ಆರೋಗ್ಯವಂತ ಜೀವನಕ್ಕೆ ಶುದ್ಧ ಕುಡಿಯುವ ನೀರು ಮುಖ್ಯ: ಸಿ.ಎನ್.ಅಶ್ವಥ್ ನಾರಾಯಣ

4 years ago

ಬೆಂಗಳೂರು: ಮನುಷ್ಯನಿಗೆ ದೇಹದಲ್ಲಿ ಶೇಕಡ 70/ರಷ್ಟು ನೀರಿನ ಅಂಶವಿರುತ್ತದೆ. ಪ್ರಪಂಚದಲ್ಲಿ ನೀರು ಹೇರಳವಾಗಿದೆ, ಕುಡಿಯಲು ಯೋಗ್ಯವಾದ ನೀರು ಸಿಗುವುದು ಕಷ್ಟ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ರಾಜಾಜಿನಗರದಲ್ಲಿ ರಿಗೋ ನೀರು ಶುದ್ಧೀಕರಿಸುವ ಯಂತ್ರಗಳ ಪರೀಕ್ಷಾ ಕೇಂದ್ರವನ್ನು ರಿಗೋ ಕಂಪನಿ ವ್ಯವಸ್ಥಾಪಕ ನಾಗಭೂಷಣ್ ಶೆಟ್ಟಿ, ಸಿ.ಇ.ಓ. ಅನಿಲ್ ಗುಪ್ತಾ, ನಿರ್ದೇಶಕಿ ಅರ್ಚನಾ, ನಿರ್ದೇಶಕರಾದ ನಾಗರಾಜ್ ನಾಯಕ್, ಯಶೋಧ ಅವರೊಂದಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನೀರು ಕಲುಷಿತವಾಗಿದ್ದರೆ ಮನುಷ್ಯ ಆರೋಗ್ಯ ಹಾಳಾಗುತ್ತದೆ. ಶೇಕಡ 90ರಷ್ಟು ರೋಗಗಳು ಕಲುಷಿತ ನೀರಿನಿಂದ ಬರುತ್ತವೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಅನಿಲ್ ಗುಪ್ತಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ರಿಗೋ ಕಂಪನಿ ಕಟ್ಟಿಬದ್ಧವಾಗಿ ದುಡಿಯುತ್ತಿದೆ. ರಿಗೋ ಕಂಪನಿ ಸ್ವದೇಶಿ ವಸ್ತುಗಳಿಂದ ಕರ್ನಾಟಕದಲ್ಲಿ ಶುದ್ಧ  ಕುಡಿಯುವ ನೀರಿನ ಯಂತ್ರ ಸಾಧನ, ಸಲಕರಣೆ ತಯಾರಿಕೆ ಮಾಡುತ್ತಿದೆ. ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸರಿಸುಮಾರು 18000 ಶಾಲೆಗಳಲ್ಲಿ ಶುದ್ದ ಕುಡಿಯುವ ನೀರಿನ ಯಂತ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ದೇಶದಲ್ಲಿ ಕಲುಷಿತ ನೀರಿನಿಂದ ಪ್ರತಿವರ್ಷ 5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಇಂತಹ ಕಲುಷಿತ ನೀರು ಕುಡಿಯಬಾರದು, ಶುದ್ದ ನೀರು ಕುಡಿಯಬೇಕು ಎಂಬ ರಿಗೋ ಕಂಪನಿಯ ಹೆಬ್ಬಯಕೆಯಾಗಿದೆ. ರಿಗೋ ಕಂಪನಿ ಶುದ್ದ ಕುಡಿಯವ ನೀರಿನ ಸಾಧನ ಸಲಕರಣೆ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತಿದೆ. ರಿಗೋ ಕಂಪನಿ ಸಿ.ಎಸ್.ಆರ್. ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಲಭಿಸಿದೆ ಎಂದರು.

Leave a Reply