ಬೆಳಗಾವಿ: ದೇಶದಲ್ಲಿ ಚರ್ಚೆ ಮಾಡಬೇಕಾದ ವಿಷಯಗಳು ಸಾಕಷ್ಟಿದ್ದರೂ ಅದನ್ನು ಬಿಟ್ಟು ಜನರ ಗಮನ ಬೇರೆಡೆ ಸೆಳೆಯಲು ಒಂದು ದೇಶ ಒಂದು ಚುನಾವಣೆ ವಿಷಯ ತಂದಿದ್ದಾರೆ ಎಂದು ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸುವರ್ಣಸೌಧದದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ದೇಶದ ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಅದಾನಿ ಪ್ರಕರಣ ಬಗ್ಗೆ ಚರ್ಚೆ ಮಾಡಲು ತಯಾರಿಲ್ಲ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಲ್ ತರುವ ಮೊದಲು ಸಂವಿಧಾನದಲ್ಲಿ ಕೆಲವು ತಿದ್ದುಪಡಿ ತರಬೇಕಾಗುತ್ತೆ. ಮೆನ್ ಅಂಡ್ ಮಿಷನರಿ ಏನು ಬೇಕು? ತಾಂತ್ರಿಕವಾಗಿ ಸಿದ್ದರಿದ್ದೀರಾ? ಮಾನವ ಸಂಪನ್ಮೂಲ ಇದೆಯಾ? ಇದನ್ನೆಲ್ಲಾ ನೋಡಬೇಕಾಗಲಿದೆ. ರಾತ್ರಿ ಮೋದಿ ಕನಸು ಕಂಡು ಅದನ್ನು ನನಸು ಮಾಡಲು ಹೊರಟರೆ, ಬಿಜೆಪಿ ಸಚಿವರೆಲ್ಲ ವಾವ್ ಮೋದಿಜಿ ಮೋದೀಜಿ ಎನ್ನುತ್ತಾರೆ ಎಂದು ಕಟಕಿ ಆಡಿದರು.
ಪ್ರಧಾನಿ ಮೋದಿಯವರ ಆಡಳಿತ ವೈಫಲ್ಯ, ಅದಾನಿ ಪ್ರಕರಣ ಮುಚ್ಚಿಹಾಕಲು ಇಂತಹ ಪ್ರಯೋಗ ಮಾಡಲಿದ್ದಾರೆ. ಇದೆಲ್ಲ ಅದಾನಿಯನ್ನ ಉಳಿಸಲು ಮಾಡುತ್ತಿರೋ ತಂತ್ರವಲ್ಲದೇ ಮತ್ತೇನೂ ಅಲ್ಲ ಎಂದರು.
ಇದೇ ವೇಳೆ ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ವರ್ಕರ್ಸ್ ಬಿಲ್ ಮಂಡನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾರ್ಮಿಕರ ಸಾಮಾಜಿಕ ಆರ್ಥಿಕ ಭದ್ರತೆಗೆ ಸರ್ಕಾರ ಬದ್ಧವಾಗಿದೆ. ಇಂಡಸ್ಟ್ರಿ ಹಾಗೂ ಕಾರ್ಮಿಕರಿಗೆ ತೊಂದರೆಯಾಗದಂತೆ ವಿಧೇಯಕ ತರಲಿದ್ದೇವೆ ಎಂದು ಭರವಸೆ ನೀಡಿದರು.
ಇನ್ನು ಗ್ರಾಮೀಣಾಭಿವೃದ್ಧಿ ವಿವಿ ವಿಧೇಯಕ ಬಿಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗುಜರಾತ್ ಯುನಿವರ್ಸಿಟಿ ಬಿಲ್ ಏನಿದೆ ಗೊತ್ತಾ? ಮಾತೆತ್ತಿದರೆ ಬಿಜೆಪಿಯವರು ಗುಜರಾತ್ ಮಾದರಿ ಎನ್ನುತ್ತಾರೆ. ಆದರೆ ಗುಜರಾತ್ ನಲ್ಲಿ ಮೋದಿ ಏನ್ ಮಾಡಿದ್ದಾರೆ ಅನ್ನೋದು ಮೊದಲು ತಿಳಿದುಕೊಳ್ಳಲಿ. ನಮಗೆ ಗುಜರಾತ್ ಮಾಡೆಲ್ ಬೇಕಿಲ್ಲ. ನಮ್ಮ ಮಾಡೆಲ್ ನೇ ನೋಡಿ ಬೇರೆ ರಾಜ್ಯಗಳು ಕಲಿತಿವೆ. ಗುಜರಾತ್ ಮಾಡೆಲ್‌ನಲ್ಲಿ ಏನಿದೆ ಮಣ್ಣು ಎಂದರು.




