ರೂಪಾಂತರ, ರಂಗಚಂದಿರ ವತಿಯಿಂದ ರಂಗಭೂಮಿ ಕಲಾವಿದರಿಗೆ ನೆರವು

5 years ago

ಬೆಂಗಳೂರು: ಅನಿರೀಕ್ಷಿತ ಲಾಕ್ ಡೌನ್ ನಿಂದಾಗಿ ಕಷ್ಟನಷ್ಟಗಳಿಗೆ ಸಿಲುಕಿರುವ ರಂಗಭೂಮಿ ಆಧಾರಿತ ಕಲಾವಿದರ ಗೋಳನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಲಾವಿದರನ್ನು ಗುರುತಿಸಿ, ಅವರಿಗೆ ನೆರವಿನ ಹಸ್ತ ಚಾಚುವ ಮೂಲಕ ಬೆಂಗಳೂರಿನ ರೂಪಾಂತರ ಮತ್ತು ರಂಗಚಂದಿರ ರಂಗತಂಡಗಳು ಮಾನವೀಯತೆಯನ್ನು ಮೆರೆದಿವೆ.

ರವೀಂದ್ರ ಕಲಾಕ್ಷೇತ್ರದ ರಂಗ ತಾಲೀಮು ಕೊಠಡಿಯ ಬಳಿ ರೂಪಾಂತರ ಮತ್ತು ರಂಗ ಚಂದಿರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಮಾರು 200 ಜನ ಹವ್ಯಾಸಿ ರಂಗಭೂಮಿ ಕಲಾವಿದರು, ತಂತ್ರಜ್ಞರು, ಕಲಾಕ್ಷೇತ್ರದ ಸಿಬ್ಬಂದಿ, ಕಾರ್ಮಿಕರಿಗೆ ಫುಡ್ ಕಿಟ್ ಗಳನ್ನು ವಿತರಿಸಲಾಯಿತು.

ವಿತರಣೆ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಅಭಿನೇತ್ರಿ ಪ್ರೇಮಾ, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮತ್ತು ಹಿರಿಯ ರಂಗ ನಿರ್ದೇಶಕ ಡಾ.ಬಿ.ವಿ.ರಾಜರಾಂ,  ಹಾಗೂ ಕಿರು ತೆರೆ ನಿರ್ಮಾಪಕ ಅರವಿಂದ ಶಶಿ ಫುಡ್ ಕಿಟ್ ಭಾಗವಹಿಸಿದ್ದರು.

ರಂಗ ಕಲಾವಿದರಿಗೆ ಫುಡ್ ಕಿಟ್ ಗಳನ್ನು ಒದಗಿಸಲು ನೆರವಾದ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಚಲನಚಿತ್ರ ನಟಿ ಪ್ರೇಮಾ ಹಾಗೂ ಅರವಿಂದ ಶಶಿಯವರಿಗೆ ರೂಪಾಂತರ ಮತ್ತು ರಂಗ ಚಂದಿರ ಟ್ರಸ್ಟ್ ಧನ್ಯವಾದಗಳನ್ನು ಸಲ್ಲಿಸಿದೆ.

Leave a Reply