ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಕುರಿತು ಸ್ಥಳೀಯ ಹಿಂದಿ, ಉರ್ದು ಪತ್ರಕರ್ತರಾದ ಆದಿತ್ಯ ತಿವಾರಿ, ಮನೋಜ್, ಸುನಿಲ್, ಸಮೀರ್, ಸಾಕ್ಷಿ ಜೋಷಿ ಮುಂತಾದವರ ಜೊತೆ ನಡೆಸಿದ ಚರ್ಚೆ ಆದರಿಸಿ ಈ ಕೆಳಗಿನ ಸಾರಾಂಶ
1. ಈ ಬಾರಿ ಅತಂತ್ರ ವಿಧಾನಸಭೆಯ ಸಾಧ್ಯತೆಗಳಿವೆ. ಮತ್ತು ಇಂತಹ ಸಂದರ್ಭದಲ್ಲಿ ಬಿಜೆಪಿ biggest manipulator ಆಗಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಊಹಿಸಿಕೊಳ್ಳಬಹುದು.
2. ಯಾದವೇತರ ಹಿಂದುಳಿದ ವರ್ಗಗಳ ಮತಗಳು ಎಸ್ ಪಿ ಮತ್ತು ಬಿಜೆಪಿ ನಡುವೆ 60:40 ಅನುಪಾತದಲ್ಲಿ ಹಂಚಿ ಹೋಗಿರುವ ಸಾಧ್ಯತೆಗಳಿವೆ.
3. ಮುಸ್ಲಿಂ ಮತಗಳು ಹೆಚ್ಚೂ ಕಡಿಮೆ ಎಸ್ ಪಿ ಮೈತ್ರಿಕೂಟದ ಪರವಾಗಿದೆ (ಪ.ಬಂಗಾಳದಲ್ಲಿ ಟಿಎಂಸಿಗೆ ದೊರಕಿದ ರೀತಿ? )
4. ಈ ಬಾರಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಆದರೆ ಸ್ವತಂತ್ರವಾಗಿ ನಿರ್ಣಯಿಸಿ ಮತ ಚಲಾಯಿಸಿದ್ದಾರೆಯೇ ಎನ್ನುವುದಕ್ಕೆ ನಿದರ್ಶನಗಳಿಲ್ಲ. ಪುರುಷರ ಆದೇಶದ ಮೇರೆಗೆ ಅವರು ಸೂಚಿಸುವ ಪಕ್ಷಕ್ಕೆ ವೋಟು ಮಾಡಿರುವ ಸಾಧ್ಯತೆಗಳಿವೆ. ಇದು ಫಲಿತಾಂಶದ ದಿಕ್ಕನ್ನು ನಿರ್ದರಿಸಬಲ್ಲದು. ಮತ್ತು ಇದಕ್ಕೆ ಪೂರಕವಾಗಿ ಬಹು ಚರ್ಚಿತ ಉಚಿತ ಪಡಿತರ ಕುರಿತು ಐದು ಬಗೆಯ ವರ್ಗಗಳಿವೆ:
ಅನೇಕ ಮಹಿಳೆಯರು 5 ಕೆಜಿ ಉಚಿತ ಪಡಿತರದಿಂದ ಸಂತುಷ್ಟರಾಗಿಲ್ಲ, ಇದು ಶೇ. 30% ಪ್ರಮಾಣದಲ್ಲಿ ಮಾತ್ರ ಅನುಕೂಲವಾಗಿದೆ ಎಂಬುದು ಸಾಮಾನ್ಯ ವಾದವಾಗಿದೆ
- ಒಂದು ವರ್ಗಕ್ಕೆ ಪಡಿತರವೇ ದೊರಕುತ್ತಿಲ್ಲ, ಅವರು ಮತ ಚಲಾಯಿಸಿದರೇ?
2. ಎರಡನೇ ವರ್ಗಕ್ಕೆ ಒಂದು ಕಾಲದಲ್ಲಿ ದೊರಕುತ್ತಿದ್ದ ಪಡಿತರ ಈಗ ನಿಂತು ಹೋಗಿದೆ
3. ಮೂರನೇ ವರ್ಗಕ್ಕೆ ದೊರಕುತ್ತಿರುವ ಪಡಿತರ ಗುಣಮಟ್ಟ ಕಳಪೆಯಾಗಿದೆ, ಅದೇನು ತಿಂಗಳಿಡೀ ಊಟ ಕೊಡುವುದಿಲ್ಲ ಎಂಬ ಆಕ್ರೋಶ
4. ನಾಲ್ಕನೇ ವರ್ಗಕ್ಕೆ ಪಡಿತರ ದೊರಕುತ್ತಿರುವುದು ನಿಜವಾದರೂ ಅದು ಚುನಾವಣಾ ವಿಷಯವೇ ಅಲ್ಲ
5. ಐದನೇ ವರ್ಗಕ್ಕೆ ಪಡಿತರ ವ್ಯವಸ್ಥೆಯಿಂದ ಕುಶಿಯಾಗಿದ್ದಾರೆ.
ಈ ಐದು ವರ್ಗಗಳಲ್ಲಿ ಯಾವುದರ ಪ್ರಮಾಣ ಹೆಚ್ಚು, ಯಾವುದು ಕಡಿಮೆ ಎಂಬುದು ನಿಖರತೆ ಇಲ್ಲ. ಬಿಜೆಪಿಗೆ ಐದನೇ ವರ್ಗ ಹೆಚ್ಚಾಗಿ ಕಂಡುಬಂದರೆ ಎಸ್ ಪಿ ಮೈತ್ರಿಕೂಟಕ್ಕೆ ಮೂರನೇ ವರ್ಗ ಹೆಚ್ಚಾಗಿ ಕಂಡುಬಂದಿದೆ. ಆದರೆ ಐದೂ ವರ್ಗದ ಮಹಿಳೆಯರು ಸ್ವತಂತ್ರವಾಗಿ ಮತ್ತು ಚಲಾಯಿಸಿಲ್ಲ ಎಂಬುದು ನಿಜವಾಗಿದ್ದರೆ ಅದು ಎಸ್ ಪಿ ಮೈತ್ರಿಕೂಟದ ನಿದ್ದೆ ಕೆಡಿಸಿದೆ ಮತ್ತು ಬಿಜೆಪಿಗೆ ಅನುಕೂಲಕರವಾಗಿದೆ
ಹಾಗೆ ನೋಡಿದರೆ ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ, ಮುಂದೆ ನೀಡುವ ಭರವಸೆ ಕೊಟ್ಟ ಪ್ರಿಯಾಂಕಾ ಗಾಂಧಿ ಪರವಾಗಿ ಮತ ಹಾಕಬೇಕಿತ್ತು, ಆದರೆ ವಾಸ್ತವ ಹಾಗಿಲ್ಲ. ಒಂದು ವೇಳೆ ಮಹಿಳೆಯರು ಪ್ರಿಯಾಂಕಾ ಕಾರಣಕ್ಕೆ ಉತ್ಸಾಹದಿಂದ ಕಾಂಗ್ರೆಸ್ ಗೆ ಮತ ಹಾಕಿದರೆ ಅದು ಬಿಜೆಪಿಗೆ ಲುಕ್ಸಾನು ಎಂಬುದು ನಿಜ. ಒಟ್ಟಾರೆ ಬಿಜೆಪಿ ಇಲ್ಲಿನ ಗೊಂದಲದ ಲಾಭ ಪಡೆಯಲು ಯಶಸ್ವಿಯಾಗಿದೆಯೇ ಎಂಬುದು ನಾಳೆ ಗೊತ್ತಾಗುತ್ತದೆ.
5. ರೈತ ಹೋರಾಟ, ನಿರುದ್ಯೋಗ ಸಮಸ್ಯೆ ಕುರಿತು ಯುವಜನತೆ, ಸರಕಾರದ ವಿರುದ್ಧ ಆಕ್ರೋಶ ಗೊಂಡಿದ್ದ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ, ಜಾತಿ ಧರ್ಮದ ಪ್ರಚೋದನೆಗೆ ಒಳಗಾಗದೆ ತಮ್ಮ ಮತ ಚಲಾಯಿಸಿದ್ದಾರೆಯೇ ಎನ್ನುವುದರಲ್ಲಿ ಭಿನ್ನಮತವಿದೆ. ಒಂದು ವೇಳೆ ಪ್ರಚೋದನೆಗೆ ಬಲಿಯಾಗದೆ ಮತ ಹಾಕಿದ್ದಾರೆ ಎಂಬುದಾದರೆ ಬಿಜೆಪಿಗೆ ಹಿನ್ನಡೆ ಎಂಬುದು ನಿಜ. But with crossed fingers. Not confirmed.
6. 12-14 ಗಂಟೆಗಳ ವಿದ್ಯುತ್ ಪೂರೈಕೆ, ಪಡಿತರ ಸಹಾಯ ಬಿಜೆಪಿಗೆ edge ಕೊಡಬಹದು ಎಂದು ಹಲವರ ಅಭಿಪ್ರಾಯ. ಆದರೆ ಮೇಲಿನ ಲೆಕ್ಕಾಚಾರಗಳಾಚೆ ಕೆಲವು ವಾಸ್ತವಗಳು ಮಾತ್ರ ಸತ್ಯ
1. ಆರೆಸ್ಸೆಸ್ ಸಿದ್ದಾಂತ ಕೆಳಹಂತದವರೆಗೂ ಬೇರು ಬಿಟ್ಟಿದೆ. Very pierrful.
ಬಿಜೆಪಿ ಬಳಿಯಿರುವ ಲಕ್ಷಾಂತರ ಕಾರ್ಯಕರ್ತರು, ಕೋಟ್ಯಾಂತರ ಮೊತ್ತದ ಹಣಕ್ಕೆ ಹೋಲಿಸಿದರೆ ವಿರೋಧ ಪಕ್ಷಗಳು ದುರ್ಬಲವಾಗಿವೆ. ಹೀಗಾಗಿ 300 + ಸೀಟುಗಳನ್ನು ಹೊಂದಿರುವ ಬಿಜೆಪಿ ಪಕ್ಷವನ್ನು 140-150ಕ್ಕೆ ಕುಂಠಿತಗೊಳಿಸಬೇಕೆಂದರೆ ಬಲು ದೊಡ್ಡ ಆಡಳಿತ ವಿರೋದಿ ಅಲೆ ಹುಟ್ಟಿಕೊಳ್ಳಬೇಕಾಗುತ್ತದೆ. ಆದರೆ ಅದು ಕಂಡುಬರುತ್ತಿಲ್ಲ.
2. ಎರಡನೆಯದಾಗಿ ಅಖಿಲೇಶ್ ಗೆ ಅಭೂತಪೂರ್ವ ಮಟ್ಟದಲ್ಲಿ ವಿರೋಧ ಪಕ್ಷದ ಸಂಘಟನೆ ಮಾಡಲು ಅಗತ್ಯವಾಗಿರುವ ಸಾಮರ್ಥ್ಯದ ಕೊರತೆಯಿದೆ. ಆದರೆ ಎಕ್ಸಿಟ್ ಪೋಲ್ ತಮ್ಮ ಪರವಾಗಿದ್ದರೂ ಸಹ ಬಿಜೆಪಿ body language ನಲ್ಲಿ ಉತ್ಸಾಹ ಕಂಡುಬರುತ್ತಿಲ್ಲ. ಇದು ಅನೇಕ ಸಂಗತಿಗಳನ್ನು ಹೇಳುತ್ತದೆ
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




