ಭೂಕಬಳಿಕೆದಾರರಿಂದ ಬಡವರ ರಕ್ಷಣೆ ಮಾಡಿ

4 years ago

ಬೆಂಗಳೂರು: ಜನಪರ, ದೀನದಲಿತರ ಪರ, ಮಹಿಳೆಯರ, ರೈತರ ಪರ ಹೋರಾಟದಲ್ಲಿ ನಮ್ಮ ಸಂಘ ಅವಿರತವಾಗಿ ಹೋರಾಟ ಮಾಡುತ್ತಾ ಬರುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ ಹೇಳಿದರು

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ರಾಯಸಂದ್ರ ಸರ್ವೆ ನಂಬರ್ ನಲ್ಲಿ ಸರ್ಕಾರದ ಜಾಗವಿದೆ. ಸರಿ ಸುಮಾರು ನೂರಾರು ಕುಟುಂಬಗಳು ಮತ್ತು ರೈತಾಪಿ ವರ್ಗದವರು, ದಲಿತ ಸಮುದಾಯದವರು ಗುಡಿಸಲುಗಳನ್ನು ಹಾಕಿಕೊಂಡು ಹಲವಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಭೂಕಬಕಳಿಕೆದಾರರಿಂದ ರಕ್ಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಆಧಾರ್ ಕಾರ್ಡ್, ವಿದ್ಯುತ್ ಸಂಪರ್ಕವಿದೆ. ನಾವು ವಾಸ ಮಾಡುವ ಜಾಗದಲ್ಲಿ ನಮಗೆ ನೆಲಸಲು ಅವಕಾಶ ಮಾಡಿಕೊಡಿ ಎಂದು ಹಲವಾರು ವರ್ಷಗಳಿಂದ ಮನವಿ ಮಾಡಿದ್ದೇವೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು, ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಸ್ವತ್ತಿನ ಸ್ಕೆಚ್ ಅನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲವು ಭೂಕಬಳಿಕೆದಾರರು, ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಬಡವರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ರಾಯಸಂದ್ರದಲ್ಲಿ 14 ಮಹಿಳೆಯರನ್ನ ಪೊಲೀಸ್ ಠಾಣೆಗೆ ಕರೆಸಿ, ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ. ಇದರ ವಿರುದ್ದ 20ನೇ ತಾರೀಖು ದೇವನಹಳ್ಳಿಯಲ್ಲಿರುವ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

Leave a Reply