ಶಿವಮೊಗ್ಗ: 2025-26 ನೇ ಶೈಕ್ಷಣಿಕ ಪ್ರವೇಶಕ್ಕಾಗಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಸರ್ಕಾರಿ ಸೀಟುಗಳಿಗೆ ಶಿಕಾರಿಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಸ್ಎಸ್ಎಲ್ಸಿ ಉತೀರ್ಣ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಎಸ್ಎಸ್ಎಲ್ಸಿ ವಿದ್ಯಾರ್ಹತೆಗೆ ಒಟ್ಟು 84 ಸೀಟ್ಗಳಿವೆ. ಇವುಗಳಲ್ಲಿ ಎಲೆಕ್ಟ್ರಿಷಿಯನ್, ಎಲೆಕ್ಟಾನಿಕ್ಸ್ ಮೆಕ್ಯಾನಿಕ್, ಫಿಟ್ಟರ್ ಮತ್ತು ಟರ್ನರ್ ಕೋರ್ಸ್ಗಳಿದ್ದು, ತರಬೇತಿ ಅವಧಿ 2 ವರ್ಷದ್ದಾಗಿದೆ.
ಉದ್ಯೋಗ ಯೋಜನೆಯಡಿ ಒಟ್ಟು 172 ಸಿಟ್ಗಳಿವೆ. ಎಸ್ಎಸ್ಎಲ್ಸಿ ಪಾಸಾಗಿರುವ ಅಭ್ಯರ್ಥಿಗಳಿಗೆ ಮೆಕ್ಯಾನಿಕಲ್ ಎಲೆಕ್ಟ್ರಿಕ್ ವೆಹಿಕಲ್, ಸಿಎನ್ಸಿ ಮೆಷಿನಿಂಗ್ ಟೆಕ್ನಿಷಿಯನ್, ವರ್ಚುಯಲ್ ಅನಲೈಸಿನ್ ಅಂಡ್ ಡಿಸೈನರ್ ವೃತ್ತಿಗಳ ಕೋರ್ಸ್ 2 ವರ್ಷಗಳ ಅವಧಿಯದ್ದಾಗಿದೆ. ಇಂಡಸ್ಟ್ರೀಯಲ್ ರೋಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಿಫ್ಯಾಕ್ಟರಿಂಗ್ ಟೆಕ್ನಿಷಿಯನ್, ಇಂಜನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ಹಾಗೂ ಮ್ಯಾನ್ಯುಫಾಕ್ಟರಿಂಗ್ ಪ್ರೋಸಸ್ ಕಂಟ್ರೊಲ್ ಅಂಡ್ ಆಟೋಮೇಷನ್ ವೃತ್ತಿಗಳಿಗೆ 1 ವರ್ಷ ಅವಧಿಯದ್ದಾಗಿದೆ.
ಪಿಪಿಪಿ-ಐಎಂಸಿ(ಮ್ಯಾನೆಜ್ಮೆಟ್ ಸೀಟ್) ನಲ್ಲಿ ಒಟ್ಟು 104 ಸೀಟ್ಗಳಿವೆ. ಎಸ್ಎಸ್ಎಲ್ಸಿ ಪಾಸಾದ ಅಭ್ಯರ್ಥಿಗಳಿಗೆ ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ವೃತ್ತಿಗಳಿಗೆ 2 ವರ್ಷಗಳ ಅವಧಿಯದ್ದಾಗಿದ್ದು, ಹಾಗೂ ಎಸ್ಎಸ್ಎಲ್ಸಿ ಅನುತ್ತೀರ್ಣ ಅಥವಾ ಎಂಟನೇ ತರಗತಿ ಉತ್ತೀರ್ಣ ವಿದ್ಯಾರ್ಹತೆಗೆ ವೆಲ್ಡರ್ ವೃತ್ತಿ ಇದ್ದು, ಕೇವಲ 1 ವರ್ಷ ಅವಧಿ ಒಳಗೊಂಡಿದೆ.
ಆಸಕ್ತ ಅಭ್ಯರ್ಥಿಗಳು www.cite.karnataka.gov.in ವೆಬ್ಸೈಟ್ ಮೂಲಕ ಮೇ 28 ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಗೊಂಡ ಸರ್ಕಾರಿ ಐಟಿಐಗಳಲ್ಲಿ ಮೂಲಕ ದಾಖಲಾತಿ ಹಾಗೂ ಅಟೆಸ್ಟೆಡ್ ಜೆರಾಕ್ಸ್ ಕಾಪಿಗಳೊಂದಿಗೆ ನಿಗದಿತ ದಿನಾಂಕದೊಳಗೆ ದಾಖಲಾತಿ ಪರಿಶೀಲನೆ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08187295040ನ್ನು ಸಂಪರ್ಕಿಸಬಹುದು.




