ಬಿಜೆಪಿ ನಾಯಕರಿಗೆ ದೇಶದಲ್ಲಿನ ಎಲ್ಲ ಸಮಸ್ಯೆಗಳಿಗೆ ಮತ್ತು ಅವರ ಕೈಯಲ್ಲಿ ಪರಿಹರಿಸಲಾಗದ ಎಲ್ಲ ವಿಚಾರಗಳಿಗೆ ನೆಹರು ಕಾರಣ ಎನ್ನುವ ಎಂಬ ಸಿದ್ದ ಉತ್ತರ ಎಲ್ಲರ ಬಾಯಲ್ಲೂ ಪುಂಕನು ಪುಂಕವಾಗಿ ಬರುತ್ತಿರುತ್ತದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನೆಹರು ಅವರು ಅಣೆಕಟ್ಟುಗಳನ್ನು ಕಟ್ಟಿ ಕೇವಲ ಅಲ್ಪಸಂಖ್ಯಾತರ ಹೊಲ ಗದ್ದೆಗಳಿಗೆ ನೀರು ಬಿಟ್ಟರು ಎಂದು ಹೇಳಲು ಹಿಂಜರಿಯುವುದಿಲ್ಲ.
ಸಾರ್ವಜನಿಕ ಉದ್ಯಮಗಳನ್ನು ಸ್ಥಾಪಿಸಿ ಅಲ್ಪಸಂಖ್ಯಾತರಿಗೆ ಮಾತ್ರ ಉದ್ಯೋಗ ಕೊಟ್ಟರು ಎಂದು ಹೇಳಲು ಹಿಂಜರಿಯುವುದಿಲ್ಲ.
ಐಐಟಿ, ಐಐಎಂ, ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು, ವಿಶ್ವವಿದ್ಯಾನಿಲಯಗಳು ಸ್ಥಾಪಿಸಿ ಕೇವಲ ಅಲ್ಪಸಂಖ್ಯಾತರುಗಳಿಗೆ ಮಾತ್ರ ಶಿಕ್ಷಣ ಕೊಟ್ಟರು ಎಂದು ಹೇಳಲು ಹಿಂಜರಿಯುವುದಿಲ್ಲ.
ಪಂಚವಾರ್ಷಿಕ ಯೋಜನೆಗಳ ಮೂಲಕ ಕೇವಲ ಅಲ್ಪಸಂಖ್ಯಾತರ ಇರುವ ಪ್ರದೇಶಗಳನ್ನು ಮಾತ್ರ ಅಭಿವೃದ್ಧಿ ಮಾಡಿದರು ಎಂದು ಹೇಳಲು ಹಿಂಜರಿಯುವುದಿಲ್ಲ.
ಅತ್ಯುತ್ತಮ ಗುಣಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸಿ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಚಿಕಿತ್ಸೆಯನ್ನ ನೀಡಿದರು ಎಂದು ಹೇಳಲು ಹಿಂಜರಿಯುವುದಿಲ್ಲ.
ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸೇತುವೆಗಳನ್ನು ನಿರ್ಮಿಸಿ, ಕೇವಲ ಅಲ್ಪಸಂಖ್ಯಾತರ ವಾಹನಗಳಿಗೆ ಮಾತ್ರ ಓಡಾಡಲು ವ್ಯವಸ್ಥೆ ಮಾಡಿದರು ಎಂದು ಹೇಳಲು ಹಿಂಜರಿಯುವುದಿಲ್ಲ.
ಈಗ ಪ್ರವಾಹ ಬಂದು ಅನಾಹುತವಾದರೆ ಅದಕ್ಕೆ ನೆಹರು ಕಾರಣ, ಈಗ ಬರಗಾಲ ಬಂದರೆ ಅದಕ್ಕೂ ನೆಹರು ಕಾರಣ, ಈಗ ರೂಪಾಯಿಯ ಮೌಲ್ಯ ಡಾಲರ್ ಎದುರು ಕುಸಿಯುತ್ತಿದ್ದರೆ ಅದಕ್ಕೂ ನೆಹರು ಕಾರಣ. ಕೋಟಿ ಕೋಟಿ ನಿರುದ್ಯೋಗಗಳು ಸೃಷ್ಟಿಯಾಗಿದ್ದರೂ ಅದಕ್ಕೆ ನೆಹರು ಕಾರಣ. ದೇಶದ ಸಾಲ 210 ಲಕ್ಷ ಕೋಟಿ ದಾಟಿದರೆ ಅದಕ್ಕೆ ಕಾರಣ.
ಆದರೆ ಇಸ್ರೋ ಸಂಸ್ಥೆಯಲ್ಲಿ ಉಪಗ್ರಹಗಳು ಉಡಾವಣೆಯಾಗಿ ದೇಶಕ್ಕೆ ಕೀರ್ತಿ ಬಂದರೆ ಅದಕ್ಕೆ ಬಿಜೆಪಿ ಕಾರಣ. ಸಾಕ್ಷರತೆಯ ಪ್ರಮಾಣ ಹೆಚ್ಚಾಗಿ ದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೆ ಅದಕ್ಕೆ ಬಿಜೆಪಿ ಕಾರಣ. ವೈಜ್ಞಾನಿಕ ಸಂಸ್ಥೆಗಳು ಹಲವಾರು ದಶಕಗಳಿಂದ ತಮ್ಮ ಸಾಧನೆಗಳ ಮೂಲಕ ವಿಶ್ವದ ಗಮನವನ್ನು ಸೆಳೆದರೆ ಅದಕ್ಕೆ ಬಿಜೆಪಿ ಕಾರಣ. ಸಾರ್ವಜನಿಕ ಉದ್ಯಮಗಳು ಉತ್ಪಾದನೆಗಳ ಮೂಲಕ ದೇಶದ ಪ್ರಗತಿಗೆ ಕಾರಣವಾಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಮಳೆ ಚೆನ್ನಾಗಿ ಬಂದರೆ, ಬೆಳೆ ಚೆನ್ನಾಗಿ ಬಂದರೆ, ಅದಕ್ಕೆ ಬಿಜೆಪಿ ಕಾರಣ, ತಂಪಾದ ಗಾಳಿ ಬೀಸಿದರೆ, ಅದಕ್ಕೂ ಬಿಜೆಪಿ ಕಾರಣ,
ಕಳೆದ 75 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲ್ಪಟ್ಟ ಸಂಸ್ಥೆಗಳಿಂದ ದೇಶಕ್ಕೆ ಒಳಿತಾಗಿ ವಿಶ್ವದಲ್ಲಿ ಭಾರತ ಗುರುತಿಸಲ್ಪಟ್ಟರೆ ಅದಕ್ಕೆ ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಡಾ.ಮನಮೋಹನ್ ಸಿಂಗ್ ಅವರುಗಳ ದೂರದೃಷ್ಟಿತ್ವದ ಮತ್ತು ಪರಿಣಾಮಕಾರಿಯಾದ ನಿಲುವುಗಳು ಮತ್ತು ಕಾರ್ಯಕ್ರಮಗಳು ಕಾರಣ ಎನ್ನುವ ದೊಡ್ಡತನವನ್ನು ಬೆಳೆಸಿಕೊಳ್ಳಿ.
ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಜಾಪ್ರಭುತ್ವದ ಮೇಲಿನ ಪ್ರೀತಿ ಅವರ ಘನತೆ ಅವರ ಸೌಜನ್ಯ ಮತ್ತು ಸಂಸ್ಕಾರವಂತಿಕೆಯ ನಡವಳಿಕೆ. ಜೊತೆಗೆ ಅವರ ಕಾಲದಲ್ಲಿಯೂ ಆದಂತಹ ಪ್ರಗತಿಯ ಬಗ್ಗೆ ಮುಕ್ತ ಕಂಠದಿಂದ ಬಹಳಷ್ಟು ಜನ ಮಾತನಾಡುವ ರೀತಿಯಲ್ಲಿ ಬಿಜೆಪಿ ನಾಯಕರು ಹಿಂದಿನ ಸರ್ಕಾರಗಳ ಅಂದಿನ ನಾಯಕರುಗಳ ಕೊಡುಗೆಗಳನ್ನು ಕನಿಷ್ಠ ಪಕ್ಷ ನೆನಪು ಮಾಡಿಕೊಳ್ಳುವ ದೊಡ್ಡತನವನ್ನು ಬೆಳೆಸಿಕೊಳ್ಳಿ. ಅದು ಬಿಟ್ಟು ಎಲ್ಲ ಸಮಸ್ಯೆಗಳಿಗೆ ಅವರು ಕಾರಣ ಎಲ್ಲಾ ಒಳಿತುಗಳಿಗೆ ನಾವೇ ಕಾರಣ ಎಂದು ಸುಳ್ಳು ಹೇಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಡಿ. ಜನರು ಎಲ್ಲ ಕಾಲದಲ್ಲೂ ನಿಮ್ಮ ಮಾತುಗಳನ್ನು ಕೇಳಲು ಮೂರ್ಖರಲ್ಲ. ಸತ್ಯದ ದರ್ಶನ ಜನರಿಗೆ ಕಾಲಕಾಲಕ್ಕೆ ಆಗುತ್ತದೆ.
ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ನೀಲಿ ಕ್ರಾಂತಿ, ಆರ್ಥಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಶೈಕ್ಷಣಿಕ ಕ್ರಾಂತಿ, ಉಳುವವನಿಗೆ ಭೂಮಿ ಯೋಜನೆ, ಬ್ಯಾಂಕುಗಳ ರಾಷ್ಟ್ರೀಕರಣ, ಜೀತ ಪದ್ಧತಿಯ ನಿರ್ಮೂಲನೆ, ಇಂತಹ ಕ್ರಾಂತಿಕಾರಿ ಜನರ ಬದುಕನ್ನು ಬದಲಾಯಿಸಬಲ್ಲ ಒಂದೇ ಒಂದು ಕಾರ್ಯಕ್ರಮವನ್ನು 11 ವರ್ಷದಲ್ಲಿ ನೀಡದಿದ್ದರೂ ಕೇವಲ ಕಾಂಗ್ರೆಸ್ ಸರ್ಕಾರಗಳನ್ನು ಟೀಕಿಸುತ್ತ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುತ್ತ ಸಾಕಿಕೊಂಡಿರುವ ಮಾಧ್ಯಮಗಳ ಮೂಲಕ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸರ್ಕಾರವನ್ನು ನಡೆಸಿರುವುದೇ ಸಾಧನೆ.
– ಕೆ ಎಸ್ ನಾಗರಾಜ್, ಬೆಂಗಳೂರು



