ಬಳ್ಳಾರಿ: ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತು ಹಾಕುವವರೆಗೂ ಬಿಜೆಪಿ ಹೋರಾಟ ನಿಲ್ಲದು ಇಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಬಳ್ಳಾರಿಯಲ್ಲಿ ಪೋಸ್ಟರ್ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ವಿರೋಧಿಸಿ ರಾಜ್ಯ ಬಿಜೆಪಿ ನಡೆಸಿದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕಲು ಬಿಜೆಪಿ ಹಳ್ಳಿ ಹಳ್ಳಿಗೆ ತೆರಳಿ ಹೋರಾಟ ನಡೆಸುತ್ತದೆ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೆ ಬಿಜೆಪಿ ಯಾವಾಗಲೂ ಇರುತ್ತದೆ ಎಂದರು.
ನಾವು ಸಂಘಟಿತರಾಗಿ ಸಂಗ್ರಾಮಕ್ಕೆ ತಯಾರಾಗಬೇಕು. ಕಾಂಗ್ರೆಸ್ ನ ಎರಡೂವರೆ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದಿನ ನಿತ್ಯ ಕೊಲೆ ರೇಪು ಸುದ್ದಿ ಕೇಳಿ ಸಾಕಾಗಿದೆ. ಹಲವಾರು ರೀತಿಯಲ್ಲಿ ಪೊಲಿಸರ ದಬ್ಬಾಳಿಕೆ ಇಡೀ ರಾಜ್ಯದಲ್ಲಿ ಇದೆ ಎಂದರು.
ಬಳ್ಳಾರಿಯಲ್ಲಿ ಈ ಘಟನೆ ಆಗಲು ಎರಡು ಕಾರಣ ಜನಾರ್ದನ ರೆಡ್ಡಿ ಕೋರ್ಟಿನ ಆದೇಶದ ಪ್ರಕಾರ ಬಳ್ಳಾರಿಗೆ ಬಂದಿದ್ದರಿಂದ ತಮಗೆ ಉಳಿಗಾಲವಿಲ್ಲ ಎಂದು, ಜನಾರ್ದರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ರಾಮುಲು ಒಂದಾಗಿದ್ದಾರೆ ಎಂದರೆ ಬಳ್ಳಾರಿಯ ಕಾಂಗ್ರೆಸ್ ನಾಯಕರ ಕುರ್ಚಿ ಅಲುಗಾಡುತ್ತಿದೆ. ರಾಮುಲು ವೇಗ, ಜನಾರ್ದನ ರೆಡ್ಡಿ ಶಕ್ತಿ, ಬೆಂಕಿ ಬಿರುಗಾಳಿ ಇದ್ದ ಹಾಗೆ. ಕಾಂಗ್ರೆಸನವರ ಗುಂಡಿಗಿಂತ ನಮ್ಮ ಎದೆ ಗಟ್ಟಿಯಿದೆ ಜನಾರ್ದನ ರೆಡ್ಡಿ, ರಾಮುಲು ಶಕ್ತಿ ಅಡಗಿಸಲು ಸಾಧ್ಯವಿಲ್ಲ ಎಂದರು.
ಈ ರೀತಿಯ ಘಟನೆ ಎಲ್ಲ ಕಡೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಹೆಣ್ಣು ಮಗಳ ಬಟ್ಟೆಯನ್ನು ಪೊಲೀಸರೆ ಬಿಚ್ಚುತ್ತಾರೆ. ಕೊಲಾರದಲ್ಲಿ ಮಹಿಳಾ ಅಧಿಕಾರಿಯನ್ನು ಸುಟ್ಟು ಹಾಕುತ್ತೇನೆ ಎನ್ನುತ್ತಾರೆ. ಭದ್ರಾವತಿಯಲ್ಲಿ ಅಧಿಕಾರಿಗೆ ಶಾಸಕರ ಪುತ್ರ ಧಮ್ಕಿ ಹಾಕುತ್ತಾನೆ. ಅದೇ ರೀತಿ ಮಾಗಡಿಯಲ್ಲಿ ತಹಸಿಲ್ದಾರಗೆ ಚಪ್ಪಲೀಲಿ ಹೊಡಿತಿನಿ ಅಂತಾರೆ. ಸುಟ್ಟು ಹಾಕುವದು ಚಪ್ಪಲಿಯಲ್ಲಿ ಹೊಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಇಲ್ಲಿ ಯಾರಿಗೂ ನೆಮ್ಮದಿ ಇಲ್ಲ ಎಂದರು.




