ಬೆಂಗಳೂರು: ವಯಸ್ಸಿನ ಕಾರಣದಿಂದ ಆಗುವ ಅರಳು-ಮರಳಿನಿಂದಲೋ ಅಥವಾ ಚುನಾವಣೆ ಸೋಲುವ ಹತಾಶೆಯಿಂದಲೋ ಇತ್ತೀಚೆಗೆ ಅಸಂಗತವಾಗಿ ಮಾತಾಡುತ್ತಿರುವ ಪ್ರಧಾನಿ ಮೋದಿಯವರು ‘ರಾಷ್ಟ್ರೀಯ ಪೆದ್ದ’ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಿರುವ ದಿನೇಶ್ ಗುಂಡೂರಾವ್, ಗಾಂಧಿಯವರ ಕುರಿತು ಸಿನಿಮಾ ಬರುವವರೆಗೂ ಮಹಾತ್ಮ ಗಾಂಧಿ ಯಾರೆಂದು ಗೊತ್ತಿರಲಿಲ್ಲ ಎಂಬ ಮೋದಿಯವರ ಪೆದ್ದುತನದ ಹೇಳಿಕೆ ಅವರ ಬೌದ್ಧಿಕ ಮಟ್ಟದ ಬಗ್ಗೆ ಅನುಮಾನ ಮೂಡಿಸುತ್ತದೆ ಇಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿಯವರು, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ನೆಲ್ಸನ್ ಮಂಡೇಲಾರಂತೆ ಜಾಗತಿಕ ಮನ್ನಣೆ ಪಡೆದಿದ್ದ ವಿಶ್ವ ನಾಯಕ. ಮೋದಿಯವರಂತೆ ಸ್ವಯಂ ಘೋಷಿತ ವಿಶ್ವಗುರು ಹಾಗೂ ದೇವಮಾನವರಾಗಿರಲಿಲ್ಲ ಎಂದಿದ್ದಾರೆ.
ಸಂವಹನ ಮಾಧ್ಯಮಗಳು ಬಲಿಷ್ಠವಾಗಿರದ ಆ ಕಾಲದಲ್ಲೂ ಗಾಂಧೀಜಿಯವರ ಅಹಿಂಸಾ ತತ್ವ, ಹರತಾಳ, ಹಾಗೂ ಸತ್ಯಾಗ್ರಹಗಳು ವಿಶ್ವದ ಗಮನ ಸೆಳೆದಿದ್ದವು. ಚಲನಚಿತ್ರ ಬಂದ ಮೇಲೆ ಗಾಂಧೀಜಿ ಯಾರೆಂದು ತಿಳಿಯಿತು ಎಂಬ ಪ್ರಧಾನಿಯವರ ಹೇಳಿಕೆ ಇತಿಹಾಸದ ಬಗ್ಗೆ ಅವರಿಗಿರುವ ಅಜ್ಞಾನ ತೋರಿಸುತ್ತದೆ ಎಂದಿದ್ದಾರೆ.
ಇತ್ತಿಚೆಗಂತೂ ಪ್ರಧಾನಿ ಮೋದಿಯವರು ಮೆದುಳು ಹಾಗೂ ನಾಲಗೆಗೆ ಸಂಪರ್ಕವೇ ಇಲ್ಲದಂತೆ ಮಾತಾಡುತ್ತಿದ್ದಾರೆ. ಸಿನಿಮಾ ಬಂದ ಮೇಲೆ ಮಹಾತ್ಮ ಗಾಂಧಿ ಯಾರೆಂದು ತಿಳಿಯಿತು ಎಂಬ ಅವರ ಹೇಳಿಕೆಗೆ ನಗಬೇಕೋ ಅಥವಾ ಅಳಬೇಕೋ ಎಂಬ ಗೊಂದಲ ಜನರನ್ನು ಕಾಡುತ್ತಿದೆ ಎಂದಿದ್ದಾರೆ.
ಮೋದಿಯವರ ಪ್ರಕಾರವೇ ಹೇಳುವಾದರೆ, ಧಾರಾವಾಹಿಗಳ ರೂಪದಲ್ಲಿ ಟಿವಿಯಲ್ಲಿ ಪ್ರಸಾರವಾದ ಮೇಲೆಯೇ ರಾಮಾಯಣ ಮತ್ತು ಮಹಾಭಾರತ ಜನರಿಗೆ ಗೊತ್ತಾಯಿತು ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ. ಪ್ರಧಾನಿ ಮೋದಿಯವರು ಯಾಕೆ ಇಷ್ಟೊಂದು ಅಸಂಬದ್ಧವಾಗಿ ಮಾತಾಡುತ್ತಿದ್ದಾರೋ ಅರ್ಥವೇ ಆಗುತ್ತಿಲ್ಲ. ಏನಾಗಿದೆ ಮೋದಿಯವರಿಗೆ? ಎಂದು ಪ್ರಶ್ನಿಸಿದ್ದಾರೆ.




