ದಲಿತ ಸಂಘರ್ಷ ಸಮಿತಿ ಬಣ: ಚುನಾವಣೆ ಮೂಲಕ ಆಯ್ಕೆ

5 years ago

ಬೆಳಗಾವಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ಸಬೆ ಮಾಡಲಾಯಿತು.   ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರ ಆಯ್ಕೆಗೆ ಹದಿಮೂರು ತಾಲೂಕು ಅಧ್ಯಕ್ಷರು ಮತದಾನ ಮಾಡುವ ಮೂಲಕ ಆಯ್ಕೆ ನಡೆಯಿತು.

ಬೆಳಗಾವಿ ಜಿಲ್ಲೆಯ ಚುನಾವಣೆಯಲ್ಲಿ 1) ತುಕಾರಾಮ ಮಾದರ 2)ಸಂದೀಪ ಕೆಳಗಿನಮನಿ 3) ಮಿಲಿಂದ ಐಹೊಳೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಸ್ಪರ್ಧೆಯಲ್ಲಿ ತುಕಾರಾಮ ಮಾದರ 7 ಮತಗಳನ್ನು, ಸಂದೀಪ ಕೆಳಗಿನಮನಿ 4 ಮತಗಳನ್ನು, ಮಿಲಿಂದ ಐಹೊಳೆ 2 ಮತಗಳನ್ನು ಪಡೆದರು. ಈ ಮೂಲಕ  ಚುನಾವಣೆಯಲ್ಲಿ 7 ಮತಗಳನ್ನು ಪಡೆದು ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ತುಕಾರಾಮ ಮಾದರ ಆಯ್ಕೆಯಾದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷ ಚುನಾವಣೆಯಲ್ಲಿ 1) ರವಿಕುಮಾರ್ ಹಕ್ಯಾಗೋಳ 2)ಮಹಾಲಿಂಗ ಗಗ್ಗರಿ ಸ್ಪರ್ಧಿಸಿದ್ದರು. ಮಹಾಲಿಂಗ ಗಗ್ಗರಿ 10 ಮತಗಳನ್ನು, ರವಿಕುಮಾರ್ ಹಕ್ಯಾಗೋಳ 3 ಮತಗಳನ್ನು ಪಡೆದರು. ಈ ಮೂಲಕ 10 ಮತಗಳನ್ನು ಪಡೆದ ಮಹಾಲಿಂಗ ಗಗ್ಗರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರು.

ಅಖಂಡ ಬೆಳಗಾವಿ ಜಿಲ್ಲಾ ಮಹಿಳಾ ಜಿಲ್ಲಾ ಅಧ್ಯಕ್ಷೆಯಾಗಿ ಸರ್ವಾನುಮತದಿಂದ ಅವಿರೋಧವಾಗಿ ರೂಪಾ ರವೀಂದ್ರ ವಾಳವಿ ಆಯ್ಕೆಯಾದರು.

ಚುನಾವಣೆಯಲ್ಲಿ  ರಾಜ್ಯಾದ್ಯಕ್ಷ ಚಂದ್ರಕಾಂತ ಎಸ್ ಕಾದ್ರೋಳ್ಳಿ, ರಾಜ್ಯ ಕೋಶ್ಯಾಧ್ಯಕ್ಷ ತಿರಕಪ್ಪ ಕೆ ಚಿಕ್ಕೇರಿ, ರಾಜ್ಯ ಕಾರ್ಯದರ್ಶಿ ರವೀಂದ್ರ ವಾಳವಿ, ರಾಜ್ಯ ಖಜಾಂಚಿ ಬಸವರಾಜ ಮಾರಡಗಿ, ರಾಜ್ಯಾಧ್ಯಕ್ಷ ಯುವ ಘಟಕ ಮಂಜುನಾಥ ಫ ದೊಡಮನಿ, ಬೆಳಗಾವಿ ವಿಭಾಗೀಯ ಅಧ್ಯಕ್ಷ ಶ್ರೀಕಾಂತ ಮ ಮಾದರ, ಬೆಳಗಾವಿ ಜಿಲ್ಲೆಗೆ ಆಗಮಿಸಿದ ರಾಜ್ಯ ಸಮಿತಿ ಪದಾಧಿಕಾರಿಗಳನ್ನು ಬೆಳಗಾವಿ ಜಿಲ್ಲೆಯ ಎಲ್ಲಾ ಹದಿಮೂರು ತಾಲೂಕು ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು. ಚುನಾವಣೆಯಲ್ಲಿ ಗೆದ್ದವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Leave a Reply