ವೆಲ್ಲಿಂಗ್ಟನ್: ಆಕ್ಲೆಂಡ್ ನಲ್ಲಿ 1 ಕೊರೊನಾ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್ ದೇಶಾದ್ಯಂತ 3 ದಿನಗಳ ಲಾಕ್ ಡೌನ್ ಘೋಷಿಸಿದ್ದಾರೆ. ಇಂದು 6 ತಿಂಗಳ ನಂತರ ಕಂಡುಬಂದ ತಕ್ಷಣ ಈ ಬಿಗಿಕ್ರಮಕ್ಕೆ ಮುಂದಾಗಿದ್ದಾರೆ.
ಅವಶ್ಯಕ ವಸ್ತುಗಳ ಖರೀದಿ, ಆರೋಗ್ಯ, ಸ್ಥಳೀಯವಾಗಿ ಎಕ್ಸರ್ ಸೈಜ್, ವರ್ಕ್ ಫ್ರಂ ಹೋಮ್ ಆಯ್ಕೆ ಇಲ್ಲದವರಿಗೆ ಓಡಾಡಲು ಅವಕಾಶ ನೀಡಲಾಗಿದೆ. ರೆಸ್ಟೊರೆಂಟ್, ಬಾರ್, ಶಾಲೆ, ಜಿಮ್ನಾಸಿಯಂ, ಸಿನಿಮಾ ಮಂದಿರ ಮತ್ತು ಕ್ರೀಡಾಂಗಣಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.




