ಅನರ್ಹರ ಕಾರ್ಡುಗಳನ್ನು ಮಾತ್ರ ರದ್ದುಪಡಿಸಿ ಎಪಿಎಲ್ ಕಾರ್ಡುಗಳನ್ನು ವಿತರಿಸಲಾಗುವುದು: ಕೆ ಹೆಚ್ ಮುನಿಯಪ್ಪ

1 year ago

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನುಸಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಮಾಡಲಾಗುತ್ತಿದ್ದು ಅನರ್ಹರ ಕಾರ್ಡುಗಳನ್ನು ಮಾತ್ರ ರದ್ದುಪಡಿಸಿ ಅವರಿಗೆ ಎಪಿಎಲ್ ಕಾರ್ಡುಗಳನ್ನು ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ದಕ್ಷಿಣ ಭಾರತದಲ್ಲಿ ಬಿಪಿಎಲ್ ಕಾರ್ಡ್‌ಗಳು ಕರ್ನಾಟಕದಲ್ಲೇ ಹೆಚ್ಚು. ಕೇಂದ್ರ ವಿತರಿಸಿರುವ ಬಿಪಿಎಲ್ ಕಾರ್ಡುಗಳ ಪಟ್ಟಿಯ ಪ್ರಕಾರ ಶೇ.75 ರಷ್ಟು ಬಿಪಿಎಲ್‌ ಕಾರ್ಡ್‌ಗಳು ಕರ್ನಾಟಕದಲ್ಲಿ ಇವೆ ಎಂದರು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಟ್ಟಿ ಪರಿಷ್ಕರಣೆಗೆ ಸೂಚಿಸಿದೆ ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ ಪರಿಷ್ಕರಣೆಯ ಸಮಯದಲ್ಲಿ ಅನರ್ಹರು ಕಂಡುಬಂದರೆ  ಕಾರ್ಡ್ ರದ್ದು ಮಾಡಲ್ಲ. ಬದಲಿಗೆ ಅವರನ್ನ ಎಪಿಎಲ್‌ ಕಾರ್ಡ್‌ಗೆ ಸೇರಿಸಲಾಗುತ್ತದೆ ಎಂದರು.

ಕೆಲವೊಂದು ಸಮಸ್ಯೆಗಳಿಂದ ಅರ್ಹರು ಎಪಿಎಲ್‌ ಹೋದ 24 ಘಂಟೆಯೊಳಗೆ ಅರ್ಜಿ ಹಾಕಿದ್ರೆ ಪಡಿತರ ವಿತರಣೆ ಮಾಡಲಾಗುವುದು. ಮುಂದಿನ ತಿಂಗಳು ಹೊಸದಾಗಿ ಬಿಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಆಹ್ವಾನ ಮಾಡುತ್ತೇವೆ ಎಂದರು. 

Leave a Reply