“ದಲಿತರು ಹಿಂದೂಗಳಲ್ಲ”
ಆರ್ಎಸ್ಎಸ್ ಹಾಗೂ ಬಿಜೆಪಿಯ ಒಳಮನಸಿನ ಸತ್ಯವನ್ನು ಮಾನ್ಯ ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ.
ಈ ಸ್ಪಷ್ಟನೆ ನೀಡಿದ್ದಕ್ಕೆ ಧನ್ಯವಾದಗಳು ಜೋಶಿಯವರೇ,
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಹಿಂದೂಗಳೇ ಬೇರೆ, ದಲಿತರೇ ಬೇರೆ ಮತ್ತು ಸನಾತನದವರೇ ಬೇರೆ ಎನ್ನುವ ಆರ್ಎಸ್ಎಸ್ ಹಾಗೂ ಬಿಜೆಪಿಯ ವಿಭಜನಾತ್ಮಕ ಧೋರಣೆಯನ್ನು ಜೋಶಿಯವರು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿದ್ದಾರೆ.
ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ ಎನ್ನುವುದು ಸಂಘ ಪರಿವಾರದೊಳಗಿನ ಸತ್ಯ. ಈ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಕ್ಕೆ ಅಭಿನಂದನೆಗಳು!
ಜೋಶಿಯವರೇ, ನಿಮ್ಮ ಈ ಪ್ರತ್ಯೇಕತಾ ಧೋರಣೆಗಾಗಿಯೇ, ಈ ತಾರತಮ್ಯಕ್ಕಾಗಿಯೇ ಬಾಬಾ ಸಾಹೇಬರು “ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ“ ಎಂದು ಬೌದ್ಧ ದಮ್ಮ ದೀಕ್ಷೆ ಪಡೆದಿದ್ದು.
@BJPKarnataka ನಾಯಕರಿಗೆ ಬಾಬಾ ಸಾಹೇಬರ ಸಿದ್ಧಾಂತದ ಮೇಲೆ ನೈಜ ಗೌರವ ಇರುವುದೇ ಆದರೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಿ, ತಾರತಮ್ಯದ ಬಗೆಗಿನ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಓದಲಿ.
– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ




