ಬೆಂಗಳೂರು: ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಅವರ ಸ್ಟುಡಿಯೋದ ಮೂರು ಸಿನಿಮಾಗಳ ಎಕ್ಸ್‌ಕ್ಲೂಸಿವ್ ಪ್ರೀಮಿಯರ್ ಹಾಗೂ ಹಿಂದಿನ ಅವರ ಐದು ಸಿನಿಮಾಗಳನ್ನು ಎಲ್ಲರಿಗೂ ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಪ್ರೈಮ್ ವೀಡಿಯೋ ಘೋಷಿಸಿದೆ.
ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನಿಂದ ಮ್ಯಾನ್ ಆಫ್ ದಿ ಮ್ಯಾಚ್, ಒನ್ ಕಟ್ ಟು ಕಟ್ ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾಗಳ ಎಕ್ಸ್‌ಕ್ಲೂಸಿವ್ ವರ್ಲ್ಡ್ ಪ್ರೀಮಿಯರ್ ಅನ್ನು ಪ್ರೈಮ್ ವೀಡಿಯೋ ಘೋಷಿಸಿದೆ.
ಪುನೀತ್ ರಾಜ್‌ಕುಮಾರ್ ಅವರ ಇತ್ತೀಚಿನ ಐದು ಅತ್ಯಂತ ಜನಪ್ರಿಯ ಸಿನಿಮಾಗಳನ್ನು ಸ್ಟ್ರೀಮಿಂಗ್ ಸೇವೆಯು ಫೆಬ್ರವರಿ 1 ರಿಂದ ಎಲ್ಲರಿಗೂ ಉಚಿತವಾಗಿ ಒದಗಿಸಲಿದೆ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಕುರಿತ ಧ್ಯೇಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಹಭಾಗಿತ್ವ ನೀಡಲಾಗಿದೆ.
ಅಮೆಜಾನ್ ಪ್ರೈಮ್ ಇತ್ತೀಚಿನ ಮತ್ತು ಎಕ್ಸ್‌ಕ್ಲೂಸಿವ್ ಚಲನಚಿತ್ರಗಳು, ಟಿವಿ ಶೋಗಳು, ಸ್ಟ್ಯಾಂಡ್-ಅಪ್ ಕಾಮಿಡಿ, ಅಮೆಜಾನ್ ಒರಿಜಿನಲ್‌ಗಳ ಅನಿಯಮಿತ ಸ್ಟ್ರೀಮಿಂಗ್, ಅಮೆಜಾನ್ ಪ್ರೈಮ್ ಮ್ಯೂಸಿಕ್ ಮೂಲಕ ಜಾಹೀರಾತು-ಮುಕ್ತ ಸಂಗೀತ ಆಲಿಸುವಿಕೆ, ಭಾರತದ ಅತಿದೊಡ್ಡ ಉತ್ಪನ್ನಗಳ ಮೇಲೆ ಉಚಿತ ವೇಗದ ಡೆಲಿವರಿ, ಪ್ರಮುಖ ಡೀಲ್‌ಗಳಿಗೆ ಮೊದಲೇ ಅವಕಾಶ, ಪ್ರೈಮ್ ರೀಡಿಂಗ್‌ನೊಂದಿಗೆ ಅನಿಯಮಿತ ಓದುವಿಕೆ ಮತ್ತು ಪ್ರೈಮ್ ಗೇಮಿಂಗ್‌ನೊಂದಿಗೆ ಮೊಬೈಲ್ ಗೇಮಿಂಗ್ ಕಂಟೆಂಟ್ ಅನ್ನು ಒದಗಿಸುತ್ತದೆ. ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಚಂದಾದಾರರಾಗುವ ಮೂಲಕವೂ ಗ್ರಾಹಕರು ಈ ಶೀರ್ಷಿಕೆಗಳನ್ನು ವೀಕ್ಷಿಸಬಹುದು. ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯು ಏಕ-ಬಳಕೆದಾರ, ಮೊಬೈಲ್-ಮಾತ್ರ ಯೋಜನೆಯಾಗಿದ್ದು, ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಪ್ರಸ್ತುತ ಲಭ್ಯವಿದೆ.




