402 ಇನ್ಸ್‌ಪೆಕ್ಟರ್ (ಪಿಎಸ್ಐ) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ

3 years ago

ಬೆಂಗಳೂರು: ನೇಮಕಾತಿಯ ಅಕ್ರಮದ ಹಿನ್ನಲೆಯಲ್ಲಿ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) 402 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ ನಡೆಯಲಿದೆ.

402 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಲಿಖಿತ ಪರೀಕ್ಷೆ ನಡೆಸುವ ಸುಳಿವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ‌ ( ಡಿಜಿ-ಐಜಿಪಿ) ಪ್ರವಿಣ್ ಸೂದ್ ಅವರು ಟ್ವಿಟರ್ ನಲ್ಲಿ ನೀಡಿದ್ದಾರೆ.

402 ಎಸ್ಐ(ಸಿವಿಲ್) ಹುದ್ದೆಗಳು, ಸಿಎಆರ್/ಡಿಎಆರ್ &ಆರ್ಎಸ್ಐ, ಕೆಎಸ್ಆರ್ಪಿ-ಪಿಎಸ್ಐ, ಕೆಎಸ್ಐಎಸ್ಎಫ್-ಪಿಎಸ್ಐ ಹುದ್ದೆಗಳ ನೇಮಕಾತಿಗೆ 2021ರಲ್ಲಿ ಪೊಲೀಸ್ ನೇಮಕಾತಿ ವಿಭಾಗ ಅಧಿಸೂಚನೆ ಹೊರಡಿಸಿತ್ತು. ಕೆಲವೇ ದಿನಗಳಲ್ಲಿ ದೇಹದಾರ್ಢ್ಯ ಪರೀಕ್ಷೆ ಸಹ ಪೂರ್ಣಗೊಳಿಸಿತ್ತು. ಅಷ್ಟರಲ್ಲಿ 545 ಎಸ್ಐ ಹುದ್ದೆಗಳ ನೇಮಕಾತಿ ಅಕ್ರಮ ಬೆಳಕಿಗೆ ಬಂದ ಕಾರಣಕ್ಕೆ 402 ಹುದ್ದೆಗಳ ನೇಮಕಾತಿ ಸೇರಿ ಎಲ್ಲ ಲಿಖಿತ ಪರೀಕ್ಷೆಗಳನ್ನು ಮಂದೂಡಲಾಗಿತ್ತು.

ಮತ್ತೊಂದೆಡೆ 545 ಎಸ್ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದಲ್ಲಿ ಅನ್ಯಾಯಕ್ಕೆ ಒಳಗಾದವರು ಮತ್ತು ಪ್ರಾಮಾಣಿಕವಾಗಿ ಆಯ್ಕೆಗೊಂಡವರು ಹೋರಾಟದಲ್ಲಿ ತೊಡಗಿದ್ದರು. ಸಿಐಡಿ ತನಿಖೆ ವೇಳೆ ಹೋರಾಟದಲ್ಲಿ ಇದ್ದವರು ಮತ್ತು ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳೇ ಜೈಲಿಗೆ ಹೋದರು. ಸರ್ಕಾರ 545 ಎಸ್ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಮಾಡಿ ಆದೇಶಿಸಿತು. ಪೊಲೀಸ್ ಉದ್ಯೋಗ ಆಕಾಂಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಹಲವು ವರ್ಷಗಳಿಂದ ವ್ಯಾಸಂಗದಲ್ಲಿ ತೊಡಗಿದ್ದವರಿಗೆ ಪೊಲೀಸ್ ನೇಮಕಾತಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು.
ಪ್ರಾಮಾಣಿಕ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋದಾಗ, 545 ಎಸ್ಐ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸರ್ಕಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.

ಅಲ್ಲದೆ, ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರು ಹೈಕೋರ್ಟ್ ಗಮನಕ್ಕೆ ತರಬೇಕೆಂದು ಸೂಚನೆ ನೀಡಿತು. ಇದರಿಂದ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿತ್ತು. ನ.14ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್, ಆರ್ಎಸ್ಐ, ಸಿಎಆರ್/ಡಿಎಆರ್, ಕೆಎಸ್ಐಎಸ್ಎ್, ಕೆಎಸ್ಆರ್ಪಿ ಮತ್ತು ಪಿಎಸ್ಐ 402 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಶ್ರೀಘ್ರದಲ್ಲಿಯೇ ನಡೆಸುವುದಾಗಿ ಟ್ವಿಟರ್ ರಲ್ಲಿ ಸುಳಿವು ನೀಡಿದರು. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿದೆ.

ಕೆಲವರು 545 ಎಸ್ಐ ನೇಮಕಾತಿ ಹಗರಣದ ವಿರುದ್ಧ ಹೋರಾಟದ ನೆಪದಲ್ಲಿ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೆ ಹೈಕೋರ್ಟ್, ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಡೆಯಾಜ್ಞೆ ನೀಡಿದೆ. ಸರ್ಕಾರ ಸಹ ಸಿಐಡಿ ಅಂತಿಮ ವರದಿ ನೀಡುವವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಉಳಿದ ನೇಮಕಾತಿ ನಡೆಸಲು ಸರ್ಕಾರ ಮುಂದಾಗಿದೆ. ಆದರೆ, ಕೆಲವರು 545 ಹುದ್ದೆಗಳ ನೇಮಕಾತಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಬೇಕು. ಆನಂತರ ಉಳಿದ ನೇಮಕಾತಿಗೆ ಪ್ರಕ್ರಿಯೆ ಶುರು ಮಾಡಬೇಕೆಂದು ಹೋರಾಟಕ್ಕೆ ಮುಂದಾಗಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂನೆ ಮತ್ತು ಸರ್ಕಾರ ಉದ್ದೇಶಿತ ಲಿಖಿತ ಪರೀಕ್ಷೆಗೆ ಅಡ್ಡಿಯಾಗಲಿದೆ.

Leave a Reply