ಪ್ರೊ. ಎಂ.ನಾಗರಾಜ್ ತಂಡದವರಿಂದ ನಾಮಪತ್ರ ಸಲ್ಲಿಕೆ
ಶುಭ್ರ, ಭ್ರಷ್ಟಚಾರ ಮುಕ್ತ ಪಾರದರ್ಶಕ ಆಡಳಿತ ನಮ್ಮ ಗುರಿ: ಎಂ.ನಾಗರಾಜ್
ಒಕ್ಕಲಿಗ ಸಮುದಾಯ ಸಂಘಟನೆ ಮತ್ತು ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ: ಹೆಚ್.ವಿ.ಅಶ್ವತ್ಥ
ಸಶಕ್ತ ಮತ್ತು ಸಧೃಡ ಒಕ್ಕಲಿಗರ ಸಂಘ ನಮ್ಮ ಗುರಿ: ಕೆ.ಟಿ.ನಾಗರಾಜ್
ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಕಾರ್ಯಕಾರಿ ಸಮಿತಿ ಚುನಾವಣೆಗೆ ಪ್ರೊ. ಎಂ.ನಾಗರಾಜ್ ಅವರ ತಂಡದ ಎಂ.ಎ.ಆನಂದ, ಹೆಚ್.ವಿ.ಅಶ್ವತ್ಥ, ಕೆ.ಟಿ.ನಾಗರಾಜ್, ಕೆ.ಕೃಷ್ಣಮೂರ್ತಿ ಪೂಜಾರಿಪಾಳ್ಯ, ಕೋದಂಡರಾಮ, ಆರ್.ಎಸ್.ಗೌಡ, ದಿವ್ಯ ಕೆ ಮೂರ್ತಿ, ಪಿಳ್ಳಪ್ಪ, ಜಿ.ಎಸ್.ಪುಟ್ಟೇಗೌಡ, ಬಿ.ಆರ್.ಬಾಲಕೃಷ್ಣ, ಹೆಚ್.ಡಿ.ಬೆಟ್ಟೇಗೌಡ, ಮುನೇಗೌಡ, ಯೋಗೇಶ್ ಗೌಡ, ಪ್ರೊ.ಸಿದ್ದೇಗೌಡ ಒಕ್ಕಲಿಗರ ಸಂಘದ ಅವರಣದಲ್ಲಿರುವ ನಾಡಪ್ರಭು ಕೆಂಪೇಗೌಡರಿಗೆ ಮಾಲಾರ್ಪಣೆ ಮಾಡಿ, ನಾಮಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪ್ರೊ.ನಾಗರಾಜ್ ಮಾತನಾಡಿ, ಒಕ್ಕಲಿಗರ ಸಮುದಾಯ ಸಂಘಟನೆ ನಮ್ಮ ಮುಖ್ಯ ಗುರಿ. ಆಡಳಿತದಲ್ಲಿ ಶುಭ್ರ, ಭ್ರಷ್ಟಚಾರ ಮುಕ್ತ ಪಾರದರ್ಶಕ ಆಡಳಿತಕ್ಕೆ ಬದ್ದರಾಗಿ ಕಾರ್ಯ ನಿರ್ವಹಿಸುವ ಸಲುವಾಗಿ ನಮ್ಮ ತಂಡ ಕಾರ್ಯಕಾರಿ ಸಮಿತಿಗೆ ಚುನಾವಣೆಗೆ ನಿಂತಿದೆ. ಒಕ್ಕಲಿಗ ಬಾಂಧವರು ನಮ್ಮ ಪರ ಇದ್ದಾರೆ. ನಮ್ಮ ಗೆಲುವು ನಿಶ್ಚಿತ ಎಂದರು.
ಹೆಚ್.ವಿ.ಅಶ್ವತ್ಥ ಮಾತನಾಡಿ, ಕಳೆದ ಬಾರಿ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸಮುದಾಯದ ಸಂಘಟನೆ, ಶಿಕ್ಷಣದ ಬಗ್ಗೆ ಅತಿ ಹೆಚ್ಚು ಸಮಯ ಸಕ್ರಿಯವಾಗಿ ದುಡಿದಿದ್ದೇನೆ. ನಮ್ಮ ತಂಡದಲ್ಲಿ ಉತ್ತಮ ಅಭ್ಯರ್ಥಿಗಳು, ಚಿಂತಕರು ಇದ್ದಾರೆ. ಒಕ್ಕಲಿಗರ ಸಂಘದ ಆಸ್ತಿಗಳ ರಕ್ಷಣೆ ಮತ್ತು 500 ಜನ ನೌಕರರಿಗೆ ಖಾಯಂ ಮಾಡುವುದು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದು ಮತ್ತು ರಾಜ್ಯ ಒಕ್ಕಲಿಗ ಸಮುದಾಯ ಸಂಘಟನೆ ನಮ್ಮ ಗುರಿ ಎಂದರು.
ಕೆ.ಟಿ.ನಾಗರಾಜ್ ಮಾತನಾಡಿ, 100 ವರ್ಷಗಳ ಇತಿಹಾಸವಿರುವ ರಾಜ್ಯ ಒಕ್ಕಲಿಗರ ಸಂಘ ಹಲವು ಮಹನೀಯರು ಸಮುದಾಯದ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕಳೆದ 30 ವರ್ಷಗಳ ಬಿ.ಬಿ.ಎಂ.ಪಿ.ಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಮ್ಮ ಒಕ್ಕಲಿಗರ ಸಮುದಾಯ ಸಶಕ್ತಗೊಳಿಸಲು ಶ್ರಮವಹಿಸುತ್ತೇವೆ ಎಂದರು.



