ಬೆಂಗಳೂರು: ಕವಿಪ್ರನಿನಿ ನೌಕರರ ಸಂಘ ಮತ್ತು ಅಸೋಸಿಯೇಷನ್ ಗಳ ಒಕ್ಕೂಟದ ವತಿಯಿಂದ ಕವಿಪ್ರನಿನಿ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಉದ್ಯೋಗಿಗಳಿಗೆ ಕೋವಿಡ್ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ “ಆಕ್ಸಿಜನ್ ಕಾನ್ಸೆಂಟ್ ಟ್ರೇಟರ್ ಪ್ಲಾಂಟ್” ಸ್ಥಾಪನೆ ಮಾಡಲು ರೂ. 15,00,000, (ಹದಿನ್ಶೆದು ಲಕ್ಷ) ವನ್ನು “ಕೊವಿಡ್ ರೀಲೀಫ್ ಫಂಡ್ ” ಗಾಗಿ ನೀಡಲಾಯಿತು.
ಕವಿಪ್ರನಿನಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎನ್. ಮಂಜುಳಾ ಚೆಕ್ ಸ್ವೀಕರಿಸಿದರು. ಈ ವೇಳೆ ನಿರ್ದೇಶಕ (ಆಡಳಿತ ಮತ್ತು ಮಾನವ ಸಂಪನ್ಮೂಲ) ಜಿ.ಎಂ. ಗಂಗಾಧರಸ್ವಾಮಿ ಉಪಸ್ಥಿತರಿದ್ದರು.
ಕೊವಿಡ್ ರಿಲೀಫ್ ಫಂಡ್ ಚೆಕ್ಕನ್ನು ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷ ಟಿ.ಆರ್. ರಾಮಕೃಷ್ಣಯ್ಯ ಹಾಗೂ ಕವಿಮಂ ಇಂಜಿನಿಯರುಗಳ ಸಂಘದ ಅಧ್ಯಕ್ಷ ಟಿ.ಎಂ.ಶಿವಪ್ರಕಾಶ್ ಪ್ರದಾನ ಮಾಡಿದರು.
ಕವಿಪ್ರನಿನಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ರಾಜನಾಯಕ್, ಕವಿಮಂ ಇಂಜಿನಿಯರುಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ತಿಪ್ಪೆಸ್ವಾಮಿ, ಹಿರಿಯ ಉಪಾಧ್ಯಕ್ಷ ಬಸವಣ್ಣ, ಕನ್ನಡ ಸಂಘದ ಕಾರ್ಯದರ್ಶಿ ಡಾ.ಎ.ಆರ್.ಗೋವಿಂದಸ್ವಾಮಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ತರಬೇತಿ ಕೇಂದ್ರವನ್ನು ಕೋವಿಡ್ ಕೇಂದ್ರವಾಗಿ ಪರಿವರ್ತಿಸಲು ಸಹ ನಿರ್ಣಯ ಕೈಗೊಳ್ಳಲಾಯಿತು.



