ಅಂಗವಿಕಲ ಕುಮಾರ್ ಗೆ ಆಸರೆ ಆದ ನೂತನ  NGO ?

5 years ago

ಚಿತ್ರದುರ್ಗ: ಭೀಮ ಸಮುದ್ರ ಮತ್ತು  ಚಿತ್ರದುರ್ಗ ದಾರಿಯ ಮಧ್ಯೆ  ಮಾನಂಗಿ ಬಳಿ ಪುಟ್ಟ  ಹಣ್ಣಿನ  ಅಂಗಡಿ ಇಟ್ಟುಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿರುವ ಕುಮಾರಸ್ವಾಮಿ ಎಂಬ ಅಂಗವಿಕಲ ವ್ಯಕ್ತಿ  ಸಿದ್ಧಾಪುರ  ಗ್ರಾಮದ ನೂತನ NGO ಮತ್ತು ಅದರ ಅಧ್ಯಕ್ಷ  ರಘು (ರಾಘವೇಂದ್ರ ) ಅವರ ನೆರವನ್ನು ನೆನಪಿಸಿಕೊಂಡು, ಶುಭಹಾರೈಸಿದ್ದಾರೆ

ದಿನಾಂಕ  25.6.2021 ರಂದು ಭೀಮ ಸಮುದ್ರ ಕಡೆಯಿಂದ  ಚಿತ್ರದುರ್ಗಕ್ಕೆ ಬರುವ ದಾರಿ ಮಧ್ಯೆ  ಮಟಮಟ ಮಧ್ಯಾಹ್ನ  ಬಿಸಿಲು ಬೇರೆ, ನೆರಳು ಕಂಡು ಹೋಗಿದ್ದು ಮರದ ಕೆಳಗೆ ಹಣ್ಣು  ಮಾರಾಟ ಮಾಡುತ್ತಿದ್ದ ಮಾನಂಗಿ ಗ್ರಾಮದ ಕುಮಾರಸ್ವಾಮಿ ಎಂಬ ಅಂಗವಿಕಲ ಮಧ್ಯ ವಯಸ್ಸಿನ ವ್ಯಕ್ತಿ, ಸಹಜವಾಗಿ ಆತನ ವ್ಯಾಪಾರ ಲಾಭ, ನಷ್ಟ  ಲಾಕ್  ಡೌನ್ ಹೀಗೆ ಮಾತುಕತೆ ನಡೆಯುತ್ತಿರುವ ವೇಳೆಗೆ ಸಹಜ ಎಂಬಂತೆ ಕುತೂಹಲಕ್ಕೆ ಮಾತನಾಡಿಸಿ ಆತನ ಕಷ್ಟಸುಖ ವಿಚಾರಿಸಲು ಆರಂಭಿಸಿದಾಗ ಅಂಗವಿಕಲ ಕುಮಾರ್ ತಕ್ಷಣಕ್ಕೆ ಹಾರೈಸಿದ್ದು ನೂತನ ಸಂಸ್ಥೆಯನ್ನು ಮತ್ತು ಆ ಸಂಸ್ಥೆಯ ಅಧ್ಯಕ್ಷ ರಘು ಅವರನ್ನು. ಅವರು ಯಾವುದೇ  ಸ್ವಾರ್ಥವಿಲ್ಲದೆ ನೆರವು ನೀಡಿರುವುದನ್ನು ಸ್ಮರಣೆ ಮಾಡುವುದನ್ನು  ವಿಕಲಚೇತನ ಕುಮಾರ್  ಮರೆಯಲಿಲ್ಲ!

ಕಳೆದ ಕೆಲವು  ದಿನಗಳ ಹಿಂದೆ ಸಣ್ಣ ಅಂಗಡಿಯನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಕುಮಾರ್ ಪತ್ನಿಯ ಅನಾರೋಗ್ಯವು ಅಂಗಡಿ  ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗದೇ ಅರ್ಧಕ್ಕೆ ಕೈಬಿಡಬೇಕಾಯಿತು. ಆದರೆ ಹೊಟ್ಟೆಪಾಡು ಕೇಳಬೇಕಲ್ಲ! ಹಾಗೆಯೇ  ನೂತನ ಶಾಲೆ ಕಡೆ ಹೋಗಿ ರಘು ಅವರಿಗೆ ನೆರವು ಕೇಳಿದ್ದಾರೆ. ಸ್ವಲ್ಪ  ಸಹಾಯ  ಮಾಡಿ ಕಳುಹಿಸಿ ಕೊಡಬೇಕೆಂದುಕೊಂಡ ನೂತನ ಸಂಸ್ಥೆಯ ಅಧ್ಯಕ್ಷ ಸ್ವಲ್ಪ  ಗಂಭೀರವಾಗಿ  ಆಲೋಚನೆ  ಮಾಡಿ ಅಂಗವಿಕಲ ಕುಮಾರ್ ಕುಟುಂಬಕ್ಕೆ  ಆಸರೆ ಅಗಲಿ ಎಂಬ ಕಾರಣಕ್ಕೆ ಶಾಶ್ವತ  ಪರಿಹಾರವನ್ನು  ಸೂಚಿಸುವ ಮೂಲಕ ಲಾಕ್  ಡೌನ್  ಕಾಲದಲ್ಲಿ  ನೆರವಾಗಿದ್ದಾರೆ.

ಇವತ್ತಿಗೆ ಹಣ್ಣು  ವ್ಯಾಪಾರ  ಮಾಡಿಕೊಂಡು  ಜೀವನ ನಡೆಸುತ್ತಿರುವ ಕುಮಾರ್  ತಮಗೆ ಮತ್ತು  ತಮ್ಮ ಕುಟುಂಬ  ಜೀವನಕ್ಕೆ  ದಾರಿದೀಪವಾದ ನೂತನ ಸಂಸ್ಥೆ  ಮತ್ತು  ಅದರ ಅಧ್ಯಕ್ಷ ರಾಘವೇಂದ್ರ  ಅವರನ್ನು ನೆನಪಿಸಿಕೊಂಡು ಜೀವನ ಮಾಡುತ್ತಿದ್ದೇನೆ ಎಂದು ಹೇಳುವುದನ್ನು  ಮಾತ್ರ ಕುಮಾರ್  ಮೆರೆಯಲಿಲ್ಲ.

Leave a Reply