ಬೆಂಗಳೂರು: ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯಲ್ಲಿ 2019 ರಿಂದ ಅನ್ವಯವಾಗುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ನವದೆಹಲಿ ರವರ ನಿರ್ದೇಶನದನುಸಾರ NIC ರವರ ಅಭಿವೃದ್ಧಿಪಡಿಸಿರುವ ಕೇಂದ್ರಿಕೃತ ವೆಬ್ ಆಧಾರಿತ ವಾಹನ್ ತಂತ್ರಾಂಶವನ್ನು ರಾಜ್ಯದ ಎಲ್ಲಾ ಅಧೀನ RTO ಕಛೇರಿಗಳಲ್ಲಿ ಅಳವಡಿಸಿ ಬಳಸಲಾಗುತ್ತಿದೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯಯದ ನಿರ್ದೇಶನದನುಸಾರ ವಾಹನದ Horse Power, Cubic Capacity, Wheelbase, Cost of the Vehicle (Parameter) ಇನ್ನಿತ ಮಾನದಂಡಗಳನ್ನು ವಾಹನ್ ತಂತ್ರಾಂಶದಲ್ಲಿ ಅಳವಡಿಸಲು ರಾಜ್ಯದ ಎಲ್ಲಾ ವಾಹನಗಳ ಮಾಲೀಕರುಗಳು ಈ ಮೂಲಕ ತಿಳಿಸುವುದೇನೆಂದರೆ, ತಮ್ಮ ಮಾಲೀಕತ್ವದ ವಾಹನಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿ / ದಾಖಲಾತಿಗಳನ್ನು ಕೂಡಲೇ ಸಂಬಂಧಪಟ್ಟ RTO ಕಛೇರಿಗಳಿಗೆ ಹಾಜರುಪಡಿಸಿ ವಾಹನದ ಮಾಹಿತಿಯನ್ನು Update ಮಾಡಿಕೊಳ್ಳಲು ತಿಳಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (RTO) ತಾವು ನೀಡುವ ಮಾಹಿತಿ / ದಾಖಲಾತಿಗಳನ್ನು ಕಛೇರಿಯಲ್ಲಿರುವ ಮೂಲ ದಾಖಲಾತಿಗಳೊಂದಿಗೆ ತಾಳೆ ಮಾಡಿ ವಾಹನದ ವಿವರ /ಮಾಹಿತಿಗಳನ್ನು ಕೇಂದ್ರ ಸರ್ಕಾರವು NIC ರವರ ಮೂಲಕ ಅಭಿವೃದ್ಧಿಪಡಿಸಿರುವ ವಾಹನ್ ತಂತ್ರಾಂಶದಲ್ಲಿ Update ಮಾಡಿದ ನಂತರ CC/NOC ವಹಿವಾಟಿಗೆ ತಂತ್ರಾಂಶದಲ್ಲಿ ಅನುವು ಮಾಡಿಕೊಡುವುದರಿಂದ ವಾಹನ ಮಾಲೀಕರು ತಮ್ಮ ದಾಖಲಾತಿಗಳನ್ನು ನೀಡಿ ಸಹಕಾರಿಸಬೇಕೆಂದು, ಬೆಂಗಳೂರು, ಸಾರಿಗೆ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



