ಭ್ರಷ್ಟಾಚಾರದ ವಿರುದ್ಧ ಅಬ್ಬರಿಸುವ ಪ್ರಧಾನಿಗಳೇ ಸಿ.ಎ.ಜಿ. ವರದಿ ಬಗ್ಗೆ ತನಿಖೆ ನಡೆಸಿ

3 years ago

#primeminister #shouts #against #corruption #Investigate #cag #report #ksnagaraj

ಕಳೆದ 9 ವರ್ಷದಿಂದ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಮಾಡಿಲ್ಲವೆಂದು ವೇದಿಕೆಗಳು ಸಿಕ್ಕ ಸಿಕ್ಕ ಕಡೆಯಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ವಿರೋಧಪಕ್ಷಗಳನ್ನು ಸದಾ ಟೀಕಿಸುವ ಮಾನ್ಯ ಪ್ರಧಾನಮಂತ್ರಿಗಳು, ಕಳೆದ ಕೆಲವು ದಿನಗಳ ಹಿಂದೆ ಕೇಂದ್ರ ಲೆಕ್ಕ ಪರಿಶೋಧನಾ ವರದಿಯಲ್ಲಿ ಹಲವಾರು ಲಕ್ಷ ಕೋಟಿ ರೂಪಾಯಿಗಳ ಹಣದ ದುರುಪಯೋಗದ ಬಗ್ಗೆ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯೆ ನೀಡಬೇಕು.

ಭ್ರಷ್ಟಾಚಾರದ ವಿರುದ್ಧ ಅಬ್ಬರಿಸುವ ತಾವುಗಳು ಕೂಡಲೇ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಿ.ಎ.ಜಿ. ವರದಿಯಲ್ಲಿ ಪ್ರಸ್ತಾಪಿಸಿರುವ ವಿಚಾರಗಳ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಿ ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿರುವ ನಿಮ್ಮ ಹಿತೈಷಿಗಳನ್ನು ಬಂಧಿಸುವಂತಹ ಸಾಹಸವನ್ನು ಮಾಡಬೇಕಾಗಿದೆ.

ದ್ವಾರಕ ಎಕ್ಸ್‌ಪ್ರೆಸ್ ರಸ್ತೆ ಇಲ್ಲಿ ಈ ಮೊದಲು ಕೇವಲ 588 ಕೋಟಿ ರೂಪಾಯಿಗಳ ಯೋಜನಾ ವೆಚ್ಚವನ್ನು 7287 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಂಡಿರುವುದು ಸಾವಿರಾರು ಪ್ರಮಾಣದಲ್ಲಿ ಅಂದಾಜು ವೆಚ್ಚ ಏರಿಕೆಯಾಗಿರುವುದು ಗುರುತಿಸಿದ್ದಾರೆ. ಅದೇ ರೀತಿಯಲ್ಲಿ ಭಾರತಮಾಲ ಎಂಬ ರಾಷ್ಟ್ರೀಯ ರಸ್ತೆಗಳ ಹೆದ್ದಾರಿಗಳ ಜೋಡಣೆಯ ಕಾಮಗಾರಿಯಲ್ಲಿ ಹಲವಾರು ಲಕ್ಷ ಕೋಟಿ ರೂಪಾಯಿಗಳ ವ್ಯತ್ಯಾಸಗಳಿವೆ ಎಂಬ ವಿಚಾರವು ಪ್ರಸ್ತಾಪವಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಸೇವೆಯ ಯೋಜನೆಯಲ್ಲಿಯೂ ಸಹ ಹಲವಾರು ರೀತಿಯ ಸಂಶಯಗಳನ್ನು ಸಿ.ಎ.ಜಿ. ವರದಿ ಬಹಿರಂಗಪಡಿಸಿದೆ.

ಈ ಹಿನ್ನಲೆಯಲ್ಲಿ ಅನ್ಯರ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ತಮ್ಮನ್ನು ತಾವೇ ಶ್ರೇಷ್ಠರೆಂದು ಹಾಡಿಹೊಗಳಿಕೊಳ್ಳುವ ಪ್ರಧಾನಮಂತ್ರಿಗಳು ಕೂಡಲೇ ಈ ವಿಚಾರದಲ್ಲಿ ತಮ್ಮ ಮೌನವನ್ನು ಮುರಿಯಬೇಕೆ ಹೊರತು ಅಬ್ಬರದ ಮಾತುಗಳು ಬೇಕಿಲ್ಲ.

ಸಾಮಾನ್ಯವಾಗಿ ಪ್ರಧಾನಮಂತ್ರಿಗಳು ಲೋಕಸಭೆಯಲ್ಲಿ ವಿರೋಧಪಕ್ಷಗಳ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಸಂದರ್ಭದಲ್ಲಿ ಸಮರ್ಥಿಸುವ ಸಂಸದೀಯ ಭಾಷೆಯೊಂದಿದೆ. ಆದರೆ ನಮ್ಮ ಪ್ರಧಾನಮಂತ್ರಿಗಳು ಚುನಾವಣಾ ರ್ಯಾಲಿಗಳಲ್ಲಿ ವಿರೋಧಪಕ್ಷಗಳನ್ನು ಟೀಕಿಸುತ್ತಾ ಯಾವರೀತಿ ಮಾತನಾಡುತ್ತಾರೊ ಅದೇ ದಾಟಿಯಲ್ಲಿ ಲೋಕಸಭೆಯಲ್ಲೂ ಮಾತನಾಡುತ್ತಾರೆ. ಕೆಂಪುಕೋಟೆಯ ಮೇಲೆ ನಿಂತು ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಕೂಡ ಅದೇ ದಾಟಿಯಲ್ಲಿ ಮಾತನಾಡುತ್ತಾರೆ. ಇವರಿಗೆ ಸಂದೇಶಕೊಡುವುದಕ್ಕೂ ಮತ್ತು ಭಾಷಣ ಮಾಡುವುದಕ್ಕೂ ಇರುವ ವ್ಯತ್ಯಾಸದ ಅರಿವಿದ್ದಂತಿಲ್ಲ.

ಪ್ರಧಾನಮಂತ್ರಿಗಳು ಮಾತನಾಡಲು ಸದ್ಯ ಮತ್ತೆ ಲೋಕಸಭೆಯನ್ನು ಕರೆಯುವಂತೆ ಮಾಡಬೇಡಿ. ಕೂಡಲೇ ಸಿ.ಎ.ಜಿ. ವರದಿಯ ಬಗ್ಗೆ ಮಾತನಾಡಿ ನಿಮ್ಮ ಹನಿಮುತ್ತುಗಳಿಗಾಗಿ ರಾಷ್ಟ್ರದ ಜನ ಕಾಯುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಬಿ.ಜೆ.ಪಿ. ದೇಶದ್ಯಾದಂತ ಮಾಹಿತಿಯನ್ನು ಪಡೆದು ಯಾವ ಯಾವ ರಾಜ್ಯದಲ್ಲಿ ವಿವರವಾದ ಪರಿವಾರದ ಕುಡಿಗಳು ರಾಜಕಾರಣದಲ್ಲಿ ಯಾವ ಯಾವ ಸ್ಥಾನದಲ್ಲಿದ್ದಾರೆ ಎಂಬ ಪಟ್ಟಿಯನ್ನು ಪ್ರಕಟಿಸಿ ನೀವು ಮಾತಿನಂತೆ ನಡೆದುಕೊಳ್ಳುವುದಾದರೆ ಆ ಪರಿವಾರದ ಕುಡಿಗಳನ್ನು ಮನೆಗೆ ಕಳುಹಿಸಿಕೊಟ್ಟು ಮುಂದಿನ ದಿನಗಳಲ್ಲಿ ‘ಅನ್ಯಪಕ್ಷದ ಪರಿವಾರದ ರಾಜಕಾರಣದ ಬಗ್ಗೆ ಮಾತನಾಡಿ, ಬಿಜೆಪಿ ಪರಿವಾರದ ಕಾರಣದ ಪಟ್ಟಿ ಲಭ್ಯವಿಲ್ಲದಿದ್ದರೆ ದೇಶದ ಜನತೆ ನಿಮಗೆ ಈ ಪಟ್ಟಿಯನ್ನು ಒದಗಿಸಲು ಸಿದ್ಧರಿದ್ದಾರೆ.

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply