ಶಿಕ್ಷಣಕ್ಕೆ ಆದ್ಯತೆ ನೀಡಿ, ತಂತ್ರಜ್ಞಾನ ಆಳವಡಿಕೆ ಮೂಲಕ ಶಿಕ್ಷಣಕ್ಕೆ ಪ್ರಾಧಾನ್ಯತೆ: ವಿ.ಸೋಮಣ್ಣ

4 years ago

ರಾಜಕೀಯ ನಿಂತ ನೀರಲ್ಲ,ಸಾಧನೆ ಮಾಡುವುದು ಮುಖ್ಯ-ವಸತಿ ಸಚಿವ

ಬೆಂಗಳೂರು: ಪ್ರತಿಭೆ ಯಾರ ಮನೆಯ ಸ್ವತ್ತಲ್ಲ, ಪ್ರತಿಭೆಗಳನ್ನು ಗುರುತಿಸಿ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಲು ಪದವಿಪೂರ್ವ ಕಾಲೇಜ್ ಅನ್ನು ಉನ್ನತೀಕರಣ ಮಾಡಿ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ಕಾವೇರಿಪುರ ವಾರ್ಡ್‌ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕ ಹಾಗೂ ಬಿ.ಬಿ.ಎಂ.ಪಿ ಪದವಿಪೂರ್ವ ಕಾಲೇಜು
ಎರಡನೇ ಅಂತಸ್ತಿನ ಕೊಠಡಿ, ಗಣಕ ವಿಜ್ಞಾನ ಪ್ರಯೋಗಾಲಯದ ಉದ್ಘಾಟನೆ ನೆರವೇರಿಸಿ ಮಾತಾಡಿದ ಅವರು,  ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಕೃಪಾ ಆಶೀರ್ವಾದದಿಂದ ಜನ ಸೇವೆ ಮಾಡುತ್ತಿದ್ದೇನೆ. ಬಾಲಗಂಗಾಧರನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಬಾಳಯ್ಯನ ಕೆರೆ ಅಭಿವೃದ್ದಿ ಪಡಿಸಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ನೀಡಲು ಪ್ರಥಮ ದರ್ಜೆ ಕಾಲೇಜುನ್ನು 10 ಕೋಟಿ ರೂಪಾಯಿ ವೆಚ್ಚದಲ್ಲಿ 1200 ಮಕ್ಕಳಿಗೆ ಕಟ್ಟಡವನ್ನು ಮಾನಸ ನಗರದಲ್ಲಿ ನಿರ್ಮಿಸಲಾಗಿದೆ. ನಾಯಂಡಹಳ್ಳಿ, ಪಂತರಪಾಳ್ಯ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು.

ಶಿಕ್ಷಣಕ್ಕೆ ಆದ್ಯತೆ ನೀಡಿ, ತಂತ್ರಜ್ಞಾನ ಆಳವಡಿಕೆ ಮೂಲಕ ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ. ಸಾಮಾನ್ಯ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಶಿಕ್ಷಣ ನೀಡಲು ಸಾಧ್ಯವಿಲ್ಲ. ಆದ್ದರಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಿಕ್ಷಣ ಸಂಸ್ಥೆಯಾಗಿ ನಿರ್ಮಿಸಲಾಗಿದೆ ಎಂದರು.

ಕನಕಭವನ 13 ಕೋಟಿ ವೆಚ್ಚದಲ್ಲಿ ಐ.ಎ.ಎಸ್. ಮತ್ತು ಐ.ಪಿ.ಎಸ್. ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗುವುದು. ಕನಕ ಭವನ ಕಟ್ಟಡವನ್ನು ಕಾಗಿನೆಲೆ ಗುರುಪೀಠಕ್ಕೆ ಹಸ್ತಾಂತರ ಮಾಡಲಾಗುವುದು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದರು.

61 ದೇವಸ್ಥಾನ, 79 ಶುದ್ದ ಕುಡಿಯುವ ನೀರು ಘಟಕಗಳು, 50 ಪಾರ್ಕ್ ಗಳನ್ನು ಲೋಕರ್ಪಣೆ ಮತ್ತು ನವೀಕರಣ ಮಾಡಲಾಗಿದೆ. ನಾಯಂಡಹಳ್ಳಿಯಲ್ಲಿ 3800 ಕೋಟಿ ವೆಚ್ಚದಲ್ಲಿ ಮೆಟ್ರೋ ಕಾಮಗಾರಿ,  ಮಾಳಗಾಳ ರಸ್ತೆ ಆಧುನೀಕರಣ, ಪಂತರಪಾಳ್ಯ ಮತ್ತು ದಾಸರಹಳ್ಳಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ದಾಸರಹಳ್ಳಿಯಲ್ಲಿರುವ ಆಸ್ಪತ್ರೆ ಎರಡು ತಿಂಗಳ ಒಳಗೆ ಲೋಕರ್ಪಣೆ ಮಾಡಲಾಗುವುದು ಎಂದರು.

ವಿದ್ಯಾವಂತ ಬಡ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ನೇತೃತ್ವದಲ್ಲಿ ವಿದ್ಯಾಸಿರಿ ಯೋಜನೆಯ ಮೂಲಕ 40 ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ ಎಂದರು.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮುಖಂಡರಾದ ವಿಶ್ವನಾಥಗೌಡ, ಕೆ.ಉಮೇಶ್ ಶೆಟ್ಟಿ, ಪಲ್ಲವಿ ಚನ್ನಪ್ಪ, ವಾಗೇಶ್, ದಾಸೇಗೌಡ, ರೂಪ ಲಿಂಗೇಶ್ವರ್ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಧಿಕಾರಿ, ನೌಕರರ ಸಂಘದ ಉಪಾಧ್ಯಕ್ಷ ಡಾ.ಎಂ.ಸೋಮಶೇಖರ್, ಕೆ.ಹೆಚ್.ಬಿ. ಮಾಜಿ ಅಧ್ಯಕ್ಷ ಕುಮಾರ್, ರಾಜಪ್ಪ, ಶ್ರೀಧರ್ , ಮಲ್ಲಿಕಾರ್ಜುನರವರು ಭಾಗವಹಿಸಿದ್ದರು.

Leave a Reply