ಕೆಲಸ “ಎಂದಾಗಲೂ. ಮತ್ತೆ ಮತ್ತೆ ಮನೆಗೆ ಬಂದ ಹೆಚ್ಚ್ ಎಫ್, ನಾಯ್ಕರ್…ಏನೆಲ್ಲಾ ಹೇಳಿದರೂ ರಾಜಕುಮಾರ್ ಒಪ್ಪದಿದ್ದಾಗ ನಾಯ್ಕರ್ ಬಳಸಿದ ಅಸ್ತ್ರ “ಹುಬ್ಬಳ್ಳಿಯ ಸಿದ್ಧಾರೂಢರು”!ಅವರ ಪ್ರೇರಣೆಯಿಂದಲೇ ಬಂದಿರುವುದು ಎಂದು ಹೇಳಿದಾಗ ಸಿದ್ಧಾರೂಢರ ಸಂಕಲ್ಪ ಇರಬಹುದೇನೋ ಎನ್ನಿಸಿ ಒಪ್ಪಿದರು…

ರಾಜ್ ಯೋಗ ಕಲಿಯಲು ಶುರುಮಾಡಿದಾಗ ಅವರ ವಯಸ್ಸು 51 ವರ್ಷಗಳು.. 15 ವರ್ಷಗಳ ಸುದೀರ್ಘ ಯೋಗಾಭ್ಯಾಸ ನಂತರ ಯದಿನಗಳಲ್ಲಿ ಪತ್ರಕರ್ತರೊಬ್ಬರಿಗೆ ,ಯೋಗ ಮಾಡಿದರೆ 18_20 ವರ್ಷದವರ ಥರಾ ಆಗ್ತೀರಾ ಎಂದರು .ಆಗ ಕಿವಿ ನಿಮರಿತು..ಈಯಪ್ಪ ಯುವಕನಾಗ ಬಹುದು ಎನ್ನುವ ಭರವಸೆ ಕೊಡ್ತಿದಾರೆ.. ಅಂದ್ಮೇಲೆ ಈಗಲೇ ಶುರುಮಾಡೋಣ ಅಂದೆ, 8 ವರ್ಷ ಬಿಡದೆ ಮಾಡಿದೆ …

ಗೆಳೆಯ ರುಕ್ಕೋಜಿ ಹೇಳುವರು ಅವರ ಆರೋಗ್ಯ ಯೋಗ ಕಲಿಕೆಯ ಮೊದಲು… ರಾಜ್ 50 ನೇಯ ವಯಸ್ಸಿನವರೆಗೆ ಯಾವುದೇ ಗಂಭೀರ ಶಸ್ತ್ರಚಿಕಿತ್ಸೆಗೆ ಒಳಗಾಗಿರಲಿಲ್ಲ… ಆದರೆ ಯೋಗ ಆರಂಭಿಸಿದ ನಂತರ ಅವರಿಗೆ ಒಟ್ಟು ನಾಲ್ಕು ಶಸ್ತ್ರ ಚಿಕಿತ್ಸೆಗಳಾದವು, ಬಲಗಾಲಿನ ಮಂಡಿಚಿಪ್ಪಿನ ಬದಲಾವಣೆ, ಪೃಷ್ಠದ ಮೂಳೆ ಬದಲಾವಣೆ, ಮೂಗಿನ ನರದ ಶಸ್ತ್ರಚಿಕಿತ್ಸೆ. 2004ರಲ್ಲಿ ಕೊರೋನರಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಕೂಡ ಆಯಿತು. ಅವರಿಗೆ ಜನ್ಮಜಾತವಾಗಿದ್ದ ಮೂಳೆಸವೆತ ಖಾಯಿಲೆಯನ್ನು ಕಠಿಣವಾದ ಯೋಗಾಭ್ಯಾಸವು ಉಲ್ಬಣಿಸುವಂತೆ ಮಾಡಿರಬಹುದು….

ನಾಯ್ಕರ್ ಹೇಳಿದಂತೆ ಯೋಗದಿಂದ ಯೌವನ ಮರುಕಳಿಸುವ ಮಾತಿರಲಿ , ಅವರಿಗೆ ಹುಟ್ಟಿನಿಂದ ಬಂದಿದ್ದ ಶಾರೀರಿಕ ಶಕ್ತಿಯನ್ನೇ ಕುಂದಿಸಿರುವುದು ಕಾಣುತ್ತದೆ..ಅವರ ಪೌಷ್ಟಿಕ ಆಹಾರ,ನಿಯಮಿತ ವ್ಯಾಯಾಮ ಇವು ಅವರನ್ನು ಯೋಗವಿಲ್ಲದೆ 25 ವರ್ಷಗಳ ಕಾಲ ಅತ್ಯಂತ ಆರೋಗ್ಯವಾಗಿಟ್ಟಿತ್ತು ಐವತ್ತರಲ್ಲೂ ಮೈಕಟ್ಟು ಕಬ್ಬಿಣದಂತೆ ಗಡುಸಾಗಿತ್ತು ಅದನ್ನು ನೋಡುತ್ತಲೇ ಬಂದಿದ್ದ ಲಕ್ಷಾಂತರ ಜನ ರಾಜಕುಮಾರ್ ಶತಾಯುಷಿಯಾಗಿರುತ್ತಾರೆ ಅಂದುಕೊಂಡಿದ್ದರು. ಆದರೆ ಯೋಗ ಆರಂಭಿಸಿದ ಮೇಲೆ ಅವರ. ದೇಹದಲ್ಲಿ ಆ ಬಿಗಿ, ದೃಢತೆ ಉಳಿಯಲಿಲ್ಲ ಎನ್ನುತ್ತಾರೆ ರುಕ್ಕೋಜಿ ‌.. ರಾಜ್ ಅವರ ಸಹೋದರ ವರದಪ್ಪ ನವರು ಒಂದೆರಡು ಸಲ “ಬೇಡಪ್ಪ… ವಯಸ್ಸಾದ ಮೇಲೆ ಯೋಗ, ಅಷ್ಟೆಲ್ಲ ಬೇಕಿಲ್ಲ ಇಷ್ಟು ದಿನ ಮಾಡುತ್ತಿದ್ದ ವ್ಯಾಯಾಮನೆ ಸಾಕು “ಅಂದರು ಆದರೆ ರಾಜ್ ಅದಾಗಲೇ ಒಪ್ಪಿಗೆ ಕೊಟ್ಟಾಗಿತ್ತು.ಎಲ್ಲಾ ವಿಷಯದಲ್ಲೂ ತಮ್ಮನ ಸಲಹೆಯನ್ನು ಪಾಲಿಸುತ್ತಿದ್ದವರು ಇದೊಂದು ಮಾತನ್ನು ಸ್ವೀಕರಿಸಲಿಲ್ಲವಂತೆ.

ಅಣ್ಣನ ಹಲವಾರು ಹವ್ಯಾಸ,ಅಭ್ಯಾಸಗಳಲ್ಲಿ ಸಹವರ್ತಿಯಾಗಿದ್ದ ವರದಪ್ಪ ನವರು ಯೋಗದತ್ತ ತಿರುಗಿ ನೋಡಲಿಲ್ಲ, ಅಷ್ಟೇ ಅಲ್ಲ ನಾಯ್ಕರ್ ಅವರೊಂದಿಗೆ ಅವರಿಗೆ ಆಪ್ತತೆ ಬರಲಿಲ್ಲ ಎಂದು ದಾಖಲಿಸಿದ್ದಾರೆ…1980 ರಿಂದ ಪ್ರಾರಂಭವಾದ ಯೋಗ ಕಲೆ 20 ವರ್ಷಗಳವರೆಗೆ ಅವಿಚ್ಛಿನ್ನವಾಗಿ ಮುಂದುವರಿಯಿತು.2002 ರ ನಂತರ ಸಂಪೂರ್ಣವಾಗಿ ತ್ಯಜಿಸಿ, ಕೇವಲ ನಡಿಗೆಯನ್ನು ಅವಲಂಬಿಸಿದರು.. ಇವರ ಈ ಯೋಗಾಭ್ಯಾಸ ಎಷ್ಟೋ ಅಭಿಮಾನಿಗಳಿಗೆ ಮಾದರಿಯಾಗಿದ್ದು, ಪಾಲಿಸುತ್ತಿರುವುದು ನಿಜಕೂಡ… ಆದರೆ ನಿಜವಾಗಿ ಸತ್ಯವಿದಿಯ ಎಂದು ಅರಿಯುವಷ್ಟರಲ್ಲಿ ಕಾಲ ಮಿಂಚುವುದು.. ಸಂಸ್ಕೃತಿ, ಪರಂಪರೆಯನ್ನು ವೈಭವೀಕರಿಸುವದು ಅಪಾಯವಲ್ಲವೆ.. “”””ಸರ್ವರೋಗಕ್ಕು ಯೋಗ ಮುದ್ದು”””” ಎಂದು ಸುದ್ದಿ ಮಾಡುವ ಪತ್ರಿಕೆಗಳು…

ಅಪಾಯಕಾರಿ ಯೋಗ ನಮಗೆ ಬೇಕೆ ? ಎಂಬ ಸಾವಿತ್ರಿ ಮಜುಂದಾರ್, ಕೊಪ್ಪಳ.. ಇವರ ಲೇಖನ ಪ್ರಜಾವಾಣಿ 25-7-2011ರಲ್ಲಿ ಪ್ರಕಟವಾಗಿದೆ…ಈ ಎಲ್ಲಾ ಫೋಟೋ, ದಾಖಲೆಗಳನ್ನು ಫೇಸ್ ಬುಕ್ಕ್ ನಲ್ಲಿ ಬರೆಯಲು ಅನುಮತಿ ನೀಡಿದ ಗೆಳೆಯ ಡಾ.ರಾಜಕುಮಾರ್ ಸಮಗ್ರ ಚರಿತ್ರೆಯ ಲೇಖಕನಿಗೆ ಧನ್ಯವಾದಗಳು.

– ಡಾ.ಎಚ್.ಆರ್.ಸ್ವಾಮಿ, ನಿವೃತ್ತ ಪ್ರಾಂಶುಪಾಲರು

Leave a Reply