ಬಡವರ ಸೇವೆ ದೇವರ ಸೇವೆ : ಟಿ.ಮಲ್ಲೇಶ್

4 years ago

ಬೆಂಗಳೂರು: ಮಹಾನಗರ ಪಾಲಿಕೆ ಮಾಜಿ ಸದಸ್ಯ, ಜೆ.ಡಿ.ಎಸ್.ಮುಖಂಡರಾದ ಟಿ.ಮಲ್ಲೇಶ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಾಯ ಹಸ್ತ ಟೀಮ್ ವತಿಯಿಂದ 25ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಗಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಆಟೋ ಚಾಲಕರಿಗೆ ಸಮವಸ್ತ್ರ, ಕಣ್ಣಿನ ದೋಷ ಇರುವವರಿಗೆ ಕನ್ನಡಕ, ಪೌರ ಕಾರ್ಮಿಕರಿಗೆ ಮತ್ತು ವಾರ್ಡ್‌ನ್ ಮಹಿಳೆಯರಿಗೆ ಸೀರೆ ವಿತರಣೆ, ಹಾಗು ರಕ್ತದಾನ ಮಾಡಿದ ಸ್ವಯಂ ಸೇವಕರಿಗೆ ಸನ್ಮಾನ ಆಯೋಜಿಸಲಾಗಿತ್ತು.

ಜೆ.ಡಿ.ಎಸ್.ಮುಖಂಡರಾದ ನಾರಾಯಣಸ್ವಾಮಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಟಿ.ಮಲ್ಲೇಶ್ , ಪ್ರಮೀಳ ಟಿ.ಮಲ್ಲೇಶ್, ಜೆ.ಡಿ.ಎಸ್.ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿ ಅವರು ಬಡವರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಎಂದರು. ಜನರ ನಡುವೆ ಜನರ ಸಮಸ್ಯೆಗಳು ಆಲಿಸಿ ಪರಿಹರಿಸುವ ಕಾರ್ಯ ಮಾಡಿದಾಗ ಜನನಾಯಕನಾಗಿ ಬೆಳಯಲು ಸಾಧ್ಯ ಎಂದರು.

ಗಾಂಧಿನಗರ ಸುಭಾಶ್ ನಗರ ವಾರ್ಡ್ ಅತ್ಯಂತ ಕಡುಬಡವರು ವಾಸಿಸುವ ಜನಸಂಖ್ಯೆಯುಳ್ಳ ಪ್ರದೇಶವಾಗಿದೆ. ಇಲ್ಲಿನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ತರಬೇಕು, ಸೇವಾ ಮನೋಭಾವನೆಯಿಂದ ಕೆಲಸ ಮಾಡಿದಾಗ ಮಾತ್ರ ರಾಜ್ಯ,ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

Leave a Reply