ಬೆಂಗಳೂರು: ರಾಜ್ಯದ ಜನ ಇಷ್ಟು ದಿನ ಟೊಮ್ಯಾಟೋ, ತರಕಾರಿ, ಆಹಾರ ಧಾನ್ಯ, ಗ್ಯಾಸ್ ಇತ್ಯಾದಿಗಳ ಬೆಲೆ ಏರಿಕೆಯಿಂದ ಚಕಿತರಾಗಿ ಬಸವಳಿದು ಹೋಗಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಾಡಿರುವ ಆರೋಪವನ್ನು ಪುನರುಚ್ಚರಿಸಿರುವ ಜೆಡಿಎಸ್, ಈಗ ವರ್ಗಾವಣೆ ದರಪಟ್ಟಿಯಿಂದ ಅಧಿಕಾರಿ, ನೌಕರರೂ ಹೌಹಾರಿದ್ದಾರೆ. ಇದು Indian National Congress – Karnataka ಸರಕಾರದ 6ನೇ ಗ್ಯಾರಂಟಿ. ಒಂದು ಕಡೆ ಉಚಿತ ಕೊಡುಗೆ! ಇನ್ನೊಂದು ಕಡೆ ಖಚಿತ ಸುಲಿಗೆ!! ಎಂದಿದೆ.
ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕೊಟ್ಟ @INCKarnataka ಸರಕಾರ ಕೊಡುತ್ತಿರುವ ವರ್ಗಾವಣೆ ‘ಸಂಕಷ್ಟಭಾಗ್ಯ ‘ ವರ್ಣಿಸಲಸದಳ. ಕೊಡುಗೆ ಮತ್ತು ಸುಲಿಗೆ ಒಟ್ಟೊಟ್ಟಿಗೆ ಕೊಂಡೊಯ್ಯುವುದೇ ಅಭಿವೃದ್ಧಿಯ ಹೊಸ ಭರವಸೆ, ಹೊಸ ಕನಸು ಎಂಬುದು ಈಗಷ್ಟೇ ಅರ್ಥವಾಗಿದೆ. ಕರ್ನಾಟಕ ಮಾದರಿ ಅಭಿವೃದ್ಧಿ ಎಂದರೆ ಇದೇನಾ? ಎಂದು ಪ್ರಶ್ನಿಸಿದೆ.
ಈ @INCKarnataka ಸರಕಾರ ಬಂದು ಎರಡು ತಿಂಗಳೂ ಕಳೆದಿಲ್ಲ. ಆಗಲೇ ಕಾಸಿಗಾಗಿ ಹುದ್ದೆ ಬಿಸ್ನೆಸ್ ಪರಾಕಾಷ್ಠೆ ಮುಟ್ಟಿದ್ದು, ಇವರು ವರ್ಗಾವಣೆ ಅಂಕದಲ್ಲಿ ‘ ಪರಕಾಯ ಪ್ರವೇಶ’ ಮಾಡಿದ್ದಾರೆ. ಗ್ಯಾರಂಟಿ, ಭಾಗ್ಯಗಳ ಮೂಲಕ ಜನರನ್ನು ಯಾಮಾರಿಸಿ ಇವರು ಹುಂಡಿಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ಇದೇ @INCKarnataka ಅಧಿಕಾರಕ್ಕೆ ಬರಲು ಹಿಂದಿನ BJP Karnataka ಸರಕಾರದ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ ಮಾಡಿ ಪ್ರಚಾರ ಮಾಡಿತ್ತು. ಈಗ ಕೈ ಸರಕಾರದ ರೇಟ್ ಕಾರ್ಡ್ ಎಲ್ಲರ ಕೈಗಳಲ್ಲೂ ನಲಿದು ನರ್ತಿಸುತ್ತಿದೆ. #CashForPosting ಸರಕಾರದ ‘ ಅಧಿಕೃತ ಅರ್ಥನೀತಿ ‘ ಆಗಿದೆ ಎಂದಿದೆ.
ಹನಿಮೂನ್ ಪೀರಿಯಡ್ ಹೊತ್ತಿನಲ್ಲೇ ಹೀಗಾದರೆ ಫುಲ್ ಮೂನ್ ಸಮಯದಲ್ಲಿ ಇದು ಇನ್ನಾವ ಹಂತಕ್ಕೆ ಹೋಗಲಿದೆ ಎನ್ನುವ ಊಹೆ ಜನರಿಗೇ ಬಿಟ್ಟಿದ್ದು. ಇಂಥ ಕಮಿಷನ್’ಗೇಡಿ ಸರಕಾರದ ಬಗ್ಗೆ ಸರಕಾರಿ ನೌಕರರು, ಅಧಿಕಾರಿಗಳು ಆತಂಕಗೊಂಡಿದ್ದಾರೆ. ಜನರಲ್ಲೂ ಆಕ್ರೋಶ ಮಡುಗಟ್ಟುತ್ತಿದೆ ಎಂದಿದೆ.




