ಬೆಂಗಳೂರು: ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಮೊದಲಿಂದಲೂ ಉತ್ತೇಜನ ನೀಡುತ್ತಿರುವುದು ರಾಜಾಜಿನಗರ ವಿಧಾನಸಭಾ ಕ್ಷೇತ್ರ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇಹದಾರ್ಢ್ಯ ಮೂಲಕ ಯುವಕರಿಗೆ ಮಾದರಿಯಾದರು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಡಾ||ರಾಜ್ ಕುಮಾರ್ ಕಲಾಕ್ಷೇತ್ರ ಸಭಾಂಗಣದಲ್ಲಿ ಮೆಟ್ರೋ ಫ್ಲೆಕ್ಸ್ ಜಿಮ್ ಮತ್ತು ಬಾಡಿ ಕ್ರಾಫ್ಟ್ ಜಿಮ್ ಆಯೋಜಿಸಲಾಗಿದ್ದ ಅಖಿಲ ಭಾರತ ಮಟ್ಟದ 400 ಅಭ್ಯರ್ಥಿಗಳು ಸ್ಪರ್ಧಿಸಿರುವ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮಾತಾಡಿದ ಅವರು, ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಲು ಮತ್ತು ಮದ್ಯವ್ಯಸನ, ಡ್ರಗ್ಸ್ ಕೆಟ್ಟ ಚಟಗಳಿಂದ ದೂರ ಇರಬೇಕಾದರೆ ಯೋಗ ಮತ್ತು ದೇಹದಾರ್ಢ್ಯ ಕಸರತ್ತು, ಕಲೆಗಳನ್ನು ಯುವಕರು ಕಲಿಯಬೇಕು ಎಂದರು.
ದೇಹದಾರ್ಡ್ಯ ಸ್ಪರ್ಧೆಯಲ್ಲಿ ವಿವಿಧ ವಿಭಾಗದ ಭಾರತ ಶೇಷ್ಠ ಪ್ರಶಸ್ತಿಗೆ 1 ಲಕ್ಷ ಬಹುಮಾನ ಮತ್ತು ಭಾರತ ಉದಯ 50 ಸಾವಿರ, ಭಾರತ ಕೇಸರಿ 25 ಸಾವಿರ, ಭಾರತ ಫಿಟ್ನಸ್ 25 ಸಾವಿರ, ಭಾರತ ಕಿಶೋರ 50 ಸಾವಿರ, ಭಾರತ ಕುಮಾರ 50 ಸಾವಿರ, ಭಾರತ ಶ್ರೀ 50 ಸಾವಿರ ಪ್ರಶಸ್ತಿ ಫಲಕ, ನಗದು ಬಹುಮಾನ ಮತ್ತು ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.




