ಮತ್ತು ಬರುವ ಔಷಧಿ ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ ಶ್ರೀಗಳು!

3 years ago

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಶ್ರೀಗಳು ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳನ್ನು ಅತ್ಯಾಚಾರಕ್ಕೆ ಬಳಸಿಕೊಂಡಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮಠದ ಲೇಡಿ ವಾರ್ಡನ್ ಮೂಲಕ ತಮ್ಮ ಕೊಠಡಿಗೆ ಅಪ್ರಾಪ್ತ ಬಾಲಕಿಯರನ್ನು ಮುರುಘಾ ಶ್ರೀಗಳು ಕರೆಸಿ, ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎನ್ನುವ ಅಘಾತಕಾರಿ ಸಂಗತಿ ಆರೋಪಪಟ್ಟಿ ( ಚಾರ್ಜ್ ಶೀಟ್)ಯಲ್ಲಿ ಬಯಲಿಗೆ ಬಂದಿದೆ.
ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯದ 2ನೇ ಪೋಕ್ಸೋ ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ ನಗರದ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಪಟ್ಟಿ ( ಚಾರ್ಜ್ ಶೀಟ್) ಸಲ್ಲಿಸಿದ್ದು ಅದರಲ್ಲಿ ಶ್ರೀಗಳ ಲೈಂಗಿಕ ದೌರ್ಜನ್ಯದ ಇಂಚಿಂಚೂ ಮಾಹಿತಿಯನ್ನು ಲಭ್ಯವಾಗಿದೆ.
ಮುರುಘಾ ಶ್ರೀಗಳ ವಿರುದ್ಧದ ಪ್ರಕರಣ ದಾಖಲಾಗಿದ್ದು, 342 ಪುಟಗಳ 2 ಸೆಟ್ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಅದರಲ್ಲಿ ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಉಲ್ಲೇಖಗೊಂಡಿದೆ.
ಅಲ್ಲದೇ ಕೆಲ ವರ್ಷದ ಹಿಂದೆ ಓರ್ವ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದು ಅದರ ತನಿಖೆಯನ್ನು ಮುಂದುವರೆಸಲಾಗಿದೆ. ಶ್ರೀಗಳ ಲೈಂಗಿಕ ದೌರ್ಜನ್ಯದ ಬಗ್ಗೆ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದು, ಆಂಧ್ರಕ್ಕೆ ತೆರಳಿದ್ದ ಪೊಲೀಸ್ ತಂಡ ಹಲವು ಮಾಹಿತಿಗಳನ್ನ ಕಲೆ ಹಾಕಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಚಾರ್ಜ್ಶೀಟ್ನಲ್ಲಿ 10ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ವಿರೋಧಿಸಿದ ಮಕ್ಕಳನ್ನು ವಾರ್ಡನ್ ಬೆದರಿಸುತ್ತಿದ್ದರು. ಪ್ರತಿನಿತ್ಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಆರೋಪಿಸಲಾಗಿದೆ. ಸಂತ್ರಸ್ಥರ ಹೇಳಿಕೆ ಆಧರಿಸಿ ಮಕ್ಕಳ ವಿಚಾರಣೆ ನಡೆಸಲಾಗಿತ್ತು. ಇದರಲ್ಲಿ ಕಳವಳಕಾರಿ ಮಾಹಿತಿ ಹೊರಬಂದಿದೆ. ಕೇವಲ ಮೂವರು ಮಕ್ಕಳಷ್ಟೇ ಅಲ್ಲ 10ಕ್ಕೂ ಹೆಚ್ಚು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಮಾತನಾಡಿ, ಮುರುಘಾ ಶರಣರಿಗೆ ಗಲ್ಲು ಶಿಕ್ಷೆ ಆಗಬೇಕು. ಮುರುಘೇಶ ಗದ್ದುಗೆ ಮೇಲೆ ನಂಬಿಕೆ ಇಟ್ಟಿದ್ದ ಜನರಿಗೆ ಹಾಗೂ ಮಕ್ಕಳಿಗೆ ಸಿಕ್ಕ ಸಾಂತ್ವಾನ ಇದು. ಎಷ್ಟೇ ಒತ್ತಡಗಳು ಇದ್ದಾಗ್ಯೂ ಪೊಲೀಸರಿಂದ ಒಳ್ಳೆಯ ತನಿಖೆ ಆಗಿದೆ. ಪೊಲೀಸರು ಅಭಿನಂದನಾರ್ಹರು. ಆದಾಗ್ಯೂ ಇನ್ನೂ ವಿಸ್ತಾರವಾದ ಕೆಲಸ ಮಾಡಬೇಕಾಗಿತ್ತು. ಮಕ್ಕಳ ಮೇಲೆ ದೀರ್ಘಾವಧಿಯಲ್ಲಿ ಆಗಿರುವ ಪರಿಣಾಮಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಎಡವಿದ್ದಾರೆ. ಮಕ್ಕಳಿಗಾದ ನೋವನ್ನ ನೇರವಾಗಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ನಾನು ಅವರಿಗೆ ಸಹಾಯಕನಾಗಿ ನಿಂತಿದ್ದೇನೆ. ಎಷ್ಟೋ ಮಕ್ಕಳು ಮಾನವ ಸಾಗಾಣಿಕೆಗೆ ಒಳಗಾಗಿವೆ. ಅದನ್ನೂ ಪತ್ತೆ ಹಚ್ಚಬೇಕು. ಈಗಾಗಲೇ ಕೊಲೆಯಾದ ಮಗು, ಮಠದಿಂದ ಸಾಗಿಸ್ಪಟ್ಟ ಮಗುವಿನ ಕಥೆ ಏನು ಎಂದು ದೂರು ನೀಡಲಾಗಿದೆ ಎಂದರು.
ಹಾಗಾದರೆ ಕೊಲೆ ಮಾಡಿದವರು ಯಾರು. ಕೊಲೆಯಾದ ಮಗು ಗೋಡೆಗಳ ಜೊತೆ ಮಾತನಾಡುತ್ತಿತ್ತಂತೆ. ಅಪ್ಪಾಜಿ ಬಾ ಮಲ್ಕೊ. ಅಪ್ಪಾಜಿ ಏನಿದು ಗೋಡೆ. ಅಪ್ಪಾಜಿ ಏನಿದು ಬೇರೆಯವರನ್ನು ಕಟ್ಟುಕೊಂಡುಬಿಟ್ಟಲ್ಲ. ಹೀಗಂತ ಮಗು ಕೂಗುತ್ತಿತ್ತೆಂತೆ, ಹಾಗಾಗಿ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಇದೆಲ್ಲವನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲನೆ ಮಾಡಿದರೆ ಈ ರೀತಿ ದುರ್ಘಟನೆಗಳು ಸಂಭವಿಸುತ್ತಿರಲಿಲ್ಲ. ಸಾಮಾನ್ಯ ಹೆಣ್ಣು ಮಗುವಿನ ತಂದೆಯಾಗಿ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನಮ್ಮ ಹಣದಲ್ಲಿ ಅವರಿಗೆ ಮುಂದೆ ಊಟ ಹಾಕುವ ಕೆಲಸ ಬೇಡ ಎಂದರು.
ಈ ನಡುವೆ ಮಠದ ಹಾಸ್ಟೆಲ್ ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಶ್ರೀಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುರುಘಾಶ್ರೀ, ಲೇಡಿ ವಾರ್ಡನ್ (ರಶ್ಮಿ), ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ, ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪುರುಷತ್ವ ಪರೀಕ್ಷೆಯಲ್ಲಿ ಪಾಸ್: ಈ ನಡುವೆ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಡಾ. ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ಮೂರು ದಿನಗಳ ಹಿಂದೆ ನಡೆಸಿದ ಪುರುಷತ್ವ ಪರೀಕ್ಷೆಯಲ್ಲಿ ಲೈಂಗಿಕವಾಗಿ ಸಮರ್ಥರಾಗಿರುವ ವರದಿ ಬಂದಿದೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ಕಳೆದ ನ.5ರಂದು ಪುರುಷತ್ವ ಪರೀಕ್ಷೆಯನ್ನು ನಡೆಸಲಾಗಿತ್ತು ಅದರಲ್ಲಿ ಶ್ರೀಗಳು ಸಮರ್ಥರಾಗಿದ್ದಾರೆ.
ಸ್ಥಳ ಮಹಜರು: ಅಂದು ಬೆಳಿಗ್ಗೆ 10:30 ರಿಂದ ಸುಮಾರು 2 ಗಂಟೆಗಳ ಕಾಲ ಮುರುಘಾಮಠದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದರು. ಈ ಸಮಯದಲ್ಲಿ ಮುರುಘಾಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್ಗೆ ತೆರಳಿ ಸ್ಥಳ ಮಹಜರು ನಡೆಸಲಾಗಿತ್ತು. ಸ್ಥಳ ಮಹಜರು ವೇಳೆ ಮುರುಘಾಶ್ರೀ ಬಟ್ಟೆ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 2 ಬ್ಯಾಗ್ ಳಲ್ಲಿ ತೆಗೆದುಕೊಂಡು ಹೋಗಿದ್ದರು.
ಮುರುಘಾಶ್ರೀ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪೊಲೀಸರು ಬಂಧನದಲ್ಲಿರುವ ಮುರುಘಾಶ್ರೀ ಬಾಡಿ ವಾರೆಂಟ್ ಪಡೆದು ಮೂರು ದಿನ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಪೊಲೀಸ್ರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

Leave a Reply