ಕುಡಿದು ಹೆಂಡತಿಯೊಂದಿಗೆ ಜಗಳ ಮಾಡಬೇಡ ಅಂದಿದಕ್ಕೆ ಕೊಂದೆ ಬಿಟ್ಟ!

4 years ago

ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ  ತಾಲ್ಲೂಕಿನ ಬಸ್ತವಾಡ ಗ್ರಾಮದಲ್ಲಿ ಅಣ್ಣನನ್ನು ಚಾಕುವಿನಿಂದ  ಚುಚ್ಚಿ ತಮ್ಮ ಕೊಲೆಗೈದ ಘಟನೆ ನಡೆದಿದೆ.

ಕೊಲೆಯಾದ  ಅಣ್ಣನನ್ನು 40 ವರ್ಷದ ದತ್ತಾ ಕಾಂಬಳೆ ಎಂದು ಕೊಲೆಗೈದ ತಮ್ಮನನ್ನು 37 ವರ್ಷದ ಪ್ರಕಾಶ ಎಂದು ಗುರುತಿಸಲಾಗಿದೆ.

ದಿನಾಲು ಪ್ರಕಾಶ ಕುಡಿದು  ಬಂದು ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ. ಹೀಗಾಗಿ ಅಣ್ಣ ಯಾಕೆ ದಿನಾಲೂ ಕುಡಿದು ಬಂದು ಜಗಳ ಮಾಡ್ತಿಯಾ? ಎಂದು ಕೇಳಿದ್ದಾನೆ. ಇಷ್ಟಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ತಮ್ಮ ಪ್ರಕಾಶ, ಅಣ್ಣನನ್ನು ಕೊಂದಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನೂ ಈ ಘಟನೆ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

Leave a Reply