ಹೈನುಗಾರಿಕೆಯ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಜೀವನಾಧಾರವಾಗಿರುವ ಕರ್ನಾಟಕ ರಾಜ್ಯದ ನಂ.1 ನಂದಿನಿ ಹಾಲಿನ ಘಟಕವನ್ನು ಗುಜರಾತ್ ನ ಅಮುಲ್ ಸಂಸ್ಥೆಯೊಂದಿಗೆ ವಿಲೀನ ಮಾಡುವ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಅವರ ರೈತ ವಿರೋಧಿ ಚಿಂತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಬಡ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಅನ್ನು ರದ್ದು ಮಾಡುವುದು, ಪಿಂಚಣಿ ವ್ಯವಸ್ಥೆಯನ್ನು ಹಾಳು ಮಾಡುವುದು, ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಡಿತಗೊಳಿಸುವುದರ ಆದಿಯಾಗಿ ಇನ್ನೂ ಹತ್ತು ಹಲವು ರೀತಿಯಲ್ಲಿ ಮನಸೋಚ್ಛೆಯಾಗಿ ವರ್ತಿಸುತ್ತಿರುವ ಬಿಜೆಪಿಗರಿಗೆ ಆಡಳಿತಾತ್ಮಕವಾಗಿ ತರಲೆ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದು ಈ ಸಾಲಿಗೆ ಇದೀಗ ನಂದಿನಿ ಸಂಸ್ಥೆಯನ್ನು ವಿಲೀನಗೊಳಿಸುವ ಸಂಗತಿಯು ಸೇರ್ಪಡೆಯಾಗಿದೆ.
ವಿಕೇಂದ್ರೀಕರಣದ ಮಹತ್ವ ತಿಳಿಯದೇ ಎಲ್ಲವೂ ಒಬ್ಬರ ಕಪಿ ಮುಷ್ಢಿಯಲ್ಲಿ ಇರಬೇಕೆಂಬ ಸರ್ವಾಧಿಕಾರ ಬಿಜೆಪಿಗರ ಹುಚ್ಚಾಟಗಳಿಗೆ ಎಲ್ಲರೂ ಒಗ್ಗೂಡಿ ಬ್ರೇಕ್ ಹಾಕಬೇಕಿದೆ
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




