ಅನಧಿಕೃತ ಟ್ರ್ಯಾಕ್ಟರ್ ನಿಯಂತ್ರಿಸಲು ಮೊರೆ

5 years ago

ಬೆಂಗಳೂರು: ಕನ್ನಡ ಶಾಶ್ವತ ಸಾಮ್ರಾಜ್ಯ ಸಂಘಟನೆ ವತಿಯಿಂದ ಮೌರ್ಯ ವೃತ್ತದ ಬಳಿ ಎರಡು ವರ್ಷಗಳಿಂದ ಅನಧಿಕೃತ ಟ್ರಾಕ್ಟರ್ ಮತ್ತು ಟ್ರೇಲರ್ಗಳ ಹಾವಳಿಯ ವಿರುದ್ಧ ಪ್ರತಿಭಟನೆ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ಅಪರ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕನ್ನಡ ಶಾಶ್ವತ ಸಾಮ್ರಾಜ್ಯ ಮತ್ತು ಮಿನಿ ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ವಿ.ನಾಗಪ್ಪ ಮತ್ತು ತಿಮ್ಮಪ್ಪ ಹಾಗೂ ನಗರಾಧ್ಯಕ್ಷ ನಾರಾಯಣಸ್ವಾಮಿ ಜೊತೆಗೆ ನೂರಾರು ಮಿನಿ ಲಾರಿ ಮಾಲೀಕರು ಪಾಲ್ಗೊಂಡಿದ್ದರು

ಸಾರಿಗೆ ಆಯುಕ್ತರು ಹೊರಡಿಸಿದ ಆದೇಶಗಳು ಪಾಲನೆ ಆಗದೇ ಮಿನಿ ಲಾರಿ ಮಾಲೀಕರಾದ ನಮ್ಮ ವ್ಯವಹಾರದಲ್ಲಿ ಸಾಕಷ್ಟು ನಷ್ಟವಾಗುತ್ತಿದ್ದು ನಾವುಗಳು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ಕಡಿಮೆ ರಸ್ತೆತೆರಿಗೆ, ಇನ್ನೂರೆನ್ಸ್ ಇಲ್ಲದ ಸಬ್ಸಿಡಿಯಲ್ಲಿ ಕೃಷಿ ಚಟುವಕೆಗಳಿಗೆ ಅನುಮತಿ ಪಡೆದ ಮತ್ತು ಪರಿಟ್ ಇಲ್ಲದ ಟ್ರ್ಯಾಕ್ಟರ್‌ಗಳು ಹಾಗೂ ನಂಬರ್ ಪ್ಲೇಟ್‌ಗಳು ಮತ್ತು ಸೂಕ್ತ ದಾಖಲೆಗಳಿಲ್ಲದ ಅನಧಿಕೃತ ಟ್ರಾಕ್ಟರ್ ಮತ್ತು ಟ್ರೇಲರ್‌ಗಳು ಕರ್ನಾಟಕ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ವಾಣಿಜ್ಯ ಮತ್ತು ಎಲ್ಲಾ ಕಟ್ಟಡ ಸಾಮಗ್ರಿಗಳ ಬಾಡಿಗೆ ಹೊಡೆಯುತ್ತಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವುದಲ್ಲದೇ, ಮಿನಿ ಲಾರಿ ಮಾಲೀಕರಾದ ನಮ್ಮ ವ್ಯವಹಾರಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುತ್ತಿರುವುದರ ಬಗ್ಗೆ ನಾವುಗಳು ಸಾಕಷ್ಟು ಬಾರಿ ಸಾರಿಗೆ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದರು.

ನಮ್ಮ ಮನವಿಗಳನ್ನು ಪುರಸ್ಕರಿಸಿದ ಸಾರಿಗೆ ಆಯುಕ್ತರು ಈ ಬಗ್ಗೆ ಗಮನ ಹರಿಸಿ 27-1-2021 ದಿನಾ೦ಕ: ರಂದು ಇಂತಹ ಟ್ರಾಕ್ಟರ್ ಮತ್ತು ಟ್ರೇಲರ್ಗಳ ವಿರುದ್ಧ ಕ್ರಮ ಜರುಗಿಸಲು ಸಾಆ/ಪ್ರ 3/&eo-141/20-21 ಪತ್ರ ಸಂಖ್ಯೆಯ ಆದೇಶವೊಂದನ್ನು ಹೊರಡಿಸಿದ್ದು, ಈ ಆದೇಶದ ಬಗ್ಗೆ ರಾಜ್ಯಾದ್ಯಂತ ಯಾವುದೇ ಪ್ರಾದೇಶಿಕ ಅಧಿಕಾರಿ (ಆರ್‌ಟಿಓ) ಗಳು ಕ್ರಮ ಕೈಗೊಳ್ಳದ ಬಗ್ಗೆ 22-09-2021 ರಂದು ಬೆಂಗಳೂರು ನಗರ ಜಂಟಿ ಸಾರಿಗೆ ಆಯುಕ್ತರಿಗೆ ಮತ್ತೊಮ್ಮೆ ಸಲ್ಲಿಸಿದ ಮನವಿಗೆ ಜಂಟಿ ಆಯುಕ್ತರು ಪತ್ರ ಸಂಖ್ಯೆ ಜಂ.ಸಾ.ಆ/ಬೆಂ (ನಗರ)/3ವೈವ-533/2021-22 ರಂತೆ ಅದೇಶ ಹೊರಡಿಸಿದ್ದರೂ ಈ ಆದೇಶಗಳೆಲ್ಲ ಕೇವಲ ಆದೇಶವಾಗಿ ಉಳಿದಿದೆ. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಪ್ರಾದೇಶಿಕ ಅಧಿಕಾರಿ (ಆರ್‌ಟಿಒ) ಗಳು ನಮಗೆ ಸಹಾಯ ಮಾಡುವ ಗೋಜಿಗೆ ಹೋಗಿಲ್ಲ ಎಂದರು.

ಆದೇಶ ಪಾಲನೆಯಾಗದ ಬಗ್ಗೆ ಆಯುಕ್ತರಿಗೆ 27-10-2021 ರಂದು ಮತ್ತೊಮ್ಮೆ ಮನವಿ ಮಾಡಿದ್ದೇವೆ. ಸ್ಥಳೀಯ ಮಟ್ಟದ ಆರ್ ಟಿಒ ಅಧಿಕಾರಿಗಳನ್ನು ನಾವುಗಳು ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ಇದ್ದು ನಾವು ಯಾವುದೇ ಆದೇಶ ಪಾಲನೆಗೆ ತಯಾರಿಲ್ಲವೆಂದು ರಾಜಾರೋಷವಾಗಿ ಹೇಳುತ್ತಾರೆ ಎಂದರು.

ಕೋವಿಡ್ ಅಪ್ಪಳಿಸುವ ಮೊದಲು ನಾವುಗಳು ಸಾಲ ಮಾಡಿ ಲಾರಿಗಳಿಗೆ ಬಂಡವಾಳ ಹೂಡಿ ಬೆಳಗಿನಿಂದ ಸಂಜೆಯವರೆಗೆ ಮೈ ಮುರಿದು ದುಡಿದು ಕೂಲಿಯವರಿಗೆ ಕೂಲಿ ಕೊಟ್ಟು ಸಾಲಗಾರರಿಗೆ ಬಡ್ಡಿ ಕಟ್ಟುತ್ತ ಸಂಸಾರ ಸಾಗಿಸಿಕೊಂಡು ಬರುತ್ತಿದ್ದೆವು. ಕೋವಿಡ್ ನಂತರ ಹತ್ತಾರು ಸಾವಿರ ಅನಧಿಕೃತ ಟ್ರಾಕ್ಟರ ಟ್ರೇಲರ್‌ಗಳು ನಗರ ಪ್ರದೇಶಕ್ಕೆ ಬಂದು ನಾವು ಮಾಡುವ ಎಲ್ಲಾ ಕೆಲಸಗಳನ್ನು ಅತೀ ಕಡಿಮೆ ಬಾಡಿಗೆ ದರದಲ್ಲಿ ನಿರ್ವಹಿಸಿ ನಮ್ಮ ಮಿನಿ ಲಾರಿಗಳಿಗೆ ಕೆಲಸವೇ ಇಲ್ಲದಂತಾಗಿದೆ ಎಂದರು.

ಇದೇ ಕಾರಣದಿಂದ ಕೂಲಿಯಾಳುಗಳ ಕೂಲಿ ಹೊರತುಪಡಿಸಿ ನಮ್ಮ ವಾಹನಕ ಟ್ಯಾಕ್ಸ್, ಇನ್ಸೂರೆನ್ಸ್, ಎಫ್‌ಸಿಗಾಗಿ ವಾರ್ಷಿಕವಾಗಿ ತಗಲುವ ಖರ್ಚು 60 ರಿಂದ 70000 ರೂಪಾಯಿಗಳು. ಆದರೆ ಟ್ರಾಕ್ಟರ್ ಗಳಿಗೆ ಒಂದೆರಡು ಸಾವಿರ ರೂಪಾಯಿಗಳು. ಆದ್ದರಿಂದ ಅವರ ಬಾಡಿಗೆ ದರ 800 ರಿಂದ 1200 ರೂಪಾಯಿಗಳು, ಮಿನಿ ಲಾರಿಗಳಲ್ಲಿ ಅಷ್ಟೇ ತೂಕ ಸರಕುಗಳಿಗೆ ಬಾಡಿಗೆ ದರ 1800 ರಿಂದ 3000 ರೂಪಾಯಿಗಳು. ಆದ್ದರಿಂದ ಕಡಿಮೆ ದರದ ಟ್ರಾಕ್ಟರ್ಗಳ ಬಾಡಿಗೆ ಸಿಗುತ್ತಿದೆಯೇ ಹೊರತು ನಮಗೆ ಬಾಡಿಗೆಯೆಂಬುದು ಮರೀಚಿಕೆಯಾಗಿದೆ ಎಂದರು.

ಸಾಲಗಾರರಿಗೆ ಬಡ್ಡಿ ಕಟ್ಟಲಾಗದೇ ಮಕ್ಕಳ ಶಾಲಾ ಶುಲ್ಕ ಕಟ್ಟಲಾಗದೇ, ಕೊನೆಗೆ ಕುಟುಂಬದ ಪೋಷಣೆಗೂ ಪರದಾಡುವ ಸ್ಥಿತಿಯಲ್ಲಿ ನರಳುತ್ತಿರುವ ನಮಗೆ ಸರ್ಕಾರದ ಸಹಾಯ ಬೇಡ, ನಮ್ಮ ವ್ಯವಹಾರಕ್ಕೆ ಮುಳುವಾಗಿರುವ ಟ್ರಾಕ್ಟರ್ ಟ್ರೇಲರ್ಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಸಾರಿಗೆ ಇಲಾಖೆ, ಸರ್ಕಾರ ಮುಖ್ಯ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಮುಖ್ಯಮಂತ್ರಿಗಳು, ಸಾರಿಗೆ ಮಂತ್ರಿಗಳು, ಸಂಚಾರ ಪೋಲೀಸ್ ಉನ್ನತಾಧಿಕಾರಿಗಳಿಗೆಲ್ಲ ಕಾಡಿ ಬೇಡುತ್ತಿದ್ದರೂ, ಈ ಬಗ್ಗೆ ಕ್ರಮ ಕೈಗೊಳ್ಳದೇ ನಮ್ಮ ಮತ್ತಷ್ಟು ದುಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಾರಿಗೆ ಇಲಾಖೆ ಯ ಅಪರ ಆಯುಕ್ತರಾದ ನರೇಂದ್ರ ಹೋಳಕ್ಕರ್ ರವರ ಪ್ರತಿಭಟನ ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕರಿಸಿ ,ಕೊಡಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Leave a Reply