ರಮೇಶ್ ಅವರನ್ನು ರಾಜಕೀಯವಾಗಿ ಮುಗಿಸುವ ಸಂಚು: ಲಖನ್ ಜಾರಕಿಹೊಳಿ

5 years ago

ಗೋಕಾಕ್: ರಮೇಶ್ ಅವರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಫೇಕ್ ಸಿಡಿ ಮಾಡಲಾಗಿದೆ ಎಂದು ರಮೇಶ್‌ ಜಾರಕಹೊಳಿ ಸೋದರ ಮತ್ತು ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಹೇಳಿದರು.

ಸಿಡಿ ಪ್ರಕರಣದ ಕುರಿತು ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿ ಬೆಳೆಯುವ ರಮೇಶ್ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ. ಈ ಕೇಸ್ ನಲ್ಲಿ ರಮೇಶಣ್ಣ ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರದಾದ್ಯಂತ ಜನರು ಅವರನ್ನು ರಮೇಶ್  ಅಣ್ಣ ಎಂದು ಕರೆಯುತ್ತಾರೆ. ಅವರು ಹೀಗೆ ಮಾಡ್ತಾರೆ ಅಂತ ಯಾರಿಗೂ ಅನಿಸೋದಿಲ್ಲ. ರಮೇಶ ಅಣ್ಣನನ್ನು ಕ್ಷೇತ್ರದ ಜನ ಬಿಟ್ಟುಕೊಡೋಕೆ ತಯಾರಿಲ್ಲ ಹಾಗೂ ಕ್ಷೇತ್ರದ ಜನ ಇದನ್ನು ನಂಬಲೂ ಸಾಧ್ಯವಿಲ್ಲ ಎಂದರು.

ಮೊದಲಿಂದಲೂ ಜಾರಕಿಹೊಳಿ ಸಹೋದದರು ಒಂದಾಗಿ ಹೋಗ್ತಿದ್ದೇವೆ. ಜನರನ್ನು ನಾವು ಸರಿ ಸಮನಾಗಿ ನೊಡ್ಕೊಂಡು ಸಾಗುತ್ತಿದ್ದೇವೆ. ಇದು ಕೆಲವೇ ದಿನಗಳ ಕಹಿ ಘಟನೆ. ಮತ್ತೆ ರಮೇಶ ಅಣ್ಣನಿಗೆ ಒಳ್ಳೆಯ ದಿನಗಳು ಬರ್ತವೆ. ಮೋಡ ಕವಿದ ವಾತಾವರಣ ನಿರ್ಮಾಣ ಆಗಿದೆ. ಮೋಡ ಹೋದ ಮೇಲೆ ಬೆಳದಿಂಗಳು ಬಂದೆ ಬರುತ್ತೆ. ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಅವರ ಬೆಂಬಲಕ್ಕಿದ್ದಿನಿ ಎಂದರು.

Leave a Reply