ಗುಂಪು ಮನೆ ಯೋಜನೆಗೆ ಅರ್ಜಿ ಆಹ್ವಾನ

5 years ago

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಪಾಲಿಕೆ ವ್ಯಾಪ್ತಿಯ ನಗರ ಆಶ್ರಯ ವಸತಿ ಯೋಜನೆಯ ಎ.ಎಚ್.ಪಿ ಘಟಕದ ‘ಡಿ’ ಗುಂಪು ಮನೆ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಎ.ಎಚ್.ಪಿ ಘಟಕದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಂಡಗಳ್ಳಿ ಬಡಾವಣೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ 2446 ಮನೆ ಗುಂಪು ಮನೆಗಳನ್ನು ನೀಡಲು ನೀಡುವ ಸಲುವಾಗಿ ಚಾಮುಂಡೇಶ್ವರಿ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 07, ಮೇಟಗಳ್ಳಿ ವಾರ್ಡ್ ನಂಬರ್ 44, ಜನತಾ ನಗರ ವಾರ್ಡ್ ನಂಬರ್ 45, ಶಾರದದೇವಿ ನಗರ ವಾರ್ಡ್ ನಂಬರ್ 46, ದಟ್ಟಗಳ್ಳಿ ವಾರ್ಡ್ ನಂಬರ್ 58, ರಾಮಕೃಷ್ಣ ನಗರ ನಿವಾಸಿಗಳು ಹಾಗೂ ಹೂಟಗಳ್ಳಿ ನಗರಸಭೆ ಬೋಗಾದಿ ಕಡಕೊಳ ರಮ್ಮನಹಳ್ಳಿ ಮತ್ತು ಶ್ರೀರಾಂಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಗುಂಪು ಮನೆ ಯೋಜನೆಗೆ ಆಗಸ್ಟ್ 10 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply