4ನೇ ತಾರೀಖು ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಹೋರಾಟ
ಬೆಂಗಳೂರು: ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯ್ ರಾಜ್ ಇಲಾಖೆಯ ವೃಂದ ಸಂಘಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ವತಿಯಿಂದ ಇಂದು ಸಮಸ್ಯೆಗಳು ಕುರಿತು ಸರ್ಕಾರದ ಗಮನ ಸೆಳೆಯಲು 4ನೇ ತಾರೀಖು ಫ್ರೀಡಂ ಪಾರ್ಕ್ ನಲ್ಲಿ ಸಂಪೂರ್ಣ ಕೆಲಸ ಬಂದ್ ಮಾಡಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಘೋಷಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕರ್ನಾಟಕ ರಾಜ್ಯ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ್, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಡಿ.ಇ.ಓ.ಗಳ ಸಂಘದ ಅಧ್ಯಕ್ಷ ಸೂರ್ಯಕುಮಾರ್, ರಾಜ್ಯ ಕರವಸೂಲಿಗಾರರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಅಟೆಂಡರ್ ಮತ್ತು ಸ್ವಚ್ಚತಗಾರರ ಸಂಘದ ಅಧ್ಯಕ್ಷ ರಾಜೇಶ್, ಎಸ್.ಸಿ./ಎಸ್.ಟಿ.ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಜಲಗಾರರ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಅನಿತಾ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.
ರಮೇಶ್ ಎಸ್. ಮಾತನಾಡಿ, ರಾಜ್ಯದ ಪಂಚಾಯಿತಿ ಅಧಿಕಾರಿಗಳನ್ನ ಗ್ರೂಪ್ ಬಿ-ದರ್ಜೆಗೆ ಏರಿಸಬೇಕು, ಏಳು ವರ್ಷ ಪೂರೈಸಿದ ಪಂಚಾಯಿತ್ ಅಭಿವೃದ್ದಿ ಅಧಿಕಾರಿಗಳನ್ನು ವರ್ಗಾವಣೆ ನಿಯಮ ಕೈಬಿಡಬೇಕು. ಯೋಜನೆಯ ಅನುಷ್ಠಾನ ಬಗ್ಗೆ ಗುರಿ ನಿಗದಿಯನ್ನು ಕೈಬಿಡುವುದು, ಗ್ರಾಮ ಪಂಚಾಯತ್ ಅಭಿಪ್ರಾಯ ಪಡೆದು ಮನೆ ನಿರ್ಮಾಣ ಕ್ರಮ ವಹಿಸಬೇಕು ಎಂದರು.
ಅಭಿವೃದ್ದಿ ಅಧಿಕಾರಿಗಳ ಜೇಷ್ಠತಾ ಪಟ್ಟಿ ಮತ್ತು ಬಡ್ತಿ ಸಮಸ್ಯೆ ನಿವಾರಣೆ ಮಾಡುವುದು. ತಜ್ಞರ ಸಮಿತಿ ನೇಮಕ ಮತ್ತು ಸಕಾಲ ವ್ಯಾಪ್ತಿಗೆ ಏಕರೂಪ ಅಡಿಟ್ ಪದ್ದತಿ ಜಾರಿಗೆ ತರುವುದು. ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಪ್ರಥಮ ದರ್ಜೆ ಸಹಾಯಕನಾಗಿ ಬಡ್ತಿ ನೀಡಬೇಕು, ಸಂವಿಧಾನ ಅಡಿಯಲ್ಲಿ 243ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯಿತ್ ಅಧಿನಿಯಮ ಆನ್ವಯ ಅಧಿಕಾರ, ಹಣಕಾಸು ಮಾನವ ಸಂಪನ್ಮೂಲ ಪಂಚಾಯಿತಿಗೆ ನೀಡಬೇಕು ಎಂದರು.
ಕಛೇರಿಯ ನಿರ್ವಹಣಾ ಕೈಪಿಡಿ ಜಾರಿಗೆ ತರಬೇಕು, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳಿಗೆ ಸಕ್ರಿಯವಾಗಿ ಇರಲು ಕಾನೂನು ರೂಪಿಸಬೇಕು. ಗ್ರಾಮ ಕೆಡಿಪಿ ಸಭೆ ಕಡ್ಡಾಯವಾಗಿ ಎಲ್ಲರು ಹಾಜರಾಗಬೇಕು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಶಿಷ್ಟಚಾರ ವ್ಯಾಪ್ತಿಗೆ ಕೇರಳ ಮಾದರಿಯಲ್ಲಿ ಗೌರವಧನ ಹೆಚ್ಚಳ ಮಾಡಬೇಕು ಎಂದರು.
ಸೇವಾರಹಿತ ಮತ್ತು ಬಾಕಿ ಇರುವ ಮತ್ತು ಇ.ಎಸ್.ಐ. ಹಾಗೂ ಪಿಎಫ್ ಸೌಲಭ್ಯ ನೀಡಬೇಕು. ರಾಜ್ಯದ ಎಲ್ಲ ಪಂಚಾಯಿತ್ ಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಮಂಜೂರು ಮಾಡಬೇಕು. ಗ್ರಾಮ ಪಂಚಾಯತ್ ಕುಡಿಯುವ ನೀರು ವಿದ್ಯುತ್ ಬೀದಿಗಳ ವಿದ್ಯುತ್ ಬಿಲ್ ಸರ್ಕಾರ ಭರಿಸಿದರು ಮತ್ತೇ ಹಳೆ ಬಿಲ್ಲು ನೀಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕು ಎಂದರು.
ಪಂಚಾಯತ್ ರಾಜ್ಯ ಲಾಂಛನ ನೀಡಬೇಕು. ಸಹಾಯಕ ನಿರ್ದೇಶಕ ಹುದ್ದೆಯಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಂದು ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.




